2020ನೇ ಇಸವಿಯಲ್ಲಿ, ಅದರಲ್ಲೂ ವರ್ಷದ ದ್ವಿತೀಯಾರ್ಧದಲ್ಲಿ ಇನಿಷಿಯಲ್ ಪಬ್ಲಿಕ್ ಆಫರಿಂಗ್ (ಐಪಿಒ) ಅದ್ಭುತವಾದ ಪಾಲ್ಗೊಳ್ಳುವಿಕೆ ಕಂಡುಬಂತು. 2020ರಲ್ಲಿ ಸ್ಟಾಕ್ ಎಕ್ಸ್ ಚೇಂಜ್ ನಲ್ಲಿ ಮೊದಲ ಬಾರಿಗೆ ಲಿಸ್ಟ್ ಆದ 25 ಪ್ಲಸ್ ಕಂಪೆನಿಗಳು 30,000 ಕೋಟಿ ರುಪಾಯಿಗೂ ಹೆಚ್ಚು ಹಣವನ್ನು ಸಂಗ್ರಹ ಮಾಡಿವೆ.
ಷೇರು ಮಾರುಕಟ್ಟೆಯಲ್ಲಿ ಗೂಳಿ ಓಟ ಭರ್ಜರಿಯಾಗಿ ಕಾಣಿಸಿಕೊಂಡ ಮೇಲೆ ದೊಡ್ಡ ಪ್ರಮಾಣದಲ್ಲಿ ಹೂಡಿಕೆದಾರರು ಐಪಿಒ ಲಿಸ್ಟಿಂಗ್ ಲಾಭದ ಮೇಲೆ ಕಣ್ಣಿಟ್ಟರು. ಏಪ್ರಿಲ್ ನಿಂದ ಜೂನ್ ಮಧ್ಯೆ ಕೊರೊನಾ ಕಾರಣಕ್ಕೆ ಅನಿಶ್ಚಿತತೆ ಕಾಣಿಸಿಕೊಂಡಿತು. ಆದರೆ ಎಸ್ ಬಿಐ ಕಾರ್ಡ್ ಐಪಿಒ ನಂತರ ಪ್ರೈಮರಿ ಮಾರ್ಕೆಟ್ ಚಲನೆ ಕಂಡಿತು. ಜುಲೈನಿಂದ ಲಾಕ್ ಡೌನ್ ನಿರ್ಬಂಧ ತೆರವಾಗುತ್ತಾ ಬಂದಂತೆ ಇನ್ನಷ್ಟು ಹುರುಪು ಬಂದಿತು.

ಈ ವರ್ಷ ಅತಿ ಹೆಚ್ಚು ಬೇಡಿಕೆ ಪಡೆದ ಏಳು ಐಪಿಒಗಳ ಪಟ್ಟಿ ಇಲ್ಲಿದೆ:
* ಮಿಸೆಸ್ ಬೆಕ್ಟರ್ಸ್ 199.4 ಪಟ್ಟು ಹೆಚ್ಚು ಬೇಡಿಕೆ
* ಮಳಗಾಂವ್ ಡಾಕ್ ಶಿಪ್ ಬಿಲ್ಡರ್ಸ್ ಲಿಮಿಟೆಡ್ 157.4 ಪಟ್ಟು
* ಬರ್ಗರ್ ಕಿಂಗ್ ಇಂಡಿಯಾ ಲಿಮಿಟೆಡ್ 156.6 ಪಟ್ಟು
* ಹ್ಯಾಪಿಯೆಸ್ಟ್ ಮೈಂಡ್ಸ್ ಟೆಕ್ನಾಲಜೀಸ್ ಲಿಮಿಟೆಡ್ 150.98 ಪಟ್ಟು
* ಕೆಮ್ ಕಾನ್ ಸ್ಪೆಷಾಲಿಟಿ ಕೆಮಿಕಲ್ಸ್ ಲಿಮಿಟೆಡ್ 149.3 ಪಟ್ಟು
* ರೊಸ್ಸಾರಿ ಬಯೋಟೆಕ್ ಲಿಮಿಟೆಡ್ 79 ಪಟ್ಟು
* ರೂಟ್ ಮೊಬೈಲ್ ಲಿಮಿಟೆಡ್ 73 ಪಟ್ಟು


Click it and Unblock the Notifications