For Quick Alerts
ALLOW NOTIFICATIONS  
For Daily Alerts

ಸೆನ್ಸೆಕ್ಸ್ 282 ಪಾಯಿಂಟ್ಸ್ ಜಿಗಿತ: ನಿಫ್ಟಿ 72 ಪಾಯಿಂಟ್ಸ್ ಏರಿಕೆ

|

ಭಾರತೀಯ ಷೇರುಪೇಟೆ ಮಂಗಳವಾರವೂ ಭರ್ಜರಿ ಆರಂಭದೊಂದಿಗೆ ಸಕಾರಾತ್ಮಕ ಆರಂಭ ಪಡೆದಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 282 ಪಾಯಿಂಟ್ಸ್ ಏರಿಕೆಗೊಂಡರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 72 ಪಾಯಿಂಟ್ಸ್ ಜಿಗಿತಗೊಂಡಿದೆ.

 

ಬೆಳಿಗ್ಗೆ 10 ಗಂಟೆ ಸುಮಾರಿಗೆ ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಶೇಕಡಾ 0.53ರಷ್ಟು ಅಥವಾ 282.78 ಪಾಯಿಂಟ್ಸ್ ಹೆಚ್ಚಳಗೊಂಡು 53233.41 ಪಾಯಿಂಟ್ಸ್‌ ತಲುಪಿದೆ. ಎನ್‌ಎಸ್ಇ ಸೂಚ್ಯಂಕ ನಿಫ್ಟಿ ಶೇಕಡಾ 0.46ರಷ್ಟು ಅಥವಾ 72.85 ಪಾಯಿಂಟ್ಸ್ ಏರಿಕೆಗೊಂಡು 15958.00 ಪಾಯಿಂಟ್ಸ್ ಮುಟ್ಟಿದೆ.

ಬಿಎಸ್‌ಇಯಲ್ಲಿ ಒಟ್ಟು 2,491 ಕಂಪನಿಗಳಲ್ಲಿ ವಹಿವಾಟು ಪ್ರಾರಂಭವಾಗಿದ್ದು, ಅದರಲ್ಲಿ 1,759 ಷೇರುಗಳು ಏರಿಕೆಗೊಂಡರೆ, 661 ಕುಸಿತದೊಂದಿಗೆ ತೆರೆಯಲ್ಪಟ್ಟವು. ಅದೇ ಸಮಯದಲ್ಲಿ, 71 ಕಂಪನಿಗಳ ಷೇರು ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಸೆನ್ಸೆಕ್ಸ್ 282 ಪಾಯಿಂಟ್ಸ್ ಜಿಗಿತ: ನಿಫ್ಟಿ 72 ಪಾಯಿಂಟ್ಸ್ ಏರಿಕೆ

ಆಗಸ್ಟ್ 3 ರಂದು ಟಾಟಾ ಮೋಟಾರ್ಸ್ ಷೇರಿನ ಬೆಲೆಯು ಶೇಕಡಾ 1 ರಷ್ಟು ಏರಿಕೆಯಾಗಿದ್ದು, ಕಂಪನಿಯು ತನ್ನ ಪ್ರಯಾಣಿಕ ವಾಹನಗಳ ಬೆಲೆಯನ್ನು ಹೆಚ್ಚಿಸಿದೆ. ''ಆಗಸ್ಟ್ 3 ರಿಂದ ಜಾರಿಗೆ ಬರುವಂತೆ, ತನ್ನ ಪ್ರಯಾಣಿಕ ವಾಹನಗಳ ಬೆಲೆಯನ್ನು ಸರಾಸರಿ ಶೇಕಡಾ 0.8ರಷ್ಟು ಹೆಚ್ಚಿಸುವುದಾಗಿ ಘೋಷಿಸಿದ್ದು, ವೇರಿಯಂಟ್ ಮತ್ತು ಮಾದರಿಯನ್ನು ಅವಲಂಬಿಸಿದೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

ಜುಲೈನಲ್ಲಿ ಮಾರುತಿ, ಟಾಟಾ, ಹ್ಯುಂಡೈ ಕಾರುಗಳ ಭರ್ಜರಿ ಮಾರಾಟ

ಇನ್ನು ತ್ರೈಮಾಸಿಕ ಗಳಿಕೆಯಲ್ಲಿ ಕಂಪನಿಯ ನಿವ್ವಳ ನಷ್ಟ ಹೆಚ್ಚಾದ ಬಳಿಕ, ಶ್ರೀ ರೇಣುಕಾ ಶುಗರ್ಸ್ ಷೇರಿನ ಬೆಲೆ ಶೇಕಡಾ 5ರಷ್ಟು ಕಡಿಮೆಯಾಗಿದ್ದು ಸರ್ಕ್ಯೂಟ್ ನಲ್ಲಿ ಲಾಕ್ ಮಾಡಲಾಗಿದೆ. ಕಂಪನಿಯು ಒಂದು ವರ್ಷದ ಹಿಂದಿನ ಅವಧಿಯಲ್ಲಿ 35.3 ಕೋಟಿ ನಷ್ಟದ ವಿರುದ್ಧ ಜೂನ್ 2021 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ 241 ಕೋಟಿ ರೂಪಾಯಿ ನಿವ್ವಳ ನಷ್ಟವನ್ನು ದಾಖಲಿಸಿದೆ. ಕಂಪನಿಯ ಆದಾಯ 1310.7 ಕೋಟಿ ರೂಪಾಯಿಗೆಗೆ ಹೋಲಿಸಿದರೆ 829.5 ಕೋಟಿ ರೂಪಾಯಿಗೆ ಇಳಿಕೆಯಾಗಿದೆ.

RBL ಬ್ಯಾಂಕ್ ಜೂನ್ ತ್ರೈಮಾಸಿಕ ಗಳಿಕೆಯನ್ನು ಘೋಷಿಸಿದ ನಂತರ ಷೇರಿನ ಬೆಲೆಯು ಶೇಕಡಾ 2ರಷ್ಟು ಕುಸಿದಿದೆ. ಕಂಪನಿಯು ಜೂನ್ ತ್ರೈಮಾಸಿಕದಲ್ಲಿ 459.47 ಕೋಟಿ ರೂಪಾಯಿ ನಷ್ಟವನ್ನು ವರದಿ ಮಾಡಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಬ್ಯಾಂಕ್ 141 ಕೋಟಿ ಲಾಭವನ್ನು ಹೊಂದಿದ್ದು, ಭವಿಷ್ಯದ ಸಾಲದ ಹಿನ್ನಡೆಗೆ ಮೀಸಲಿಟ್ಟ ಹಣವನ್ನು ಸುಮಾರು ಮೂರು ಪಟ್ಟು ಹೆಚ್ಚಿಸಿದೆ.

 

ಏರಿಕೆಗೊಂಡ ಷೇರುಗಳು:

ಏಷ್ಯನ್‌ ಪೇಂಟ್ಸ್ ನ ಷೇರುಗಳು ರೂ. 64 ರಷ್ಟು ಏರಿಕೆಯಾಗಿ 3,038.00 ರೂ., ಎಚ್‌ಡಿಎಫ್‌ಸಿ ಷೇರುಗಳು ರೂ. 47 ರಷ್ಟು ಏರಿಕೆಯಾಗಿ 2,509.30 ರೂ., ಪವರ್ ಗ್ರಿಡ್ ಕಾರ್ಪೊರೇಶನ್ ಷೇರುಗಳು ರೂ. 3 ರಷ್ಟು ಏರಿಕೆಯಾಗಿದ್ದು, ರೂ .174.10 ಮಟ್ಟದಲ್ಲಿ ಪ್ರಾರಂಭವಾಯಿತು. ಅದಾನಿ ಪೋರ್ಟ್ಸ್ ಷೇರುಗಳು 170 ರೂ. ಲಾಭದೊಂದಿಗೆ 702.90 ಕ್ಕೆ ಆರಂಭವಾಯಿತು. ಟೈಟಾನ್ ಕಂಪನಿಯ ಷೇರು 21 ರೂಪಾಯಿ ಹೆಚ್ಚಾಗಿದ್ದು 1792.05 ರೂಪಾಯಿಗೆ ಪ್ರಾರಂಭವಾಯಿತು.

ಇಳಿಕೆಗೊಂಡ ಷೇರುಗಳು:
ಗ್ರೇಸಿಂನ ಷೇರುಗಳು 42 ರೂ. ರಷ್ಟು ಇಳಿಕೆಯಾಗಿ 1,549.90 ರೂ.ನಲ್ಲಿ ಆರಂಭವಾಯಿತು. ಜೆಎಸ್‌ಡಬ್ಲ್ಯೂ ಸ್ಟೀಲ್‌ನ ಷೇರುಗಳು ಸುಮಾರು 6 ರೂ. ಇಳಿಕೆಗೊಂಡು 741.15 ರಲ್ಲಿ ಪ್ರಾರಂಭವಾದವು. ಒಎನ್ ಜಿಸಿ ಷೇರುಗಳು ಸುಮಾರು 1 ರೂ. ಕುಸಿದು 116.30 ರೂ.ನಲ್ಲಿ ಆರಂಭವಾಗಿದೆ. ಬಜಾಜ್ ಆಟೋ ಷೇರುಗಳು 25 ರೂಪಾಯಿ ಇಳಿಕೆಯಾಗಿ 3,816.70 ರೂ.ನಲ್ಲಿ ಆರಂಭವಾಯಿತು. ಎಚ್‌ಸಿಎಲ್ ಟೆಕ್‌ನ ಷೇರುಗಳು ಸುಮಾರು ರೂ. 5 ರಷ್ಟು ಇಳಿಕೆಯಾಗಿ 1,030.60 ರೂಪಾಯಿಗೆ ಆರಂಭವಾಗಿದೆ.

ದೇಶೀಯ ಇಕ್ವಿಟಿ ಮಾರಾಟದ ಮಧ್ಯೆ ಮಂಗಳವಾರ ಭಾರತೀಯ ರೂಪಾಯಿ ಪ್ರತಿ ಡಾಲರ್‌ಗೆ 74.26 ರಷ್ಟಿತ್ತು. ಆಗಸ್ಟ್ 2 ರಂದು, ಶುಕ್ರವಾರದ ಮುಕ್ತಾಯವಾದ 74.41 ರೊಂದಿಗೆ ರೂಪಾಯಿ ಪ್ರತಿ ಡಾಲರ್‌ಗೆ 74.33 ಕ್ಕೆ ಏರಿತು.

English summary

Indices Trade Near Record High: Sensex Jumps 282 Points

Sensex was up 282.78 points or 0.53% at 53233.41, and the Nifty was up 72.85 points or 0.46% at 15958.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X