ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಗುರುವಾರ (ಡಿಸೆಂಬರ್ 24, 2020) ಭಾರೀ ಗಳಿಕೆಯೊಂದಿಗೆ ದಿನಾಂತ್ಯದ ವಹಿವಾಟು ಮುಗಿಸಿವೆ. ಸೆನ್ಸೆಕ್ಸ್ 529.36 ಪಾಯಿಂಟ್ ಮೇಲೇರಿ 46,973.54 ಪಾಯಿಂಟ್ ನೊಂದಿಗೆ ದಿನಾಂತ್ಯ ಕಂಡರೆ, ನಿಫ್ಟಿ 148.15 ಪಾಯಿಂಟ್ ಹೆಚ್ಚಳವಾಗಿ 13,749.25 ಪಾಯಿಂಟ್ ನೊಂದಿಗೆ ವ್ಯವಹಾರ ಚುಕ್ತಾಗೊಳಿಸಿದೆ.
ಬಿಎಸ್ ಇ ಎನರ್ಜಿ 2 ಪರ್ಸೆಂಟ್ ಗೂ ಹೆಚ್ಚು ಏರಿಕೆ ಕಂಡಿದೆ. ಬ್ಯಾಂಕಿಂಗ್, ಟೆಲಿಕಾಂ, ಲೋಹ, ಹಣಕಾಸು, ತೈಲ ಮತ್ತು ಅನಿಲ ಹಾಗೂ ಫಾರ್ಮಾ ಸೂಚ್ಯಂಕಗಳು ಒಂದು ಪರ್ಸೆಂಟ್ ಗೂ ಹೆಚ್ಚು ಏರಿಕೆ ಕಂಡಿವೆ. ಸೋಮವಾರದಂದು ದೊಡ್ಡ ಮಟ್ಟದಲ್ಲಿ ಕುಸಿತ ಕಂಡ ಮೇಲೆ ಷೇರು ಮಾರುಕಟ್ಟೆಯಲ್ಲಿ ಪ್ರಬಲವಾದ ಹೆಚ್ಚಳ ಕಂಡುಬಂದಿದೆ.
ಏಷ್ಯನ್ ಪೇಂಟ್ಸ್, ಬಜಾಜ್ ಆಟೋ, ಇನ್ಫೋಸಿಸ್, ಕೊಟಕ್ ಮಹೀಂದ್ರಾ ಬ್ಯಾಂಕ್, ನೆಸ್ಟ್ಲೆ ಇಂಡಿಯಾ ಮತ್ತು ಟಿಸಿಎಸ್ ಸೇರಿದಂತೆ 200ಕ್ಕೂ ಹೆಚ್ಚು ಷೇರುಗಳು 52 ವಾರಗಳ ಗರಿಷ್ಠ ಮಟ್ಟವನ್ನು ತಲುಪಿವೆ. ಮೆಜೆಸ್ಕೋ, ರಿಲಯನ್ಸ್ ಇನ್ ಫ್ರಾಸ್ಟ್ರಕ್ಚರ್, ಲೈಕಾ ಲ್ಯಾಬ್ಸ್, ಅಂಕಿತ್ ಮೆಟಲ್ ಅಂಡ್ ಪವರ್ ಹಾಗೂ ತನ್ಲಾ ಪ್ಲಾಟ್ ಫಾರ್ಮ್ ಒಳಗೊಂಡಂತೆ 330 ಷೇರುಗಳು ಇಂದಿನ ವಹಿವಾಟಿನಲ್ಲಿ ಬಿಎಸ್ ಇ ಸೂಚ್ಯಂಕದಲ್ಲಿ ಅಪ್ಪರ್ ಸರ್ಕ್ಯೂಟ್ ಮುಟ್ಟಿತು.

ನಿಫ್ಟಿಯಲ್ಲಿ ಏರಿಕೆ ಕಂಡ ಪ್ರಮುಖ ಷೇರುಗಳು ಮತ್ತು ಪರ್ಸೆಂಟ್
ಟಾಟಾ ಮೋಟಾರ್ಸ್ 3.99%
ಆಕ್ಸಿಸ್ ಬ್ಯಾಂಕ್ 3.00%
ಸನ್ ಫಾರ್ಮಾ 2.76%
ಒಎನ್ ಜಿಸಿ 2.59%
ರಿಲಯನ್ಸ್ 2.59%
ನಿಫ್ಟಿಯಲ್ಲಿ ಇಳಿಕೆ ಕಂಡ ಪ್ರಮುಖ ಷೇರುಗಳು
ಇನ್ಫೋಸಿಸ್ -1.36%
ನೆಸ್ಟ್ಲೆ 0.89%
ವಿಪ್ರೋ 0.87%
ಯುಪಿಎಲ್ -0.56%
ಗ್ರಾಸಿಮ್ -0.54%


Click it and Unblock the Notifications