ಇನ್ಫೋಸಿಸ್ ಸಿಬ್ಬಂದಿಯಲ್ಲಿ ಕೋಟ್ಯಧಿಪತಿಗಳ ಸಂಖ್ಯೆ 74

ಬೆಂಗಳೂರು ಮೂಲದ ಇನ್ಫೋಸಿಸ್ ಕಂಪೆನಿಯಲ್ಲಿ ಎಷ್ಟು ಸಿಬ್ಬಂದಿ ಕೋಟ್ಯಧಿಪತಿಗಳು ಇರಬಹುದು ಅಂದಾಜು ಮಾಡಿ ನೋಡೋಣ. 2019- 20ನೇ ಸಾಲಿನಲ್ಲಿ 74 ಸಿಬ್ಬಂದಿ ಕೋಟ್ಯಧಿಪತಿಗಳಿದ್ದಾರೆ. ಒಂದು ವರ್ಷದ ಹಿಂದೆ ಈ ಸಂಖ್ಯೆ 64 ಇತ್ತು. ಉಪಾಧ್ಯಕ್ಷ, ಹಿರಿಯ ಉಪಾಧ್ಯಕ್ಷ ಹುದ್ದೆಯಲ್ಲಿ ಇರುವವರ ಪೈಕಿಯೇ ಹೆಚ್ಚಿನ ಸಂಖ್ಯೆಯಲ್ಲಿ ಕೋಟ್ಯಧಿಪತಿಗಳಿದ್ದಾರೆ.

2020ರ ಆರ್ಥಿಕ ವರ್ಷದಲ್ಲಿ ಈ ಸಿಬ್ಬಂದಿಯ ವೇತನದಲ್ಲಿ ಭರ್ಜರಿ ಜಂಪ್ ಆಗಿದೆ. ಕಳೆದ ವರ್ಷಗಳಿಗೆ ಹೋಲಿಸಿದರೆ, ಈ ವರ್ಷ ಜಾಸ್ತಿ ಆಗಿರುವುದಕ್ಕೆ ಕಾರಣ ಸ್ಟಾಕ್ ಇನ್ ಸೆಂಟಿವ್. ಹೋದ ವರ್ಷ ವಿತರಣೆಯ ಘೋಷಣೆ ಮಾಡಿ, ಈ ವರ್ಷ ನೀಡಲಾಗಿದೆ. ಇದು ಇನ್ಫೋಸಿಸ್ ವಾರ್ಷಿಕ ವರದಿಯಲ್ಲಿದೆ.

ಫಿಕ್ಸೆಡ್ ಪೇ, ವೇರಿಯೆಬಲ್ ಪೇ, ನಿವೃತ್ತಿ ಅನುಕೂಲಗಳು, ಸ್ಟಾಕ್ ಆಪ್ಷನ್ ಇವೆಲ್ಲವೂ ಸೇರಿ ವೇತನ ಎಂಬ ಲೆಕ್ಕಕ್ಕೆ ಬರುತ್ತದೆ. ಇನ್ಫೋಸಿಸ್ ನಾಯಕತ್ವ ಮಟ್ಟದಲ್ಲಿ ಇರುವವರಿಗೆ ಒಟ್ಟಾರೆ ವೇತನದಲ್ಲಿ ಸ್ಥಿರವಾಗಿದೆ ಅಥವಾ ಕಡಿಮೆಯಾಗಿದೆ. ಇನ್ನು 2019-20ರಲ್ಲಿ ಯಾವುದೇ ಬಡ್ತಿಯನ್ನಂತೂ ನೀಡಿಲ್ಲ. ಮ್ಯಾನೇಜ್ ಮೆಂಟ್ ನ ಮುಖ್ಯ ಸಿಬ್ಬಂದಿಗೆ ಕಳೆದ ಆರ್ಥಿಕ ವರ್ಷದಲ್ಲಿ ವೇತನ ಹೆಚ್ಚಳ ಆಗಿಲ್ಲ.

ಇನ್ಫೋಸಿಸ್ ಸಿಬ್ಬಂದಿಯಲ್ಲಿ ಕೋಟ್ಯಧಿಪತಿಗಳ ಸಂಖ್ಯೆ 74

ಉದ್ಯೋಗಿಯ ಸರಾಸರಿ ವೇತನಕ್ಕೆ ಲೆಕ್ಕ ಹಾಕಿದರೆ ಇನ್ಫೋಸಿಸ್ ಸಿಇಒ ಸಲೀಲ್ ಪಾರೇಖ್ ಗೆ 502ರಷ್ಟು ಹಾಗೂ ಸಿಒಒ ಯು.ಬಿ. ಪ್ರವಿಣ್ ರಾವ್ ಗೆ 155ರಷ್ಟಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+