ಸಗಟು ಹಣದುಬ್ಬರವು ಸತತವಾಗಿ ಮೂರನೇ ತಿಂಗಳಿನಲ್ಲಿ ಇಳಿಕೆಯಾಗಿದೆ. ಜೂನ್ ತಿಂಗಳ ಸಗಟು ಹಣದುಬ್ಬರವು ಎಂಟು ವರ್ಷಗಳ ಕನಿಷ್ಠಮಟ್ಟ ಶೇಕಡ -4.12ಕ್ಕೆ ಇಳಿಕೆಯಾಗಿದೆ. ಆಹಾರ ಉತ್ಪನ್ನಗಳು, ಇಂಧನ ಮತ್ತು ಲೋಹಗಳ ಬೆಲೆಯ ಕುಸಿತದಿಂದಾಗಿ ಡಬ್ಲ್ಯೂಪಿಐ ಸುಮಾರು ಎಂಟು ವರ್ಷಗಳ ಕನಿಷ್ಠ ಮಟ್ಟಕ್ಕೆ ತಲುಪಿದೆ. ಇಂದು ಅಧಿಕೃತ ಅಂಕಿಅಂಶಗಳನ್ನು ಬಿಡುಗಡೆ ಮಾಡಲಾಗಿದೆ.
ಸಗಟು ಬೆಲೆ ಸೂಚ್ಯಂಕ (WPI) ಆಧಾರಿತ ಹಣದುಬ್ಬರವು ಮೇ ತಿಂಗಳಲ್ಲಿ (-) 3.48 ಶೇಕಡ ಮತ್ತು ಜೂನ್ 2022 ರಲ್ಲಿ ಶೇಕಡಾ 16.23 ರಷ್ಟಿತ್ತು. ಅಕ್ಟೋಬರ್ 2015 ರಲ್ಲಿ (-) 4.76 ಶೇಕಡದಲ್ಲಿತ್ತು. ರಿಟೇಲ್ ಹಣದುಬ್ಬರವು ಮೇ ತಿಂಗಳಲ್ಲಿ 4.3 ಶೇಕಡದಿಂದ ಆಗಿದ್ದು, ಜೂನ್‌ನಲ್ಲಿ ಶೇಕಡಾ 4.8 ರಷ್ಟಾಗಿದೆ. ಈ ಬಗ್ಗೆ ಅಧಿಕ ಮಾಹಿತಿ ಇಲ್ಲಿದೆ ಮುಂದೆ ಓದಿ...

"ಜೂನ್ 2023 ರಲ್ಲಿ ಹಣದುಬ್ಬರ ದರದಲ್ಲಿನ ಇಳಿಕೆಯಾಗಿದೆ. ಖನಿಜ ತೈಲಗಳು, ಆಹಾರ ಉತ್ಪನ್ನಗಳು, ಲೋಹಗಳು, ಕಚ್ಚಾ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ಜವಳಿಗಳ ಬೆಲೆಗಳಲ್ಲಿ ಕುಸಿತ ಉಂಟಾಗಿದೆ," ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.
ಮಾಹಿತಿಯ ಪ್ರಕಾರ, ಇಂಧನ ಮತ್ತು ಶಕ್ತಿಯ ಸೂಚ್ಯಂಕವು ಜೂನ್‌ನಲ್ಲಿ 12.63 ಶೇಕಡ, ಪ್ರಾಥಮಿಕ ವಸ್ತುಗಳು ಶೇಕಡ 2.87 ಮತ್ತು ತಯಾರಿಸಿದ ಉತ್ಪನ್ನಗಳು ಶೇಕಡಾ 2.71ರಷ್ಟು ಕುಸಿತಗೊಂಡಿದೆ. ಆಹಾರ ಸೂಚ್ಯಂಕ ಶೇ.1.24ರಷ್ಟು ಕುಸಿದಿದೆ. ಜೂನ್‌ನಲ್ಲಿ, ಮೇ ತಿಂಗಳಿಗೆ ಹೋಲಿಸಿದರೆ ಆಹಾರೇತರ ವಸ್ತುಗಳ ಬೆಲೆಗಳು ಶೇಕಡ 2.40 ರಷ್ಟು, ಕಚ್ಚಾ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲದ ಹಣದುಬ್ಬರ ಶೇಕಡಾ 3.01 ರಷ್ಟು ಮತ್ತು ಖನಿಜಗಳ ಬೆಲೆಗಳು ಶೇಕಡಾ 4.32 ರಷ್ಟು ಕಡಿಮೆಯಾಗಿದೆ.
ರಿಟೇಲ್ ಹಣದುಬ್ಬರ
ಭಾರತದ ರಿಟೇಲ್ ಹಣದುಬ್ಬರವು ಮೇ ತಿಂಗಳಲ್ಲಿ 25 ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿತ ಕಂಡಿದೆ. ರಿಟೇಲ್ ಹಣದುಬ್ಬರವು ಮೇ ತಿಂಗಳಿನಲ್ಲಿ ಶೇಕಡ 4.25ಕ್ಕೆ ತಲುಪಿದೆ. ಏಪ್ರಿಲ್‌ನಲ್ಲಿ ಶೇಕಡ 4.70ರಷ್ಟಿದ್ದ ರಿಟೇಲ್ ಹಣದುಬ್ಬರವು ಮೇ ತಿಂಗಳಲ್ಲಿ ಮತ್ತೆ ಕುಸಿತ ಕಂಡಿದೆ ಎಂದು ಅಂಕಿಅಂಶ ಮತ್ತು ಯೋಜನಾ ಅನುಷ್ಠಾನ ಸಚಿವಾಲಯವು ಸೋಮವಾರ ಜಾರಿ ಮಾಡಿದ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.
ಗ್ರಾಹಕ-ಬೆಲೆ ಸೂಚ್ಯಂಕ (ಸಿಪಿಐ) ಆಧಾರಿತ ಹಣದುಬ್ಬರವು ಭಾರತೀಯ ರಿಸರ್ವ್ ಬ್ಯಾಂಕ್‌ನ (ಆರ್‌ಬಿಐ) ಸಹಿಷ್ಣುತೆಯ ಮಟ್ಟ ಶೇಕಡ 2-6ಕ್ಕಿಂತ ಕಡಿಮೆ ಇದೆ. ಸತತ ಮೂರನೇ ತಿಂಗಳು ಆರ್‌ಬಿಐನ ಸಹಿಷ್ಣು ಮಟ್ಟಕ್ಕಿಂತ ಕೆಳಗಿದೆ. ಗ್ರಾಹಕ ಆಹಾರ ಬೆಲೆ ಸೂಚ್ಯಂಕ (ಸಿಎಫ್‌ಪಿಐ) ಏಪ್ರಿಲ್‌ನಲ್ಲಿ ಶೇ 3.84 ರಿಂದ ಮೇ ತಿಂಗಳಲ್ಲಿ ಶೇ 2.91 ಕ್ಕೆ ಇಳಿದಿದೆ. ಗ್ರಾಮೀಣ ಹಣದುಬ್ಬರವು ಶೇಕಡ 4.17 ರಷ್ಟಿದ್ದರೆ, ನಗರ ಹಣದುಬ್ಬರವು ಶೇಕಡ 4.27 ರಷ್ಟಿದೆ.
ಕ್ರಮವಾಗಿ ಹಣದುಬ್ಬರವು ಮೇ ತಿಂಗಳಲ್ಲಿ ಶೇಕಡ 0.51ರಲ್ಲಿ ಬದಲಾಗದೆ ಉಳಿದಿದೆ. ತರಕಾರಿಗಳ ಹಣದುಬ್ಬರ ದರವು ಮೇ ತಿಂಗಳಿನಲ್ಲಿ ಶೇಕಡ 8.1 ರಷ್ಟು ಇಳಿಕೆ ಕಂಡಿದೆ. ಆಹಾರ ಮತ್ತು ಪಾನೀಯ ಹಾಗೂ ಇಂಧನ ವಿಭಾಗಗಳ ಹಣದುಬ್ಬರ ಮಟ್ಟವು ಕ್ರಮವಾಗಿ ಶೇಕಡ 3.29 ಮತ್ತು ಶೇಕಡ 4.64 ರಷ್ಟಿದೆ. ಧಾನ್ಯಗಳಿಗೆ, ಹಣದುಬ್ಬರ ದರವು ಶೇಕಡ 13. 67ರಿಂದ ಶೇಕಡ 12.65ಕ್ಕೆ ಇಳಿಕೆಯಾಗಿದೆ.
ಆಹಾರ ಮತ್ತು ಇಂಧನ ಬೆಲೆಗಳು ಕಡಿಮೆಯಾಗಿರುವ ಕಾರಣದಿಂದಾಗಿ ಹಣದುಬ್ಬರವು ಕೂಡಾ ಕೊಂಚ ನಿಯಂತ್ರಣಕ್ಕೆ ಬರುತ್ತಿದೆ. ಇಂಧನ ಬೆಲೆಯು ಕಡಿಮೆಯಾಗುತ್ತಿದ್ದಂತೆ ಧಾನ್ಯಗಳು ಮತ್ತು ತರಕಾರಿಗಳ ಬೆಲೆಯು ಕೂಡಾ ಸುಧಾರಿಸಿ ಹಣದುಬ್ಬರ ಮಟ್ಟದಲ್ಲಿ ಕೆಳಕ್ಕೆ ಇಳಿದಿದೆ. ಎಲ್‌ಪಿಜಿ ಮತ್ತು ಸೀಮೆಎಣ್ಣೆಯ ಅಂತಾರಾಷ್ಟ್ರೀಯ ಬೆಲೆಗಳಲ್ಲಿ ತೀವ್ರ ಕುಸಿತದಿಂದಾಗಿ ಮೇ ತಿಂಗಳಿನಲ್ಲಿ ಇಂಧನದ ಹಣದುಬ್ಬರವು ಕಡಿಮೆಯಾಗಿದೆ.


Click it and Unblock the Notifications