ಇತ್ತೀಚೆಗೆ ಟೆಕ್ ಉದ್ಯಮ ವಲಯದಲ್ಲಿ ಲೇಆಫ್ ಎಂಬ ಟ್ರೆಂಡ್ ಹೆಚ್ಚಾಗಿ ಆರಂಭವಾಗಿತ್ತು. ಸಾಲು ಸಾಲಾಗಿ ಟೆಕ್ ಕಂಪನಿಗಳು ಸಾಗರೋಪಾದಿಯಲ್ಲಿ ಸಾವಿರಾರು ಉದ್ಯೋಗಿಗಳನ್ನು ಕೆಲಸದಿಂದ ತಗೆದುಹಾಕಿದ್ದವು. ಇದೇ ಸಾಲಿನಲ್ಲಿ ಭಾರತದ ಎರಡನೇ ಅತಿದೊಡ್ಡ, ಬೆಂಗಳೂರು ಮೂಲದ ಐಟಿ ದೈತ್ಯ ಕಂಪನಿಯಾದ ಇನ್ಫೋಸಿಸ್ ಕೂಡ ಇತ್ತು. ಆದರೆ, ಇದೀಗ ತನ್ನ ಹಣಕಾಸು ಆರ್ಥಿಕ ವರ್ಷದ (2025) ಅಂತ್ಯದ ವೇಳೆಗೆ 15,000 ಹೊಸ ಪದವೀಧರರನ್ನು ನೇಮಕ ಮಾಡಿಕೊಂಡಿದೆ. ಈ ಮೂಲಕ ನಿರುದ್ಯೋಗಿಗಳಿಗೆ ಹೊಸ ಭರವಸೆ ಮೂಡಿಸಿದೆ.
ಹೌದು,ಇತ್ತೀಚೆಗೆ ಮೈಸೂರಿನಲ್ಲಿರುವ ಐಟಿ ದಿಗ್ಗಜ ಸಂಸ್ಥೆ ಇನ್ಫೋಸಿಸ್‌ನಲ್ಲಿ ತರಬೇತಿಗೆಂದು ಬಂದಿದ್ದ ಫ್ರೆಷರ್ಸ್ ಅಭ್ಯರ್ಥಿಗಳಲ್ಲಿ ಸುಮಾರು 700 ಮಂದಿಯನ್ನು ಏಕಾಏಕಿ ಕೆಲಸದಿಂದ ತೆಗೆದು ಹಾಕಲಾಗಿತ್ತು ಇದರಿಂದಾಗಿ ಈ ವಿಚಾರವು ತೀವು ವಿವಾದ ಸ್ವರೂಪವನ್ನು ಸಹ ಪಡೆದುಕೊಂಡಿತ್ತು.ಇನ್ಪೋಸಿಸ್ ಅಮಾನತು ದೇಶಾದ್ಯಂತ ಚರ್ಚೆಯಾಗಿತ್ತು.

ಇನ್ಫೋಸಿಸ್ ಕಂಪನಿ ನಿನ್ನೆ ( ಮೇ. 01ರಂದು ಸೋಮವಾರ) 2025 ರ ಆರ್ಥಿಕ ವರ್ಷದ ಅಂತ್ಯದ ವೇಳೆಗೆ ತನ್ನ ಕಂಪನಿಯ ಒಟ್ಟು ಉದ್ಯೋಗಿಗಳ ಸಂಖ್ಯೆ 323,578 ಎಂದು ಮಾಹಿತಿಯನ್ನು ತಿಳಿಸಿದೆ.
ಕಂಪನಿಯು ವರ್ಷದಲ್ಲಿ 15,000 ಹೊಸ ಪದವೀಧರರನ್ನು ನೇಮಿಸಿಕೊಂಡಿದೆ. ಇದರಲ್ಲಿ ಮಹಿಳೆಯರ ಜಾಗತಿಕ ಕಾರ್ಯಪಡೆಯಯ ಸಂಖ್ಯೆ ಶೇ.39 ರಷ್ಟಿದೆ. ತನ್ನ ಡಿಜಿಟಲ್ ಕೌಶಲ್ಯ ಉಪಕ್ರಮಗಳು 13.3 ಮಿಲಿಯನ್ ವ್ಯಕ್ತಿಗಳನ್ನು ತಲುಪಿವೆ ಎಂದು ಕಂಪನಿ ತಿಳಿಸಿದೆ. ಆದರೆ 9.2 ಮಿಲಿಯನ್‌ಗಿಂತಲೂ ಹೆಚ್ಚು ಕಲಿಯುವವರು ಅದರ ಪ್ರಮುಖ ಕಲಿಕಾ ವೇದಿಕೆಯಾದ ಇನ್ಫೋಸಿಸ್ ಸ್ಪ್ರಿಂಗ್‌ಬೋರ್ಡ್‌ನಿಂದ ಪ್ರಯೋಜನವನ್ನು ಕೂಡ ಪಡೆದುಕೊಂಡಿದೆ.
2026 ರ ಆರ್ಥಿಕ ವರ್ಷದಲ್ಲಿ, ಇನ್ಫೋಸಿಸ್ ಮಾರ್ಚ್ 2026 ಕ್ಕೆ ಕೊನೆಗೊಳ್ಳುವ ಹಣಕಾಸು ವರ್ಷದಲ್ಲಿ ಸ್ಥಿರ ಕರೆನ್ಸಿಯಲ್ಲಿ ಶೇ.0 ರಿಂದ ಶೇ.3 ರಷ್ಟು ಆದಾಯದ ಬೆಳವಣಿಗೆಯನ್ನು ನಿರೀಕ್ಷಿಸಿದೆ. ಇದು ಡಿಸೆಂಬರ್ ತ್ರೈಮಾಸಿಕದಲ್ಲಿ ಮಾಡಲಾದ ಶೇ. 4.5 ರಿಂದ ಶೇ. 5 ರ ಹಿಂದಿನ ಪ್ರಕ್ಷೇಪಣಕ್ಕಿಂತ ಕಡಿಮೆಯಾಗಿದೆ.
ಕಂಪನಿಯು FY26ರ ಆರ್ಥಿಕ ವರ್ಷದಲ್ಲಿ ಶೇ. 20 ಮತ್ತು ಶೇ 22 ರ ನಡುವೆ EBIT ಮಾರ್ಜಿನ್ ಅನ್ನು ನಿರೀಕ್ಷಿಸುತ್ತದೆ. ಮಾರ್ಚ್ ಅಂತ್ಯದ ತ್ರೈಮಾಸಿಕದಲ್ಲಿ, ಇನ್ಫೋಸಿಸ್ 7,033 ಕೋಟಿ ನಿವ್ವಳ ಲಾಭವನ್ನು ಗಳಿಸಿದೆ,ಅಂದಾಜು 7,278 ಕೋಟಿಗಳನ್ನು ಕಳೆದುಕೊಂಡಿದೆ ಎಂದು ವರದಿಗಳು ಆಗಿವೆ.
ಹಿಂದಿನ ತ್ರೈಮಾಸಿಕದಲ್ಲಿ 6,806 ಕೋಟಿ ಇದ್ದ ಲಾಭ ಶೇ.3.3 ರಷ್ಟು ಏರಿಕೆಯಾಗಿದೆ.ಡಾಲರ್ ಲೆಕ್ಕದಲ್ಲಿ ಆದಾಯವು ಅನುಕ್ರಮವಾಗಿ ಶೇ.4.2 ರಷ್ಟು ಕುಸಿದಿದೆ.ವಿಶ್ಲೇಷಕರು ಅಂದಾಜಿಸಿದ್ದ ಶೇ.1.4 ರಷ್ಟು ಕುಸಿತಕ್ಕಿಂತ ಇದು ತೀವ್ರವಾಗಿದೆ. ರೂಪಾಯಿ ಆದಾಯ 40,925 ಕೋಟಿಗೆ ತಲುಪಿದ್ದು, ಹಿಂದಿನ ತ್ರೈಮಾಸಿಕಕ್ಕಿಂತ ಶೇ.2 ರಷ್ಟು ಕಡಿಮೆಯಾಗಿದೆ ಮತ್ತು ನಿರೀಕ್ಷೆಗಿಂತ 42,133 ಕೋಟಿಗಿಂತ ಕಡಿಮೆಯಾಗಿದೆ.
ಮಾರ್ಚ್ ತ್ರೈಮಾಸಿಕದ EBIT 8,575 ಕೋಟಿಗಳಾಗಿದ್ದು, ಅನುಕ್ರಮವಾಗಿ ಶೇ.3.7 ರಷ್ಟು ಕಡಿಮೆಯಾಗಿದೆ ಮತ್ತು ಅಂದಾಜು ₹8,742 ಕೋಟಿಗಿಂತ ಕಡಿಮೆಯಾಗಿದೆ. ಇದನ್ನೂ ಓದಿ: ಇನ್ಫೋಸಿಸ್ ಸಿಇಒ ಸಲೀಲ್ ಪರೇಖ್ ಅವರ FY25 ಸಂಬಳ ₹80.6 ಕೋಟಿ, ಇದು ಕಂಪನಿಯ ಸರಾಸರಿಗಿಂತ 725 ಪಟ್ಟು ಹೆಚ್ಚಾಗಿದೆ.
ಫೆಬ್ರವರಿ ತಿಂಗಳ ಆರಂಭದಲ್ಲಿ ಇನ್ಫೋಸಿಸ್ ಮೈಸೂರು ಕ್ಯಾಂಪಸ್‌ನಲ್ಲಿ ಸಾಮೂಹಿಕವಾಗಿ ಅಭ್ಯರ್ಥಿಗಳನ್ನು ಅಮಾನತು ಮಾಡಿತ್ತು. ಸುಮಾರು 300ಕ್ಕೂ ಹೆಚ್ಚು ಅಭ್ಯರ್ಥಿಗಳನ್ನು ಅಮಾನತು ಮಾಡಿತ್ತು. ಇನ್ಫೋಸಿಸ್ ಕಂಪನಿ ಪ್ರಕಾರ, ಅಭ್ಯರ್ಥಿಗಳಿಗೆ ಅರ್ಹತಾ ಪರೀಕ್ಷೆ ಪಾಸ್ ಆಗಲು ಮೂರು ಅವಕಾಶ ನೀಡಲಾಗಿತ್ತು. ಆದರೆ ಮೂರರಲ್ಲೂ ಅಭ್ಯರ್ಥಿಗಳು ವಿಫಲರಾಗಿದ್ದಾರೆ. ಹೀಗಾಗಿ ಕಂಪನಿ ನಿಯಮದ ಪ್ರಕಾರ ಅಭ್ಯರ್ಥಿಗಳ ಕೆಲಸದಲ್ಲಿ ಮುಂದುವರಿಯಲು ಸಾಧ್ಯವಾಗುವುದಿಲ್ಲ ಎಂದು ಹೇಳಿಕೆಯನ್ನು ನೀಡಿತ್ತು.
ಇನ್ಫೋಸಿಸ್ ಉದ್ಯೋಗಿಗಳ ವಜಾ
ಫೆಬ್ರವರಿ ತಿಂಗಳ ಆರಂಭದಲ್ಲಿ ಇನ್ಫೋಸಿಸ್ ಮೈಸೂರು ಕ್ಯಾಂಪಸ್‌ನಲ್ಲಿ ಸಾಮೂಹಿಕವಾಗಿ ಅಭ್ಯರ್ಥಿಗಳನ್ನು ಅಮಾನತು ಮಾಡಿತ್ತು. ಸುಮಾರು 700ಕ್ಕೂ ಹೆಚ್ಚು ಅಭ್ಯರ್ಥಿಗಳನ್ನು ಅಮಾನತು ಮಾಡಿತ್ತು. ಇನ್ಫೋಸಿಸ್ ಕಂಪನಿ ಪ್ರಕಾರ, ಅಭ್ಯರ್ಥಿಗಳಿಗೆ ಅರ್ಹತಾ ಪರೀಕ್ಷೆ ಪಾಸ್ ಆಗಲು ಮೂರು ಅವಕಾಶ ನೀಡಲಾಗಿತ್ತು. ಆದರೆ ಮೂರರಲ್ಲೂ ಅಭ್ಯರ್ಥಿಗಳು ವಿಫಲರಾಗಿದ್ದಾರೆ. ಹೀಗಾಗಿ ಕಂಪನಿ ನಿಯಮದ ಪ್ರಕಾರ ಅಭ್ಯರ್ಥಿಗಳ ಕೆಲಸದಲ್ಲಿ ಮುಂದುವರಿಯಲು ಸಾಧ್ಯವಾಗುವುದಿಲ್ಲ ಎಂದು ಹೇಳಿಕೆಯನ್ನು ನೀಡಿತ್ತು.


Click it and Unblock the Notifications