ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಬುಧವಾರ (ನವೆಂಬರ್ 10, 2020) ಸತತ ಎಂಟನೇ ದಿನ ಏರಿಕೆ ಹಾದಿಯಲ್ಲಿದೆ. ಬೆಳಗ್ಗೆ ಹನ್ನೊಂದು ಗಂಟೆ ಸುಮಾರಿನ ವಹಿವಾಟಿನಲ್ಲಿ ಸೆನ್ಸೆಕ್ಸ್ 256.36 ಪಾಯಿಂಟ್ ಏರಿಕೆ ಕಂಡು, 43,534.01 ಪಾಯಿಂಟ್ ನೊಂದಿಗೆ ವಹಿವಾಟು ನಡೆಸುತ್ತಿತ್ತು. ಇನ್ನು ನಿಫ್ಟಿ 89.3 ಪಾಯಿಂಟ್ ಏರಿಕೆ ಕಂಡು, 12,720.40ರಲ್ಲಿ ವ್ಯವಹಾರ ನಡೆಸುತ್ತಿತ್ತು.
ನಿಫ್ಟಿ ಬ್ಯಾಂಕ್ ಸೂಚ್ಯಂಕವು 340.2 ಪಾಯಿಂಟ್ ಹೆಚ್ಚಳವಾಗಿ 28946.20 ಪಾಯಿಂಟ್ ನಲ್ಲಿದೆ. ಹೀರೋ ಮೋಟೋ ಕಾರ್ಪ್, ಹಿಂಡಾಲ್ಕೋ, ಆಕ್ಸಿಸ್ ಬ್ಯಾಂಕ್, ಬಜಾಜ್ ಫೈನಾನ್ಸ್ ಸರ್ವೀಸ್ ಹಾಗೂ ಕೊಟಕ್ ಮಹೀಂದ್ರಾ ಬ್ಯಾಂಕ್ ಷೇರುಗಳು ಕನಿಷ್ಠ ಎರಡೂವರೆ ಪರ್ಸೆಂಟ್ ಏರಿಕೆ ಕಂಡಿವೆ. ಇಂಡಸ್ ಇಂಡ್ ಬ್ಯಾಂಕ್, ರಿಲಯನ್ಸ್, ಟೈಟಾನ್, ಬ್ರಿಟಾನಿಯಾ ಹಾಗೂ ಏಷ್ಯನ್ ಪೇಂಟ್ಸ್ ಇಳಿಕೆ ಕಂಡಿವೆ.

ಈ ಹಿಂದಿನ ಸೆಷನ್ ನಲ್ಲಿ ಎಫ್ ಐಐಗಳು ನಿವ್ವಳ ಖರೀದಿದಾರರಾಗಿದ್ದರು. ಭಾರತೀಯ ಮಾರ್ಕೆಟ್ ನಲ್ಲಿ 5627 ಕೋಟಿ ರುಪಾಯಿ ತನಕ ಖರೀದಿ ಮಾಡಿದ್ದರು. ಈ ಮಧ್ಯೆ ಏಷ್ಯನ್ ಮಾರ್ಕೆಟ್ ಗಳು ಕಳೆದ ರಾತ್ರಿ ಮಿಶ್ರ ಸೆಷನ್ ಗಳನ್ನು ಕಂಡಿವೆ. ಯುಎಸ್ ಮಾರ್ಕೆಟ್ ವ್ಯವಹಾರ ಮಿಶ್ರವಾಗಿದ್ದರೆ, ಜಪಾನ್ ನಿಕೈ ಒಂದು ಪರ್ಸೆಂಟ್ ಏರಿಕೆ ಕಂಡಿತ್ತು. ಇನ್ನು ಸಿಂಗಾಪೂರ್ ಸ್ಟ್ರೈಟ್ಸ್ ಟೈಮ್ಸ್ ಹಾಗೂ ಹಾಂಕಾಂಗ್ ನ ಹ್ಯಾಂಗ್ ಸೆಂಗ್ ಇಳಿಕೆ ಕಂಡಿವೆ.


Click it and Unblock the Notifications