ಭಾರತೀಯ ಷೇರುಪೇಟೆ ಶುಕ್ರವಾರ ಫ್ಲಾಟ್ ಆಗಿ ಮಾರುಕಟ್ಟೆ ತೆರೆದಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ ಸೆನ್ಸೆಕ್ಸ್ 125 ಪಾಯಿಂಟ್ಸ್ ಏರಿಕೆಗೊಂಡರೆ, ನಿಫ್ಟಿ 36 ಪಾಯಿಂಟ್ಸ್ ಹೆಚ್ಚಳವಾಗಿದೆ.
ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಶೇಕಡಾ 0.24ರಷ್ಟು ಅಥವಾ 125.38 ಪಾಯಿಂಟ್ಸ್ ಏರಿಕೆಗೊಂಡು 52778.45 ಪಾಯಿಂಟ್ಸ್ ಮುಟ್ಟಿದ್ದರೆ, ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ ಶೇ. 0.23ರಷ್ಟು ಅಥವಾ 36.2 ಪಾಯಿಂಟ್ಸ್ ಹೆಚ್ಚಾಗಿ 15814.62 ಪಾಯಿಂಟ್ಸ್ ತಲುಪಿದೆ.
ಆರಂಭಿಕ ವಹಿವಾಟಿನಲ್ಲಿ 1368 ಷೇರುಗಳು ಏರಿಕೆಗೊಂಡರೆ, 652 ಷೇರುಗಳು ಕುಸಿದವು ಮತ್ತು 77 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಏರಿಕೆಗೊಂಡ ಷೇರುಗಳು:
ಮಹೀಂದ್ರಾ ಷೇರು ಸುಮಾರು 53 ರೂ. ಹೆಚ್ಚಾಗಿ 1181.10 ರೂಪಾಯಿಗೆ ಆರಂಭಗೊಂಡಿದೆ, ಪವರ್ ಗ್ರಿಡ್ ಕಾರ್ಪೊರೇಶನ್ ಷೇರುಗಳು ರೂ. 3 ರಷ್ಟು ಏರಿಕೆಯಾಗಿ ರೂ .169.90 ಕ್ಕೆ ಆರಂಭವಾಯಿತು. ಟಾಟಾ ಮೋಟಾರ್ಸ್‌ನ ಷೇರು ಸುಮಾರು 2 ರೂ.ಗಳ ಲಾಭದೊಂದಿಗೆ 295.35 ರೂ., ಹೆಚ್ ಡಿ ಎಫ್ ಸಿ ಷೇರುಗಳು 25 ರೂಪಾಯಿಗಳ ಏರಿಕೆಯೊಂದಿಗೆ 2,439.35 ರೂ, ಎಚ್‌ಸಿಎಲ್ ಟೆಕ್‌ನ ಷೇರುಗಳು 10 ರೂ ಗಳಿಕೆಯೊಂದಿಗೆ 1,017.30 ಕ್ಕೆ ಪ್ರಾರಂಭವಾಯಿತು.
ಇಳಿಕೆಗೊಂಡ ಷೇರುಗಳು:
ಎಸ್‌ಬಿಐ ಲೈಫ್‌ನ ಷೇರುಗಳು ಸುಮಾರು 16 ರೂ.ಗಳಷ್ಟು ಇಳಿಕೆಯಾಗಿ 1,112.75 ರೂ., ಗ್ರೇಸಿಮ್ ಷೇರು 12 ರೂಪಾಯಿ ಇಳಿಕೆಯಾಗಿ 1532.90 ರೂಪಾಯಿಗೆ ತಲುಪಿದೆ. ಟಾಟಾ ಸ್ಟೀಲ್ ನ ಷೇರುಗಳು 15 ರೂಪಾಯಿಗಳಷ್ಟು ಕಡಿಮೆಯಾಗಿ 1443.85 ರೂಪಾಯಿಗೆ ಪ್ರಾರಂಭವಾಗಿದೆ. ಆಕ್ಸಿಸ್ ಬ್ಯಾಂಕಿನ ಷೇರುಗಳು ಸುಮಾರು 3 ರೂ.ಗಳಷ್ಟು ಇಳಿಕೆಯಾಗಿ 714.40 ರೂ., ಹಿಂಡಾಲ್ಕೊ ಷೇರು ಸುಮಾರು 4 ರೂ. ಕುಸಿದು 454.40ಕ್ಕೆ ಆರಂಭಗೊಂಡಿತು.


Click it and Unblock the Notifications