For Quick Alerts
ALLOW NOTIFICATIONS  
For Daily Alerts

ಸೆನ್ಸೆಕ್ಸ್ 70 ಪಾಯಿಂಟ್ಸ್ ಕುಸಿತ: ನಿಫ್ಟಿ 11 ಪಾಯಿಂಟ್ಸ್ ಇಳಿಕೆ

|

ಭಾರತೀಯ ಷೇರುಪೇಟೆ ಶುಕ್ರವಾರದಂದು ಮಿಶ್ರ ಆರಂಭ ಪಡೆದಿದ್ದು, ಮುಂಬೈ ಷೇರುಪೇಟೆ ಸೆನ್ಸೆಕ್ಸ್ 70 ಪಾಯಿಂಟ್ಸ್‌ ಕುಸಿತ ಕಂಡಿದೆ. ರಾಷ್ಟ್ರೀಯ ಷೇರುಪೇಟೆ ನಿಫ್ಟಿ 11 ಪಾಯಿಂಟ್ಸ್ ಇಳಿಕೆಗೊಂಡಿದೆ.

ಬೆಳಿಗ್ಗೆ 9.15ರ ಸುಮಾರಿಗೆ ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್‌ ಶೇಕಡಾ 0.13ರಷ್ಟು ಅಥವಾ 70.40 ಪಾಯಿಂಟ್ ಕುಸಿದು 54422.44 ಪಾಯಿಂಟ್ಸ್ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ ಶೇಕಡಾ 0.07ರಷ್ಟು ಅಥವಾ 11.10 ಪಾಯಿಂಟ್ ಇಳಿಕೆಗೊಂಡು 16283.50 ಪಾಯಿಂಟ್ಸ್‌ ತಲುಪಿದೆ.

ದಿನದ ವಹಿವಾಟು ಆರಂಭದಲ್ಲಿ 1066 ಷೇರುಗಳು ಏರಿಕೆಗೊಂಡರೆ, 580 ಷೇರುಗಳು ಕುಸಿದವು ಮತ್ತು 92 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಆರ್‌ಬಿಐ ಹಣಕಾಸು ನೀತಿ ಪರಿಶೀಲನೆ

ಆರ್‌ಬಿಐ ಹಣಕಾಸು ನೀತಿ ಪರಿಶೀಲನೆ

ಇಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಹಣಕಾಸು ನೀತಿ ಪರಿಶೀಲನೆ ಹಿನ್ನಲೆಯಲ್ಲಿ ಷೇರುಗಳು ಹೆಚ್ಚು ಬದಲಾವಣೆ ಆಗದೆ ಸಮತಟ್ಟಾಗಿ ಮುಂದುವರಿದಿವೆ. ಮುಂಬೈ ಷೇರುಪೇಟೆ ಮತ್ತು ರಾಷ್ಟ್ರೀಯ ಷೇರುಪೇಟೆಗಳು ಸಮತಟ್ಟಾಗಿ ಮುಂದುವರಿದಿವೆ. ಆರ್‌ಬಿಐ ರೆಪೋ ದರವನ್ನು ಈ ಹಿಂದಿನ ಶೇಕಡಾ 4ರಷ್ಟು ಮತ್ತು ರಿವರ್ಸ್ ರೆಪೋ ದರವನ್ನು ಶೇಕಡಾ 3.35ರಷ್ಟು ಉಳಿಸಿಕೊಂಡಿದೆ. ಜೊತೆಗೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ದರ ಮುನ್ಸೂಚನೆಯನ್ನು ಪರಿಶೀಲನೆ ಮಾಡಿರುವ ಆರ್‌ಬಿಐ ಶೇ. 9.5ರಷ್ಟು ದಾಖಲಾಗಬಹುದು ಎಂದು ಅಂದಾಜಿಸಿದೆ.

ರೆಪೋ ಮತ್ತು ರಿವರ್ಸ್‌ ರೆಪೋ ದರ ಮತ್ತೆ ಬದಲಾವಣೆ ಇಲ್ಲ: ರೆಪೋ ದರ ಶೇ. 4ರಷ್ಟು ಮುಂದುವರಿಕೆರೆಪೋ ಮತ್ತು ರಿವರ್ಸ್‌ ರೆಪೋ ದರ ಮತ್ತೆ ಬದಲಾವಣೆ ಇಲ್ಲ: ರೆಪೋ ದರ ಶೇ. 4ರಷ್ಟು ಮುಂದುವರಿಕೆ

ಏರಿಕೆಗೊಂಡ ಷೇರುಗಳು:

ಏರಿಕೆಗೊಂಡ ಷೇರುಗಳು:

ಟಾಟಾ ಕನ್ಸೂಮರ್ ಷೇರು 774.40 ರಲ್ಲಿ ಆರಂಭವಾಗಿದ್ದು, ಮಹೀಂದ್ರಾ & ಮಹೀಂದ್ರಾ ಷೇರು 765.70 ರೂಪಾಯಿಗೆ ಏರಿಕೆಗೊಂಡಿದೆ. ಅಲ್ಟ್ರಾಟೆಕ್ ಸಿಮೆಂಟ್ ನ ಷೇರು 40 ರಷ್ಟು ಏರಿಕೆಯಾಗಿ 7,699.00 ರೂ.ನಲ್ಲಿ ಆರಂಭವಾಯಿತು. ಸನ್ ಫಾರ್ಮಾ ಷೇರುಗಳು ಸುಮಾರು 5 ರೂಪಾಯಿ ಗಳಿಕೆಯೊಂದಿಗೆ 791.00 ರಲ್ಲಿ ಆರಂಭವಾಗಿದ್ದು, ಇಂಡಸ್‌ಇಂಡ್ ಬ್ಯಾಂಕ್ ಷೇರುಗಳು ರೂ. 8 ರಷ್ಟು ಏರಿಕೆಯಾಗಿ 1,005.80 ರೂ. ತಲುಪಿದೆ.

ಇಳಿಕೆಗೊಂಡ ಷೇರುಗಳು:

ಇಳಿಕೆಗೊಂಡ ಷೇರುಗಳು:

ಸಿಪ್ಲಾ ಷೇರು 931.90 ರೂಪಾಯಿಗೆ ಆರಂಭವಾಗಿದ್ದು, ಭಾರ್ತಿ ಏರ್‌ಟೆಲ್ ಷೇರುಗಳು 594.90 ರೂಪಾಯಿಗೆ ಪ್ರಾರಂಭವಾದವು, ಆಕ್ಸಿಸ್ ಬ್ಯಾಂಕಿನ ಷೇರುಗಳು 745.35 ಕ್ಕೆ ಕುಸಿದಿದ್ದು, ಎಚ್‌ಡಿಎಫ್‌ಸಿ ಬ್ಯಾಂಕ್‌ನ ಷೇರುಗಳು ಸುಮಾರು ರೂ. 6 ರಷ್ಟು ಇಳಿಕೆಯಾಗಿ 1,478.65 ರೂಪಾಯಿಗೆ ತಲುಪಿದೆ.

ಡಾಲರ್ ಎದುರು ರೂಪಾಯಿ ಬಲ

ಡಾಲರ್ ಎದುರು ರೂಪಾಯಿ ಬಲ

ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ಇಂದು ಬಲವಾಗಿ ತೆರೆಯಿತು. ಇಂದು ಡಾಲರ್ ಎದುರು ರೂಪಾಯಿ 7 ಪೈಸೆ ಬಲದೊಂದಿಗೆ 74.09 ರೂ. ಅದೇ ಸಮಯದಲ್ಲಿ, ರೂಪಾಯಿ ಗುರುವಾರ ಡಾಲರ್ ಎದುರು 2 ಪೈಸೆ ಬಲದೊಂದಿಗೆ 74.16 ರೂ. ಡಾಲರ್‌ಗಳ ವಹಿವಾಟನ್ನು ಬಹಳ ಬುದ್ಧಿವಂತಿಕೆಯಿಂದ ಮಾಡಬೇಕಾಗಿದೆ, ಇಲ್ಲದಿದ್ದರೆ ಹೂಡಿಕೆಯು ತೊಂದರೆಗೊಳಗಾಗಬಹುದು.

ರೂಪಾಯಿ ಮೌಲ್ಯ ಹೇಗೆ ನಿರ್ಧರಿಸಲಾಗುತ್ತದೆ?

ರೂಪಾಯಿ ಮೌಲ್ಯ ಹೇಗೆ ನಿರ್ಧರಿಸಲಾಗುತ್ತದೆ?

ರೂಪಾಯಿ ಮೌಲ್ಯವನ್ನು ಅದರ ಬೇಡಿಕೆ ಮತ್ತು ಪೂರೈಕೆಯಿಂದ ಡಾಲರ್ ವಿರುದ್ಧ ನಿರ್ಧರಿಸಲಾಗುತ್ತದೆ. ಅದೇ ಸಮಯದಲ್ಲಿ, ದೇಶದ ಆಮದು ಮತ್ತು ರಫ್ತು ಕೂಡ ಅದರ ಮೇಲೆ ಪ್ರಭಾವ ಬೀರುತ್ತದೆ. ಪ್ರತಿಯೊಂದು ದೇಶವೂ ತನ್ನದೇ ಆದ ವಿದೇಶಿ ವಿನಿಮಯ ಸಂಗ್ರಹವನ್ನು ನಿರ್ವಹಿಸುತ್ತದೆ. ಇದರೊಂದಿಗೆ ಅವರು ದೇಶಕ್ಕೆ ಆಮದು ಮಾಡಿದ ಸರಕುಗಳಿಗೆ ಪಾವತಿಸುತ್ತಾರೆ. ಪ್ರತಿ ವಾರ ರಿಸರ್ವ್ ಬ್ಯಾಂಕ್ ಅದಕ್ಕೆ ಸಂಬಂಧಿಸಿದ ಡೇಟಾವನ್ನು ಬಿಡುಗಡೆ ಮಾಡುತ್ತದೆ. ವಿದೇಶಿ ವಿನಿಮಯ ಮೀಸಲುಗಳ ಸ್ಥಾನ ಏನು, ಮತ್ತು ಆ ಸಮಯದಲ್ಲಿ ದೇಶದಲ್ಲಿ ಡಾಲರ್‌ಗಳ ಬೇಡಿಕೆ ಏನು, ಇದು ರೂಪಾಯಿ ಬಲ ಅಥವಾ ದೌರ್ಬಲ್ಯವನ್ನೂ ನಿರ್ಧರಿಸುತ್ತದೆ

English summary

Indices Trade Flat: Sensex Down 70 Points

Sensex was down 70.40 points or 0.13% at 54422.44, and the Nifty was down 11.10 points or 0.07% at 16283.50
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X