ಜಾಗತಿಕ ಷೇರು ಪೇಟೆಯಲ್ಲಿ ಮಿಶ್ರ ಸೂಚನೆ ಹಿನ್ನೆಲೆಯಲ್ಲಿ, ಮಾರುಕಟ್ಟೆ ಫ್ಲಾಟ್ ಆಗಿ ತೆರೆದಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 28 ಪಾಯಿಂಟ್ಸ್ ಏರಿಕೆಗೊಂಡಿದೆ. ರಾಷ್ಟ್ರೀಯ ಷೇರುಪೇಟೆ ನಿಫ್ಟಿ ಕೂಡ ಹೆಚ್ಚಾಗಿದೆ.
ಬಿಎಸ್‌ಇ ಸೂಚ್ಯಂಕ 27.90 ಪಾಯಿಂಟ್ಸ್ ಅಥವಾ ಶೇಕಡಾ 0.05ರಷ್ಟು ಹೆಚ್ಚಳಗೊಂಡು 60,163.68 ಪಾಯಿಂಟ್ಸ್ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 15.90 ಪಾಯಿಂಟ್ಸ್ ಅಥವಾ ಶೇಕಡಾ 0.09ರಷ್ಟು 17961.90 ಪಾಯಿಂಟ್ಸ್ ಮುಟ್ಟಿದೆ.
ದಿನದ ವಹಿವಾಟು ಆರಂಭದಲ್ಲಿ 1667 ಷೇರುಗಳು ಏರಿಕೆಗೊಂಡರೆ, 1120 ಷೇರುಗಳು ಕುಸಿದವು ಮತ್ತು 120 ಷೇರುಗಳ ಮೌಲ್ಯ ಯಾವುದೇ ಬದಲಾವಣೆ ಆಗಿಲ್ಲ.
ಏರಿಕೆಗೊಂಡ ಪ್ರಮುಖ ಷೇರುಗಳು
ಟಾಟಾ ಮೋಟಾರ್ಸ್ ನ ಷೇರು ರೂ. 424.30 ಕ್ಕೆ ಪ್ರಾರಂಭವಾಯಿತು, 9 ರೂ. ಏರಿಕೆಗೊಂಡಿಎ. ಕೋಲ್ ಇಂಡಿಯಾದ ಷೇರು ಸುಮಾರು ರೂ 2 ಗಳಿಕೆಯೊಂದಿಗೆ ರೂ 199.10 ರಲ್ಲಿ ಪ್ರಾರಂಭವಾಯಿತು. ಹಿಂಡಾಲ್ಕೊದ ಷೇರು ರೂ. 495.25 ರಲ್ಲಿ 8 ರೂ. ಗಳಿಕೆಯೊಂದಿಗೆ ಪ್ರಾರಂಭವಾಯಿತು. ಎನ್‌ಟಿಪಿಸಿಯ ಷೇರುಗಳು 146.00 ರೂ.ಗಳಲ್ಲಿ ಆರಂಭವಾಗಿದ್ದು ಸುಮಾರು 1 ರೂ., ಐಒಸಿಯ ಷೇರು ಸುಮಾರು 1 ರೂ ಗಳಿಕೆಯೊಂದಿಗೆ 131.95 ರೂ.ನಲ್ಲಿ ತೆರೆಯಿತು.
ಇಳಿಕೆಗೊಂಡ ಪ್ರಮುಖ ಷೇರುಗಳು
ಮಹೀಂದ್ರಾ & ಮಹೀಂದ್ರಾ ಷೇರುಗಳು ರೂ. 886.00 ಕ್ಕೆ ಪ್ರಾರಂಭವಾದವು, ಮಾರುತಿ ಸುಜುಕಿಯ ಷೇರು ರೂ. 60 ರಷ್ಟು ಇಳಿಕೆಯಾಗಿ 7,640.50 ಕ್ಕೆ ಪ್ರಾರಂಭವಾಯಿತು. ಐಸಿಐಸಿಐ ಬ್ಯಾಂಕಿನ ಷೇರುಗಳು ರೂ .708.30 ಕ್ಕೆ ಆರಂಭವಾಗಿದ್ದು, ರೂ. 5 ರ ಕುಸಿತಗೊಂಡಿದೆ. ಎಚ್‌ಸಿಎಲ್ ಟೆಕ್‌ನ ಷೇರುಗಳು ರೂ .1291.00 ಕ್ಕೆ ಆರಂಭವಾಗಿದ್ದು, ರೂ. 12 ರಷ್ಟು ಇಳಿಕೆಯಾಗಿದೆ. ಇಂಡಸ್‌ಇಂಡ್ ಬ್ಯಾಂಕ್‌ನ ಷೇರುಗಳು ರೂ. 1,168.45 ಕ್ಕೆ ಆರಂಭಗೊಂಡಿದ್ದು, ಸುಮಾರು ರೂ. 5 ರಷ್ಟು ಇಳಿಕೆಯಾಗಿದೆ.
ಡಾಲರ್ ಎದುರು ರೂಪಾಯಿ
ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ಇಂದು ಬಲವಾಗಿ ತೆರೆಯಿತು. ಇಂದು ಡಾಲರ್ ಎದುರು ರೂಪಾಯಿ 4 ಪೈಸೆ ಬಲದೊಂದಿಗೆ 75.32 ರೂ. ಅದೇ ಸಮಯದಲ್ಲಿ, ಸೋಮವಾರ, ರೂಪಾಯಿ ಮೌಲ್ಯವು 37 ಪೈಸೆ ಕುಸಿತ ಕಂಡಿದೆ ಮತ್ತು ಡಾಲರ್ ಎದುರು 75.36 ರೂ. ತಲುಪಿದೆ. ಡಾಲರ್‌ಗಳ ವಹಿವಾಟನ್ನು ಬಹಳ ಬುದ್ಧಿವಂತಿಕೆಯಿಂದ ಮಾಡಬೇಕಾಗಿದೆ, ಇಲ್ಲದಿದ್ದರೆ ಹೂಡಿಕೆಯು ತೊಂದರೆಗೊಳಗಾಗಬಹುದು.
ಷೇರಿನಲ್ಲಿ ಹೂಡಿಕೆ ಮಾಡುವುದು ಹೇಗೆ?
ಒಂದು ವೇಳೆ ಷೇರು ಮಾರುಕಟ್ಟೆಯಲ್ಲಿ ನೀವು ಹೂಡಿಕೆ ಮಾಡುವ ಬಯಕೆ ಇದ್ದರೆ, ಮೊದಲು ಸ್ಟಾಕ್ ಬ್ರೋಕರ್‌ನೊಂದಿಗೆ ಡಿಮ್ಯಾಟ್ ಮತ್ತು ಟ್ರೇಡಿಂಗ್ ಖಾತೆಯನ್ನು ತೆರೆಯಬೇಕು. ಷೇರುಗಳನ್ನು ನೇರವಾಗಿ ಷೇರು ವಿನಿಮಯ ಕೇಂದ್ರದಿಂದ ಖರೀದಿಸಲು ಸಾಧ್ಯವಿಲ್ಲ. ಡಿಮ್ಯಾಟ್ ಮತ್ತು ಟ್ರೇಡಿಂಗ್ ಖಾತೆಯನ್ನು ತೆರೆಯಲು ಪ್ಯಾನ್, ಆಧಾರ್ ಮತ್ತು ಬ್ಯಾಂಕ್ ಖಾತೆ ಅಗತ್ಯವಿದೆ. ನೀವು ಈ ದಾಖಲೆಗಳನ್ನು ಹೊಂದಿದ್ದರೆ, ನೀವು ಸುಲಭವಾಗಿ ಬ್ರೋಕರ್‌ನೊಂದಿಗೆ ಖಾತೆಯನ್ನು ತೆರೆಯಬಹುದು ಮತ್ತು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಬಹುದು.
ವಹಿವಾಟು ಅಂತ್ಯದಲ್ಲಿ ಲಾಭಗಳಿಕೆ
ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 148.53 ಪಾಯಿಂಟ್‌ಗಳು ಅಥವಾ ಶೇಕಡಾ 0.25ರಷ್ಟು ಏರಿಕೆಯಾಗಿ 60,284.31 ಕ್ಕೆ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 46.00 ಪಾಯಿಂಟ್‌ಗಳು ಅಥವಾ ಶೇಕಡಾ 0.26ರಷ್ಟು ಹೆಚ್ಚಾಗಿ 17,992.00 ಪಾಯಿಂಟ್ಸ್‌ಗೆ ತಲುಪಿದೆ.
ದಿನದ ವಹಿವಾಟು ಅಂತ್ಯದಲ್ಲಿ ಸುಮಾರು 1664 ಷೇರುಗಳು ಏರಿಕೆಗೊಂಡಿದೆ, 1483 ಷೇರುಗಳು ಕುಸಿದಿವೆ ಮತ್ತು 115 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
ಟೈಟಾನ್ ಕಂಪನಿ, ಬಜಾಜ್ ಆಟೋ, ಬಜಾಜ್ ಫಿನ್‌ಸರ್ವ್, ಎಸ್‌ಬಿಐ ಮತ್ತು ಹಿಂಡಾಲ್ಕೊ ನಿಫ್ಟಿಯಲ್ಲಿ ಪ್ರಮುಖ ಲಾಭ ಗಳಿಸಿದ ಷೇರುಗಳಾಗಿದ್ದು, ಎಚ್‌ಸಿಎಲ್ ಟೆಕ್ನಾಲಜೀಸ್, ಎಚ್‌ಡಿಎಫ್‌ಸಿ ಲೈಫ್, ಕೋಲ್ ಇಂಡಿಯಾ, ಟೆಕ್ ಮಹೀಂದ್ರಾ ಮತ್ತು ಶ್ರೀ ಸಿಮೆಂಟ್ ಇಳಿಕೆಗೊಂಡಿವೆ.
ಆಟೋ, ಎಫ್‌ಎಂಸಿಜಿ, ಮೆಟಲ್ ಮತ್ತು ಪಿಎಸ್‌ಯು ಬ್ಯಾಂಕ್ ಸೂಚ್ಯಂಕಗಳು 1 ರಿಂದ 3 ಪ್ರತಿಶತ ಏರಿಕೆಯಾಗಿದ್ದು, ಐಟಿ ಸೂಚ್ಯಂಕವು ಸುಮಾರು ಶೇಕಡಾ 1ರಷ್ಟು ಇಳಿಕೆಯಾಗಿವೆ. ಬಿಎಸ್‌ಇ ಸ್ಮಾಲ್‌ಕ್ಯಾಪ್ ಮತ್ತು ಮಿಡ್‌ಕ್ಯಾಪ್ ಸೂಚ್ಯಂಕಗಳು ಹಸಿರು ಬಣ್ಣದಲ್ಲಿ ಕೊನೆಗೊಂಡಿವೆ.


Click it and Unblock the Notifications