ಸೆನ್ಸೆಕ್ಸ್ 85 ಪಾಯಿಂಟ್ಸ್ ಕುಸಿತ: ನಿಫ್ಟಿ ಕೂಡ ಇಳಿಕೆ

ಭಾರತೀಯ ಷೇರುಪೇಟೆ ಸೆನ್ಸೆಕ್ಸ್ ಗುರುವಾರ ಆರಂಭಿಕ ವಹಿವಾಟಿನಲ್ಲಿ ನಕಾರಾತ್ಮಕ ವಹಿವಾಟಿನ ಆರಂಭದ ಬಳಿಕ ಕೊಂಚ ಚೇತರಿಕೆಯ ಭರವಸೆ ಮೂಡಿಸಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 46 ಪಾಯಿಂಟ್ಸ್ ಕುಸಿದರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ ಕೂಡ ಇಳಿಕೆಗೊಂಡಿದೆ.

ಬೆಳಿಗ್ಗೆ 10 ಗಂಟೆಗೆ ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಶೇ. 0.16ರಷ್ಟು ಅಥವಾ 85.13 ಪಾಯಿಂಟ್ಸ್ ಇಳಿಕೆಗೊಂಡು 54284.64 ಪಾಯಿಂಟ್ಸ್‌ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 25.85 ಪಾಯಿಂಟ್ಸ್ ಅಥವಾ ಶೇಕಡಾ 0.16ರಷ್ಟು ಕುಸಿದು 16232.95 ಪಾಯಿಂಟ್ಸ್‌ ಮುಟ್ಟಿದೆ.

ಆರಂಭಿಕ ವಹಿವಾಟಿನಲ್ಲಿ ಸುಮಾರು 1245 ಷೇರುಗಳು ಏರಿಕೆಗೊಂಡರೆ, 784 ಷೇರುಗಳು ಕುಸಿದಿವೆ ಮತ್ತು 85 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಏರಿಕೆಗೊಂಡ ಷೇರುಗಳು:

ಏರಿಕೆಗೊಂಡ ಷೇರುಗಳು:

ಭಾರ್ತಿ ಏರ್‌ಟೆಲ್‌ನ ಷೇರುಗಳು ರಷ್ಟು ಏರಿಕೆಯಾಗಿ 583.50 ರೂಪಾಯಿಗೆ ತಲುಪಿದೆ. ಎಸ್‌ಬಿಐ ಲೈಫ್‌ನ ಷೇರು 13 ರೂಪಾಯಿ ಹೆಚ್ಚಾಗಿ 1,150.00 ರೂಪಾಯಿ ಮಟ್ಟದಲ್ಲಿ ಪ್ರಾರಂಭಗಿದೆ. ಈಚರ್ ಮೋಟಾರ್ಸ್ ಷೇರುಗಳು 29 ರೂಪಾಯಿ ಹೆಚ್ಚಾಗಿ 2,670.45 ಕ್ಕೆ ಪ್ರಾರಂಭವಾಗಿದೆ. ಟೆಕ್ ಮಹೀಂದ್ರಾ ಷೇರುಗಳು 12 ರೂಪಾಯಿ ಏರಿಕೆಗೊಂಡು 1228.00 ಕ್ಕೆ ಪ್ರಾರಂಭವಾಗಿದೆ. ದೇವಿ ಲ್ಯಾಬ್ಸ್ನ ಷೇರುಗಳು ಶೇ. 300 ರಷ್ಟು ಏರಿಕೆಯೊಂದಿಗೆ 5,002.90 ಕ್ಕೆ ಪ್ರಾರಂಭವಾಯಿತು.

ಇಳಿಕೆಗೊಂಡ ಷೇರುಗಳು:

ಇಳಿಕೆಗೊಂಡ ಷೇರುಗಳು:

ಇಂಡಸ್ಇಂಡ್ ಬ್ಯಾಂಕ್ ಷೇರುಗಳು 18 ರೂಪಾಯಿ ಇಳಿಕೆಗೊಂಡು 1002.70 ಕ್ಕೆ ಆರಂಭಗೊಂಡಿದೆ. ಟಾಟಾ ಮೋಟಾರ್ಸ್ ಷೇರುಗಳು 4 ರೂ. ಪ್ರಾರಂಭಗೊಂಡು 294.10 ಕ್ಕೆ ಪ್ರಾರಂಭವಾಗಿದೆ. ಒಎನ್ ಜಿಸಿ ಷೇರುಗಳು 116.05 ರೂಪಾಯಿಗೆ ಆರಂಭವಾಗಿದ್ದು, ಐಒಸಿಯ ಷೇರು 104.20 ರೂ.ನಲ್ಲಿ ಆರಂಭವಾಯಿತು. ಮಾರುತಿ ಸುಜುಕಿಯ ಷೇರು ಸುಮಾರು 56 ರೂಪಾಯಿ ಇಳಿಕೆಯಾಗಿ 7,046.55 ರೂಪಾಯಿಗೆ ಆರಂಭವಾಯಿತು.

ವೊಡಾಫೋನ್ ಐಡಿಯಾ ಷೇರು ಭಾರೀ ಕುಸಿತ

ವೊಡಾಫೋನ್ ಐಡಿಯಾ ಷೇರು ಭಾರೀ ಕುಸಿತ

ವೊಡಾಫೋನ್ ಐಡಿಯಾ(ವಿಐಎಲ್) ಷೇರುಗಳ ಕಳೆದ ಎರಡು ದಿನಗಳ ವಹಿವಾಟಿನಲ್ಲಿ ಸುಮಾರು ಶೇಕಡಾ 30ರಷ್ಟು ಕುಸಿತಗೊಂಡಿದೆ. ಆಗಸ್ಟ್ 5 ರ ಬೆಳಗಿನ ವಹಿವಾಟಿನಲ್ಲಿ ಷೇರಿನ ಬೆಲೆಯು ಕ್ರ್ಯಾಶ್ ಆಗುತ್ತಲೇ ಇತ್ತು ಮತ್ತು 0.60 ರೂಪಾಯಿ ಅಥವಾ ಶೇಕಡ 9.95ರಷ್ಟು ಕಡಿಮೆಯಾಗಿದೆ. ಈ ಮೂಲಕ ಕಳೆದ ಎರಡು ದಿನಗಳಲ್ಲಿ ವಿಐಎಲ್ ಷೇರು ಸುಮಾರು 30 ಪ್ರತಿಶತದಷ್ಟು ಕುಸಿದಿದೆ.

ಸಾವಿರಾರು ಕೋಟಿ ರೂಪಾಯಿಯ ಸಾಲದ ಬೇಗೆಯಲ್ಲಿ ಬೇಯುತ್ತಿರುವ ವೊಡಾಫೋನ್ ಐಡಿಯಾ ಲಿಮಿಟೆಡ್‌ (ವಿಐಎಲ್‌) ಕಂಪನಿಯ ಷೇರುಗಳನ್ನು ಸರ್ಕಾರಕ್ಕೆ ವರ್ಗಾವಣೆ ಮಾಡುವುದಾಗಿ ಆದಿತ್ಯ ಬಿರ್ಲಾ ಸಮೂಹದ ಅಧ್ಯಕ್ಷ ಕುಮಾರಮಂಗಲಂ ಬಿರ್ಲಾ ಆಫರ್ ನೀಡಿದ್ದಾರೆ ಎಂಬ ಸುದ್ದಿ ಹೊರಬಿದ್ದ ಬಳಿಕ ವಿಐಎಲ್‌ ಷೇರುಗಳು ಕುಸಿಯಲಾರಂಭಿಸಿದೆ.

ಅದರಲ್ಲೂ ಕುಮಾರಮಂಗಲಂ ಬಿರ್ಲಾ ವಿಐಎಲ್‌ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲಿದ್ದಾರೆ ಎಂಬ ಸುದ್ದಿ ಹೊರಬಿದ್ದ ಬಳಿಕ ಷೇರುಗಳು ಮತ್ತಷ್ಟು ಕುಸಿಯಲಾರಂಭಿಸಿದ್ದು, ಎನ್‌ಎಸ್‌ಇನಲ್ಲಿ 5.45 ರೂಪಾಯಿಗೆ ತಲುಪಿದೆ.

ಜೂನ್‌ 7ರಂದು ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಗೆ ಬರೆದ ಪತ್ರದಲ್ಲಿ ಬಿರ್ಲಾ ಅವರು ಈ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಅಧಿಕೃತ ಅಂಕಿ-ಅಂಶಗಳ ಪ್ರಕಾರ ವಿಐಎಲ್‌ ಕಂಪನಿಯು ಹೊಂದಾಣಿಕೆಯ ಮಾಡಿದ ಒಟ್ಟು ಆದಾಯ (AGR) ರೂಪದಲ್ಲಿ ಕೇಂದ್ರ ಸರ್ಕಾರಕ್ಕೆ 7,854.37 ಕೋಟಿ ರೂಪಾಯಿ ಪಾವತಿಸಿದ್ದು, ಇನ್ನೂ 50,399.63 ಕೋಟಿ ಬಾಕಿ ಇದೆ.

 

ರೂಪಾಯಿ ಮೌಲ್ಯ

ರೂಪಾಯಿ ಮೌಲ್ಯ

ದೇಶೀಯ ಇಕ್ವಿಟಿ ಮಾರುಕಟ್ಟೆಯಲ್ಲಿ ಕಂಡುಬರುವ ಏರಿಳಿತದ ವಹಿವಾಟಿನ ನಡುವೆ ಭಾರತೀಯ ರೂಪಾಯಿ ಗುರುವಾರ ಪ್ರತಿ ಡಾಲರ್‌ಗೆ 74.16 ರಷ್ಟಿದೆ. ಆರ್‌ಬಿಐನ ಹಣಕಾಸು ನೀತಿಯ ಮುಂದೆ ರೂಪಾಯಿ 74.20 ಮತ್ತು 74.70 ರ ನಡುವೆ ವಹಿವಾಟು ನಡೆಸುವ ಸಾಧ್ಯತೆಯಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+