ಭಾರತದ ಮಾತ್ರವಲ್ಲ ಜಾಗತಿಕವಾಗಿ ಹಣದುಬ್ಬರವು ಭಾರೀ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ. ಮುಖ್ಯವಾಗಿ ಭಾರತದಲ್ಲಿ ಹಣದುಬ್ಬರವು ಮತ್ತೆ ಏರಿಕೆ ಕಾಣುತ್ತಿದೆ. ಎಲ್ಲ ಅಗತ್ಯ ವಸ್ತುಗಳ ದರವು ಏರಿಕೆಯಾಗುತ್ತಿದೆ. ಅದರಲ್ಲೂ ಪ್ರಮುಖವಾಗಿ ಟೊಮೆಟೊ ದರವು ಗಗನಕ್ಕೆ ಏರಿದೆ. ಈ ನಡುವೆ ಡೊಮಿನೋಸ್ ವಿಶ್ವದಲ್ಲೇ ಅತೀ ಅಗ್ಗವಾದ ಡೊಮಿನೋಸ್ ಪಿಜ್ಜಾವನ್ನು ಭಾರತದಲ್ಲಿ ಆರಂಭ ಮಾಡಿದೆ.
ಈ ಹಣದುಬ್ಬರದ ನಡುವೆ ಯಾವುದೇ ಆಹಾರವನ್ನು ನಾವು ಹೊಟೇಲ್ ರೆಸ್ಟೊರೆಂಟ್‌ಗಳಲ್ಲಿ ಸವಿಯುವುದು ಜೇಬಿಗೆ ದೊಡ್ಡ ಹೊರೆಯಾಗುತ್ತದೆ. ನಾವು ಇಷ್ಟಪಟ್ಟು ಯಾವುದೇ ಆಹಾರವನ್ನು ಸೇವನೆ ಮಾಡಬೇಕಾದರೂ ಹಣಕಾಸಿನ ಲೆಕ್ಕಾಚಾರ ಮಾಡಬೇಕಾದಂತಹ ಸ್ಥಿತಿ ಪ್ರಸ್ತುತ ಹಣದುಬ್ಬರದಿಂದ ಬಳಲುತ್ತಿರುವ ನಮ್ಮ ದೇಶದಲ್ಲಿದೆ. ಈ ನಡುವೆ ನಮಗೆ ಬಜೆಟ್ ಪ್ರಿಯ, ಅತೀ ಅಗ್ಗವಾದ ಪಿಜ್ಜಾವನ್ನು ಡೊಮಿನೋಸ್ ಪರಿಚಯಿಸಿದೆ.

ಡೊಮಿನೋಸ್‌ನ ಅಗ್ಗದ ಪಿಜ್ಜಾ ಎಷ್ಟು ರೂಪಾಯಿಗೆ?
ಅಮೆರಿಕಾದ ಹೊರಭಾಗದಲ್ಲಿ ಅತೀ ದೊಡ್ಡ ಮಾರುಕಟ್ಟೆಯಲ್ಲಿ ಡೊಮಿನೋಸ್ ಭಾರತದಲ್ಲಿ ಹೊಂದಿದೆ. ಭಾರತವು ಡೊಮಿನೋಸ್‌ನ ನಂಬರ್ 1 ಮಾರುಕಟ್ಟೆಯಾಗಿದೆ. ಭಾರತದಲ್ಲಿ ಡೊಮಿನೋಸ್ ಪಿಜ್ಜಾವು ಬರೀ 49 ರೂಪಾಯಿಗೆ (0.60 ಡಾಲರ್) ಲಭ್ಯವಾಗುತ್ತದೆ. ಪ್ರಸ್ತುತ ದೇಶದಲ್ಲಿ ಹಣದುಬ್ಬರವು ಅಧಿಕವಾಗುತ್ತಿದೆ. ಸಂಸ್ಥೆಗಳ ಲಾಭವು ಕಡಿಮೆಯಾಗುತ್ತಿದೆ. ಗ್ರಾಹಕರು ಕಡಿಮೆಯಾಗುತ್ತಾ ಸಾಗುತ್ತಾರೆ ಎಂದು ಫ್ರಾಂಚೈಸಿಯ ಸಿಇಒ ಸಮೀರ್ ಖೇತರ್ಪಾಲ್ ತಿಳಿಸಿದ್ದಾರೆ.
ಸಂಸ್ಥೆಯು ಈ ಬೆಲೆಯಲ್ಲಿನ ಕಡಿತವನ್ನು ಮಾಡಲು ಮುಂದಾಗಿದೆ. ತುಳಸಿ ಮತ್ತು ಪಾರ್ಸ್ಲಿಯನ್ನು ಹೊಂದಿರುವ ಸುಮಾರು 7 ಇಂಚಿನ ಪಿಜ್ಜಾವನ್ನು ಈಗ ಕಡಿಮೆ ಬೆಲೆಯಲ್ಲಿ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ. "ನೀವು ಡೊಮಿನೋಸ್ ಸ್ಟೋರ್‌ಗೆ ಬನ್ನಿ ಅಥವಾ ಅಪ್ಲಿಕೇಶನ್ ತೆರೆಯಿರಿ, ನಿಮಗೆ ಅಲ್ಲಿ 49 ರೂಪಾಯಿಯ ಪಿಜ್ಜಾ ಲಭ್ಯವಿದೆ," ಎಂದು ಹೇಳಿದ ಸಿಇಒ ಇದೇ ಸಂದರ್ಭದಲ್ಲಿ "ಗ್ರಾಹಕರು ಬೆಲೆ ಏರಿಕೆ ಕಾರಣ ಡೊಮಿನೋಸ್ ಪಿಜ್ಜಾ ತಿನ್ನುವುದನ್ನು ಕಡಿಮೆ ಮಾಡುತ್ತಿದ್ದಾರೆ. ಸ್ಪರ್ಧೆಯೂ ಕೂಡಾ ಇದೆ," ಎಂದು ಹೇಳಿದ್ದಾರೆ.
ಇನ್ನು ಶಾಂಘೈನಲ್ಲಿ ಡೊಮಿನೋಸ್‌ನ ಅತೀ ಕಡಿಮೆ ದರವು ಪಿಜ್ಜಾ ಬೆಲೆಯು 3.80 ಡಾಲರ್ ಆಗಿದೆ. ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಕಡಿಮೆ ಎಂದರೆ ಪಿಜ್ಜಾ ಬೆಲೆ 12 ಡಾಲರ್ ಆಗಿದೆ. ಈ ನಡುವೆ ಭಾರತದಲ್ಲಿಯೇ ಅತೀ ಕಡಿಮೆ ದರಕ್ಕೆ ಪಿಜ್ಜಾವನ್ನು ನೀಡಲಾಗುತ್ತಿದೆ. ಪ್ರಸ್ತುತ ಡೊಮಿನೋಸ್ ಸುಮಾರು 1816 ಸ್ಟೋರ್‌ಗಳನ್ನು ಭಾರತದಲ್ಲಿ ಹೊಂದಿದೆ. ಮೊದಲ ಮೂರು ತಿಂಗಳ ಅವಧಿಯಲ್ಲಿ ಈ ಹಣದುಬ್ಬರದಿಂದಾಗಿ ಡೊಮಿನೋಸ್ ಲಾಭವು ಶೇಕಡ 70ರಷ್ಟು ಕುಸಿತ ಕಂಡಿದೆ. ಈಗ ಮತ್ತೆ ಲಾಭ ಪಡೆಯುವ ಉದ್ದೇಶವನ್ನು ಡೊಮಿನೋಸ್ ಹೊಂದಿದೆ.
ಗ್ರಾಹಕರ ಜೇಬು ತೂತು!
ಡೊಮಿನೋಸ್ ಮಾತ್ರವಲ್ಲ ದೇಶದಲ್ಲಿ ಹಲವಾರು ಪಿಜ್ಜಾ, ಬರ್ಗರ್ ವಿತರಣೆ ಮಾಡುವ ಸಂಸ್ಥೆಗಳು ತಮ್ಮ ಆಹಾರ ಉತ್ಪನ್ನಗಳ ದರವನ್ನು ಕಡಿತ ಮಾಡಿದೆ. ಪಿಜ್ಜಾ ಹಟ್ 79 ರೂಪಾಯಿಗೆ ಪಿಜ್ಜಾವನ್ನು ನೀಡಿತ್ತದೆ. ಜೂನ್‌ನಲ್ಲಿ ಮೆಕ್‌ಡೋನಾಲ್ಡ್ಸ್ ಅರ್ಧ ಬೆಲೆಯಲ್ಲಿ ಮೀಲ್ ಅನ್ನು ಬಿಡುಗಡೆ ಮಾಡಿದೆ. ಇನ್ನು ಈ ಹಿಂದೆ ಡೊಮಿನೋಸ್‌ನಲ್ಲಿ ಅತೀ ಕಡಿಮೆಯ ಪಿಜ್ಜಾ 59 ರೂಪಾಯಿಯದ್ದು ಆಗಿತ್ತು. ಈಘ ಅದಕ್ಕೂ ಹತ್ತು ರೂಪಾಯಿ ಕಡಿಮೆ ಮಾಡಲಾಗುತ್ತದೆ.
ಅಧಿಕ ಪಿಜ್ಜಾ ಆರ್ಡರ್ ಮಾಡಿದ ಸಿಇಒ
ಡೊಮಿನೋಸ್ ಮಾಜಿ ಸಿಇಒ ರಿಚ್ ಅಲ್ಲಿಸಾನ್ ಹಿಂದಿನ ವರ್ಷದಿಂದ ಈ ವರ್ಷದವರೆಗೆ ಅಂದರೆ ಒಂದು ವರ್ಷದಲ್ಲಿ ಸುಮಾರು 4,000 ಡಾಲರ್ ಮೌಲ್ಯದ ಪಿಜ್ಜಾವನ್ನು ಖರೀದಿ ಮಾಡಿದ್ದು, ಇದಕ್ಕೆ ಮರುಪಾವತಿಯನ್ನು ಪಡೆದಿದ್ದಾರೆ ಎಂದು ವರದಿಯಾಗಿದೆ. 2021ರ ಸಿಇಒ ಭತ್ಯೆಯ ಅಡಿಯಲ್ಲಿ ಡೊಮಿನೋಸ್ ಮಾಜಿ ಸಿಇಒ ರಿಚ್ ಅಲ್ಲಿಸಾನ್ ವೈಯಕ್ತಿಕವಾಗಿ ಪಿಜ್ಜಾ ಖರೀದಿಗೆ 3,919 ಡಾಲರ್ ಅನ್ನು ಪಡೆದಿದ್ದಾರೆ.
ಈ ಮೊತ್ತದಲ್ಲಿ ವೈಯಕ್ತಿಕ ಜೆಟ್, ತಂಡದ ಸದಸ್ಯರ ಉಡುಗೊರೆ ಮತ್ತು ಇತರೆ ಖರ್ಚುಗಳು ಕೂಡಾ ಸೇರ್ಪಡೆಯಾಗಿದೆ. ಆದರೆ ರಿಚ್ ಅಲ್ಲಿಸಾನ್ ಪಿಜ್ಜಾಕ್ಕಾಗಿ ಪಡೆದ 3,919 ಡಾಲರ್ ಅವರ ಭಾರೀ ಪ್ರಮಾಣದ ಭತ್ಯೆಯ ಒಂದು ಸಣ್ಣ ಭಾಗವಾಗಿದೆ. ರಿಚ್ ಅಲ್ಲಿಸಾನ್ ಒಟ್ಟಾಗಿ 7,138,002 ಡಾಲರ್ ಮೊತ್ತವನ್ನು 2021ರಲ್ಲಿ ಭತ್ಯೆಯಾಗಿ ಪಡೆದಿದ್ದಾರೆ.


Click it and Unblock the Notifications