ಶಿಬುಲಾಲ್ ಕುಟುಂಬ ಸದಸ್ಯರಿಂದ 3 ದಿನದಲ್ಲಿ ಇನ್ಫೋಸಿಸ್ ನ 85 ಲಕ್ಷ ಷೇರು ಮಾರಾಟ

ಇನ್ಫೋಸಿಸ್ ಸಹಸಂಸ್ಥಾಪಕ ಎಸ್.ಡಿ. ಶಿಬುಲಾಲ್ ಕುಟುಂಬ ಸದಸ್ಯರು ಜುಲೈ 22ರಿಂದ 24ನೇ ತಾರೀಕಿನ ಮಧ್ಯೆ ಕಂಪೆನಿಯ 85 ಲಕ್ಷ ಷೇರುಗಳನ್ನು ಮಾರಾಟ ಮಾಡಿದ್ದಾರೆ ಎಂದು ಮಾಹಿತಿ ನೀಡಲಾಗಿದೆ. ಶಿಬುಲಾಲ್ ಅವರ ಮಗ ಶ್ರೇಯಸ್ 40 ಲಕ್ಷ ಷೇರುಗಳನ್ನು ಮಾರಾಟ ಮಾಡಿದ್ದಾರೆ ಎಂದು ಕಂಪೆನಿಯಿಂದ ಎಕ್ಸ್ ಚೇಂಜ್ ಗೆ ಮಾಹಿತಿ ಒದಗಿಸಲಾಗಿದೆ.

ಈ ಹಿಂದೆ ಶ್ರೇಯಸ್ ಬಳಿ ಇನ್ಫೋಸಿಸ್ ನ 0.66 ಪರ್ಸೆಂಟ್ ಷೇರಿನ ಪಾಲಿತ್ತು. ಈ ಮಾರಾಟದ ನಂತರ ಅದು 0.56 ಪರ್ಸೆಂಟ್ ಗೆ ಇಳಿದಿದೆ. ಇನ್ನು ಶಿಬುಲಾಲ್ ಅಳಿಯ ಗೌರವ್ ಮಂಚಂಡ 18 ಲಕ್ಷ ಷೇರುಗಳು (0.04%) ಹಾಗೂ ಶಿಬುಲಾಲ್ ಮೊಮ್ಮಗ ಮಿಲನ್ ಮಂಚಂಡ 15 ಲಕ್ಷ ಷೇರುಗಳು (0.03%) ಇದೇ ದಿನಾಂಕದಲ್ಲಿ ಮಾರಾಟ ಮಾಡಿದ್ದಾರೆ.

ಈ ಷೇರು ಮಾರಾಟದ ನಂತರ ಗೌರವ್ ಬಳಿ ಇನ್ಫೋಸಿಸ್ ನ ಷೇರಿನ ಪಾಲು 0.32% ಹಾಗೂ ಮಿಲನ್ ಬಳಿ 0.33% ಇದೆ. ಇನ್ನು ಶಿಬುಲಾಲ್ ಪತ್ನಿ ಕುಮಾರಿ 12 ಲಕ್ಷ ಷೇರುಗಳು (0.03%) ಮಾರಾಟ ಮಾಡಿದ್ದಾರೆ. ಈಗ ಅವರ ಬಳಿ 0.22% ಷೇರಿನ ಪಾಲು ಇದೆ.

ಶಿಬುಲಾಲ್ ಕುಟುಂಬದಿಂದ 3 ದಿನದಲ್ಲಿ ಇನ್ಫೋಸಿಸ್ 85 ಲಕ್ಷ ಷೇರು ಮಾರಾಟ

1981ರಲ್ಲಿ ಶಿಬುಲಾಲ್, ಎನ್.ಆರ್. ನಾರಾಯಣಮೂರ್ತಿ ಹಾಗೂ ಇತರ ಐದು ಮಂದಿ ಸೇರಿ ಇನ್ಫೋಸಿಸ್ ಸ್ಥಾಪಿಸಿದರು. 2011ರಿಂದ 2014ರ ಮಧ್ಯೆ ಶಿಬುಲಾಲ್ ಇನ್ಫೋಸಿಸ್ ನಲ್ಲಿ ಸಿಇಒ ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸಿದರು. ಅದಕ್ಕೂ ಮುಂಚೆ 2007ರಿಂದ 2011ರ ತನಕ ಸಿಒಒ ಆಗಿದ್ದರು.

ಇನ್ಫೋಸಿಸ್ ನ ಮತ್ತೊಬ್ಬ ಸಹಸಂಸ್ಥಾಪಕ ಕ್ರಿಸ್ ಗೋಪಾಲಕೃಷ್ಣನ್ ಅವರ ಜತೆಗೂಡಿ ಆಕ್ಸಿಲಾರ್ ವೆಂಚರ್ಸ್ ಎಂಬುದನ್ನು ಆರಂಭಿಸಿರುವ ಶಿಬುಲಾಲ್, ಸದ್ಯಕ್ಕೆ ಅದರ ಮೂಲಕ ಟೆಕ್ನಾಲಜಿ ಸ್ಟಾರ್ಟ್ ಅಪ್ ಗಳಲ್ಲಿ ಹೂಡಿಕೆ ಮಾಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+