ಭಾರತದ ಷೇರು ಮಾರುಕಟ್ಟೆಯಲ್ಲಿ ಶುಕ್ರವಾರ (ನವೆಂಬರ್ 13, 2020) ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಇಳಿಕೆ ಕಂಡಿವೆ. ಬೆಳಗ್ಗೆ 9.53ರ ಸುಮಾರಿಗೆ ಸೆನ್ಸೆಕ್ಸ್ 200 ಪಾಯಿಂಟ್ ಗಳ ಇಳಿಕೆ ಕಂಡಿದ್ದರೆ, ನಿಫ್ಟಿ 59 ಪಾಯಿಂಟ್ ಕುಸಿದಿದೆ. ಇನ್ನು ನಿಫ್ಟಿ ಬ್ಯಾಂಕ್ ಸೂಚ್ಯಂಕ ಕೂಡ ನಾನೂರಕ್ಕೂ ಹೆಚ್ಚು ಪಾಯಿಂಟ್ ಗಳ ಕುಸಿತ ಕಂಡಿದೆ.
ನಿಫ್ಟಿಯಲ್ಲಿ ಐಷರ್ ಮೋಟಾರ್ಸ್, ಟೈಟಾನ್ ಕಂಪೆನಿ, ಬಜಾಜ್ ಫೈನಾನ್ಸ್, ರಿಲಯನ್ಸ್ ಹಾಗೂ ಹೀರೋ ಮೋಟೋಕಾರ್ಪ್ ಕಂಪೆನಿಯ ಷೇರುಗಳು ಏರಿಕೆ ಕಂಡಿದ್ದರೆ, ಇಂಡಸ್ ಇಂಡ್ ಬ್ಯಾಂಕ್, ಟಾಟಾ ಮೋಟಾರ್ಸ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಲಾರ್ಸನ್ ಮತ್ತು ಆಕ್ಸಿಸ್ ಬ್ಯಾಂಕ್ ಷೇರುಗಳು ಇಳಿಕೆ ದಾಖಲಿಸಿವೆ.

ಇಂಡಿಯಾಬುಲ್ಸ್ ರಿಯಲ್ ಎಸ್ಟೇಟ್ ಷೇರಿನ ಬೆಲೆಯಲ್ಲಿ ಹನ್ನೊಂದು ಪರ್ಸೆಂಟ್ ಏರಿಕೆ ಆಗಿದೆ. ರಾಕೇಶ್ ಜುಂಜುನ್ ವಾಲಾ ಅವರು ಐಬಿ ರಿಯಲ್ ಎಸ್ಟೇಟ್ ನಲ್ಲಿ ಷೇರು ಖರೀದಿ ಮಾಡಿದ್ದರಿಂದ ಅದರ ಬೆಲೆಯಲ್ಲಿ ಭರ್ಜರಿ ಏರಿಕೆ ಕಂಡುಬಂದಿದೆ. ಒಟ್ಟಾರೆಯಾಗಿ ನೋಡಿದಾಗ ಜಾಗತಿಕ ಮಟ್ಟದ ಮಾರುಕಟ್ಟೆಗಳ ದುರ್ಬಲತೆಯ ಪರಿಣಾಮ ಭಾರತದ ಷೇರು ಮಾರುಕಟ್ಟೆ ಮೇಲೆ ಆಗಿದ್ದು, ಇಳಿಜಾರಿನ ಹಾದಿಯಲ್ಲಿದೆ.


Click it and Unblock the Notifications