ಜಾಗತಿಕ ಮಿಶ್ರ ಸಕಾರಾತ್ಮಕ ಸೂಚನೆಗಳ ಹಿನ್ನೆಲೆಯಲ್ಲಿ ಭಾರತೀಯ ಷೇರುಪೇಟೆ ಶುಕ್ರವಾರ ಹಸಿರು ಬಣ್ಣದಲ್ಲಿ ವಹಿವಾಟು ಆರಂಭಿಸಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 101 ಪಾಯಿಂಟ್ಸ್ ಏರಿಕೆಗೊಂಡಿದ್ದು, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 37 ಪಾಯಿಂಟ್ಸ್ ಹೆಚ್ಚಳಗೊಂಡಿದೆ.
ಬೆಳಿಗ್ಗೆ 9.16ಕ್ಕೆ ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಶೇಕಡಾ 0.19ರಷ್ಟು ಅಥವಾ 101.62 ಪಾಯಿಂಟ್ಸ್ ಏರಿಕೆಗೊಂಡು 52,938.83 ಪಾಯಿಂಟ್ಸ್ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ ಶೇಕಡಾ 0.24ರಷ್ಟು ಅಥವಾ 37.40 ಪಾಯಿಂಟ್ಸ್ ಹೆಚ್ಚಾಗಿ 15861.40 ಪಾಯಿಂಟ್ಸ್ ಮುಟ್ಟಿದೆ.

ದಿನದ ವಹಿವಾಟು ಅಂತ್ಯಕ್ಕೆ 1585 ಷೇರುಗಳು ಏರಿಕೆಗೊಂಡರೆ, 412 ಷೇರುಗಳು ಕುಸಿದಿವೆ ಮತ್ತು 69 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
ಏರಿಕೆಗೊಂಡ ಷೇರುಗಳು:
ಅಲ್ಟ್ರಾಟೆಕ್ ಸಿಮೆಂಟ್‌ನ ಷೇರು 141 ರೂ.ಗಳ ಏರಿಕೆ ಕಂಡು 7,599.95 ರೂ., ಜೆಎಸ್‌ಡಬ್ಲ್ಯು ಸ್ಟೀಲ್‌ನ ಷೇರುಗಳು 7 ರೂ.ಗಳ ಲಾಭದೊಂದಿಗೆ 723.05 ರೂ., ಸುಮಾರು 5 ರೂ.ಗಳ ಲಾಭದೊಂದಿಗೆ ಬಿಪಿಸಿಎಲ್ ಷೇರು 465.50 ರೂ., ಬಜಾಜ್ ಆಟೋ ಷೇರುಗಳು 35 ರೂ.ಗಳ ಏರಿಕೆ ಕಂಡು 3,888.30 ರೂ., ಟೈಟಾನ್ ಕಂಪನಿಯ ಷೇರು 17 ರೂ. ಹೆಚ್ಚಾಗಿ 1,718.30 ರೂ.ಗೆ ಪ್ರಾರಂಭವಾಯಿತು.
ಇಳಿಕೆಗೊಂಡ ಷೇರುಗಳು:
ಟೆಕ್ ಮಹೀಂದ್ರಾ ಷೇರುಗಳು ಸುಮಾರು 25 ರೂ.ಗಳಷ್ಟು ಇಳಿಕೆಯಾಗಿ 1,123.15 ರೂ., ಟಾಟಾ ಮೋಟಾರ್ಸ್‌ನ ಷೇರುಗಳು ಸುಮಾರು 2 ರೂ.ಗಳಷ್ಟು ಇಳಿಕೆಯಾಗಿ 301.05 ರೂ., ಯುಪಿಎಲ್ ಷೇರು ಸುಮಾರು 4 ರೂ. ಇಳಿಕೆಗೊಂಡು 824.00 ರೂ.ಗೆ ಪ್ರಾರಂಭವಾಯಿತು, ಲಾರ್ಸೆನ್ ಷೇರು 3 ರೂ. ಕುಸಿದು 1,639.40 ರೂ.ಗೆ ಪ್ರಾರಂಭವಾಯಿತು, ಐಸಿಐಸಿಐ ಬ್ಯಾಂಕಿನ ಷೇರುಗಳು ಸುಮಾರು 2 ರೂ.ಗಳಷ್ಟು ಇಳಿಕೆಯಾಗಿ 654.45 ರೂ. ತಲುಪಿದೆ.


Click it and Unblock the Notifications