ಬೆಂಗಳೂರು, ಮಾರ್ಚ್ 30: ಇಂಡಿಗೋ ವಿಮಾನಯಾನ ಸಂಸ್ಥೆ ಬೆಂಗಳೂರು ಮತ್ತು ಬಾಲಿಯ ರಾಜಧಾನಿ ಡೆನ್‌ಪಾಸರ್ ನಡುವೆ ದೈನಂದಿನ ನೇರ ವಿಮಾನಯಾನವನ್ನು ಪ್ರಾರಂಭಿಸಿದೆ.
ಜಕಾರ್ತಾದ ನಂತರ ಬಾಲಿ ಈಗ ಇಂಡಿಗೋದ ಇಂಡೋನೇಷಿಯಾದ ಎರಡನೇ ತಾಣವಾಗಿದೆ. ಹೊಸ ವಿಮಾನಯಾನ ಸೇವೆ ಬಾಲಿಗೆ ಭೇಟಿ ನೀಡುವ ಭಾರತೀಯ ಪ್ರವಾಸಿಗರಿಗೆ ಅನುಕೂಲವಾಗುವ ಸಾಧ್ಯತೆ ಇದೆ ಎಂದು ಕಂಪೆನಿ ತಿಳಿಸಿದೆ.

6ಇ 1605 ಸಂಖ್ಯೆಯ ವಿಮಾನವು ದಿನ ಬೆಳಗ್ಗೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ 12.50 ಕ್ಕೆ ಹೊರಟು 10.20 ಕ್ಕೆ ಡೆನ್‌ಪಾಸರ್‌ಗೆ ಆಗಮಿಸಲಿದೆ. ಹಿಂದಿರುಗುವ ವಿಮಾನ 6E 1606 ಡೆನ್‌ಪಾಸರ್‌ನಿಂದ ಬೆಳಿಗ್ಗೆ 11.20 ಕ್ಕೆ ಹೊರಟು ಮಧ್ಯಾಹ್ನ 3.15 ಕ್ಕೆ ಬೆಂಗಳೂರಿಗೆ ಆಗಮಿಸುತ್ತದೆ.
ಇಂಡಿಗೋದ ಸೇಲ್ಸ್ ಗ್ಲೋಬಲ್ ಹೆಡ್ ವಿನಯ್ ಮಲ್ಹೋತ್ರಾ, ಬೆಂಗಳೂರು ಬಾಲಿ ನಡುವೆ ವಿಮಾನಯಾನವು ಭಾರತ ಮತ್ತು ಇಂಡೋನೇಷ್ಯಾ ನಡುವಿನ ಸಂಬಂಧಗಳನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ ಮತ್ತು ಸಂಭಾವ್ಯ ವ್ಯಾಪಾರ ಸಹಯೋಗಗಳನ್ನು ಹೆಚ್ಚಿಸುತ್ತದೆ" ಎಂದು ಹೇಳಿದ್ದಾರೆ.
ಡೆನ್‌ಪಾಸರ್ ನಲ್ಲಿ ಐತಿಹಾಸಿಕ ಮತ್ತು ಸಾಂಸ್ಕೃತಿಕ ತಾಣಗಳು, ದೇವಾಲಯಗಳು, ವಸ್ತುಸಂಗ್ರಹಾಲಯಗಳು ಮತ್ತು ಮಾರುಕಟ್ಟೆಗಳಿಗೆ ಹೆಸರುವಾಸಿಯಾಗಿದೆ. ಇದು ಬಾಲಿಗೆ ಮುಖ್ಯ ಗೇಟ್‌ವೇ ಆಗಿ ಕಾರ್ಯನಿರ್ವಹಿಸುತ್ತದೆ. ದ್ವೀಪದ ವಿವಿಧ ಸ್ಥಳಗಳನ್ನು ಸಂಪರ್ಕಿಸುತ್ತದೆ. ಇಂಡಿಗೋ ನೆಟ್‌ವರ್ಕ್‌ನಲ್ಲಿ ಇದು 33ನೇ ಅಂತರರಾಷ್ಟ್ರೀಯ ಮತ್ತು 119 ನೇ ಒಟ್ಟಾರೆ ತಾಣವಾಗಿದೆ. ಇಂಡಿಗೋ ವಿಮಾನಯಾನವು 2023 ರಲ್ಲಿ ಜಕಾರ್ತಾದಿಂದ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ.


Click it and Unblock the Notifications