For Quick Alerts
ALLOW NOTIFICATIONS  
For Daily Alerts

ಷೇರು ಮಾರುಕಟ್ಟೆ ಸೂಚ್ಯಂಕ ಸೆನ್ಸೆಕ್ಸ್ 450ಕ್ಕೂ ಹೆಚ್ಚು ಪಾಯಿಂಟ್ ಕುಸಿತ

|

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಹಾಗೂ ನಿಫ್ಟಿ ಶುಕ್ರವಾರ (ಸೆಪ್ಟೆಂಬರ್ 4, 2020) ಆರಂಭದ ವಹಿವಾಟಿನಲ್ಲಿ ಭಾರೀ ಇಳಿಕೆ ಕಂಡಿವೆ. ಸೆನ್ಸೆಕ್ಸ್ 450.60 ಪಾಯಿಂಟ್ ಗಳ ಇಳಿಕೆ ಕಂಡು, 38,540.34 ಅಂಶಗಳಲ್ಲಿ ವ್ಯವಹಾರ ನಡೆಸಿದರೆ, ನಿಫ್ಟಿ ಸೂಚ್ಯಂಕವು 123.80 ಪಾಯಿಂಟ್ ಗಳ ಕುಸಿತ ಕಂಡು, 11,403.70 ಅಂಶಗಳಲ್ಲಿ ವಹಿವಾಟು ನಡೆಸಿದೆ.

ಅಮೆರಿಕದ ಡಾಲರ್ ವಿರುದ್ಧ ರುಪಾಯಿ ಮೌಲ್ಯ ಆರಂಭದಲ್ಲಿ 11 ಪೈಸೆ ಗಳಿಕೆ ಕಂಡಿದೆ. ಗುರುವಾರದಂದು 73.47 ರು.ಗೆ ಮುಕ್ತಾಯ ಕಂಡಿದ್ದ ರುಪಾಯಿ ಮೌಲ್ಯ, ಶುಕ್ರವಾರದ ಆರಂಭದಲ್ಲಿ 11 ಪೈಸೆ ಗಳಿಕೆ ಕಂಡು, ರು. 73.36ಕ್ಕೆ ವಹಿವಾಟು ನಡೆಸುತ್ತಿದೆ. ಇನ್ನು ಚಿನ್ನದ ದರವು ಏರಿಕೆ ದಾಖಲಿಸಿದೆ.

ಷೇರು ಮಾರ್ಕೆಟ್ ಸೂಚ್ಯಂಕ ಸೆನ್ಸೆಕ್ಸ್ 450 ಪಾಯಿಂಟ್ ಕುಸಿತ

ಷೇರು ಮಾರುಕಟ್ಟೆಯಲ್ಲಿ ಶುಕ್ರವಾರದಂದು ನಿಫ್ಟಿ ಬ್ಯಾಂಕ್ ಸೂಚ್ಯಂಕವು 2%ಗೂ ಹೆಚ್ಚು ಕುಸಿತ ಕಂಡಿದೆ. ನಿಫ್ಟಿ ಸೂಚ್ಯಂಕದಲ್ಲಿ ಕೊಟಕ್ ಮಹೀಂದ್ರಾ, ಯುಪಿಎಲ್, ಪವರ್ ಗ್ರಿಡ್ ಕಾರ್ಪೊರೇಷನ್, ಎಚ್ ಡಿಎಫ್ ಸಿ, ಆಕ್ಸಿಸ್ ಬ್ಯಾಂಕ್ ಷೇರುಗಳು ಪ್ರಮುಖವಾಗಿ ಇಳಿಕೆ ಕಂಡಿವೆ.

English summary

Indian Stock Market News: Sensex Plunges More Than 450 Points

Stock Market News: Sensex, nifty plunges on September 4, 2020. Here is the details.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X