ಇತ್ತೀಚೆಗೆ ಮೈಸೂರಿನಲ್ಲಿರುವ ಐಟಿ ದಿಗ್ಗಜ ಸಂಸ್ಥೆ ಇನ್ಫೋಸಿಸ್‌ನಲ್ಲಿ ತರಬೇತಿಗೆಂದು ಬಂದಿದ್ದ ಫ್ರೆಷರ್ಸ್ ಅಭ್ಯರ್ಥಿಗಳಲ್ಲಿ ಸುಮಾರು 700 ಮಂದಿಯನ್ನು ಏಕಾಏಕಿ ಕೆಲಸದಿಂದ ತೆಗೆದು ಹಾಕಲಾಗಿತ್ತು ಇದರಿಂದಾಗಿ ಈ ವಿಚಾರವು ತೀವು ವಿವಾದ ಸ್ವರೂಪವನ್ನು ಸಹ ಪಡೆದುಕೊಂಡಿತ್ತು ಆದ್ರೆ ಇದೀಗ ಇನ್ಫೋಸಿಸ್ ಮೈಸೂರು ಕ್ಯಾಂಪಸ್‌ನಲ್ಲಿ ತರಬೇತಿ ಪಡೆಯುವವರ ಸಾಮೂಹಿಕ ವಜಾಗೊಳಿಸುವಿಕೆಯಲ್ಲಿ ಮಧ್ಯಪ್ರವೇಶಿಸುವಂತೆ ಒತ್ತಾಯಿಸಿ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಕರ್ನಾಟಕ ಕಾರ್ಮಿಕ ಆಯುಕ್ತರಿಗೆ ಎರಡನೇ ಬಾರಿಗೆ ನೋಟಿಸ್ ಕಳುಹಿಸಿದ್ದಾರೆ.
ಹೌದು, ಕೇಂದ್ರ ಸರ್ಕಾರ ಈ ಮೊದಲು ಐಟಿ ನೌಕರರ ಕಲ್ಯಾಣ ಸಂಘವಾದ ಎನ್‌ಐಟಿಇಎಸ್ ದೂರಿನ ಮೇರೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಸರ್ಕಾರಕ್ಕೆ ಸೂಚನೆ ನೀಡಿತ್ತು.ಆದರೆ ಮತ್ತೆ ಮಧ್ಯಪ್ರವೇಶಿಸುವಂತೆ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಕರ್ನಾಟಕ ಕಾರ್ಮಿಕ ಆಯುಕ್ತರಿಗೆ ಎರಡನೇ ಬಾರಿಗೆ ನೋಟಿಸ್ ಕಳುಹಿಸಿದ್ದಾರೆ ಎಂದು ವರದಿಯಾಗಿದೆ.

ಈ ವಿಷಯದ ಕುರಿತು ಅರ್ಜಿ ಸಲ್ಲಿಸಿದವರಲ್ಲಿ ಪುಣೆ ಮೂಲದ ಐಟಿ ಉದ್ಯೋಗಿಗಳ ಒಕ್ಕೂಟವಾದ ನಾಸೆಂಟ್ ಇನ್ಫರ್ಮೇಷನ್ ಟೆಕ್ನಾಲಜಿ ಎಂಪ್ಲಾಯೀಸ್ ಸೆನೆಟ್ (NITES) ಸೇರಿದೆ. ಜೊತೆಗೆ ವಜಾಗೊಳಿಸಲಾದ 100 ಕ್ಕೂ ಹೆಚ್ಚು ಮಾಜಿ ಇನ್ಫೋಸಿಸ್ ತರಬೇತಿದಾರರು ಸಹ ಸೇರಿದ್ದಾರೆ. ಈ ವಿಷಯದಲ್ಲಿ ತೆಗೆದುಕೊಂಡ ಕ್ರಮಗಳ ಕುರಿತು ವಿವರವಾದ ವರದಿಯನ್ನು ಸಲ್ಲಿಸುವಂತೆ ಕೇಂದ್ರ ಕಾರ್ಮಿಕ ಸಚಿವಾಲಯವು ಕರ್ನಾಟಕ ಕಾರ್ಮಿಕ ಆಯುಕ್ತರಿಗೆ ನಿರ್ದೇಶನವನ್ನು ನೀಡಿದೆ.
ಕರ್ನಾಟಕದ ಕಾರ್ಮಿಕ ಇಲಾಖೆ ಅಧಿಕಾರಿಗಳು ಫೆಬ್ರವರಿ 13 ರಂದು ಬೆಂಗಳೂರು ಮತ್ತು ಮೈಸೂರಿನಲ್ಲಿರುವ ಇನ್ಫೋಸಿಸ್ ಕ್ಯಾಂಪಸ್‌ಗಳಿಗೆ ಭೇಟಿ ನೀಡಿ ತರಬೇತಿದಾರರ ವಜಾಗೊಳಿಸುವಿಕೆಯ ವರದಿಗಳ ನಂತರ ಪರಿಸ್ಥಿತಿಯನ್ನು ನಿರ್ಣಯಿಸಲು ಭೇಟಿ ನೀಡಿದ್ದಾರೆ ಎಂದು ವರದಿಗಳು ಆಗಿದ್ದವು. ಇದಗಿಂತ ಮುಂಚಿತವಾಗಿ ಕೇಂದ್ರ ಕಾರ್ಮಿಕ ಸಚಿವಾಲಯದಿಂದ ಕರ್ನಾಟಕ ಕಾರ್ಮಿಕ ಆಯುಕ್ತರು ಮತ್ತು ಕಾರ್ಮಿಕ ಕಾರ್ಯದರ್ಶಿಗೆ ಈ ವಿಷಯವನ್ನು ಪರಿಶೀಲಿಸಲು ಮತ್ತು ವಿವಾದವನ್ನು ಪರಿಹರಿಸಲು ತುರ್ತು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಿರ್ದೇಶಿಸುವ ಇ- ಮೇಲ್ ಸಹ ಮಾಡಲಾಗಿತ್ತು. ನಂತರ, ಕಂಪನಿಯ ಅಧಿಕಾರಿಗಳು ತಮ್ಮ ಶ್ರೇಣಿಯಲ್ಲಿ ಉತ್ತಮ ಗುಣಮಟ್ಟವನ್ನು ಕಾಯ್ದುಕೊಳ್ಳಲು ತೆಗೆದುಹಾಕುವುದು ಅಗತ್ಯ ಎಂದು ಹೇಳಿದರು.
ಮೈಸೂರು ಕ್ಯಾಂಪಸ್‌ನಲ್ಲಿ 300ಕ್ಕೂ ಹೆಚ್ಚು ಹೊಸಬರನ್ನು ನೇಮಕ ಮಾಡಿಕೊಂಡಿರುವ ಐಟಿ ಸೇವೆಗಳ ಕಂಪನಿ ಇನ್ಫೋಸಿಸ್, ತರಬೇತಿ ಪಡೆಯುವವರಿಗೆ ನಿಗದಿಯಾಗಿದ್ದ ಆಂತರಿಕ ಮೌಲ್ಯಮಾಪನಗಳನ್ನು ಸ್ವಲ್ಪ ಅವಧಿಯವರೆಗೂ ಮುಂದೂಡಿದೆ. ಇದೇ ತಿಂಗಳು (ಫೆಬ್ರವರಿ 18) ಇನ್ಫೋಸಿಸ್ ಒಂದು ವಾರ ಮುಂದೂಡಿತ್ತು.ನೇಮಕಾತಿಯ ತಯಾರಿಗಾಗಿ ಹೆಚ್ಚುನ ಸಮಯವನ್ನು ನೀಡುವ ಉದ್ದೇಶದಿಂದ ಈ ಮುಂದೂಡಿಕೆಯನ್ನು ಮಾಡಿದೆ ಎಂದು ಇನ್ಫೋಸಿಸ್ ಕಂಪನಿ ಹೇಳಿಕೆಯನ್ನು ಸಹ ನೀಡಿತು.
ಇದೇ ತಿಂಗಳು ಫೆಬ್ರವರಿ 24 ರಂದು ಇನ್ಫೋಸಿಸ್‌ನಲ್ಲಿ ನಿಗದಿಯಾಗಿದ್ದ ಕಂಪನಿಯ ಮೂರನೇ ಆಂತರಿಕ ಮೌಲ್ಯಮಾಪನವನ್ನು ಉದ್ಯೋಗಿಗಳಿಗೆ ಉತ್ತಮ ರೀತಿಯಲ್ಲಿ ಸಹಾಯ ಮಾಡುವ ಸಲುವಾಗಿ ಮುಂದೂಡಲಾಗಿದೆ ಎಂದು ಇನ್ಫೋಸಿಸ್ ಮೇಲ್‌ನಲ್ಲಿ ತಿಳಿಸಿದೆ. ಪರಿಷ್ಕೃತ ಮೌಲ್ಯಮಾಪನ ದಿನಾಂಕಗಳನ್ನು ಶೀಘ್ರದಲ್ಲೇ ಸಂಬಂಧಪಟ್ಟ ಉದ್ಯೋಗಿಗಳಿಗೆ ತಿಳಿಸಲಾಗುವುದು ಎಂದು ಐಟಿ ದೈತ್ಯ ಕಂಪನಿ ಇನ್ಫೋಸಿಸ್ ಮಾಹಿತಿಯನ್ನು ತಿಳಿಸಿದೆ.
ಇನ್ಫೋಸಿಸ್ ಕಂಪನಿಯ ಮೇಲೆ ಟೀಕೆ
ಈ ತಿಂಗಳ ಆರಂಭದಲ್ಲಿ, ಭಾರತದ ಎರಡನೇ ಅತಿದೊಡ್ಡ ಐಟಿ ಸೇವೆಗಳ ಕಂಪನಿಯಾದ ಇನ್ಫೋಸಿಸ್, ಮೈಸೂರು ಕ್ಯಾಂಪಸ್‌ನಲ್ಲಿ ಮೂಲಭೂತ ತರಬೇತಿ ಪಡೆದ ಆದರೆ ಆಂತರಿಕ ಮೌಲ್ಯಮಾಪನಗಳನ್ನು ಪೂರ್ಣಗೊಳಿಸಲು ಸಾಧ್ಯವಾಗದ 300 ಕ್ಕೂ ಹೆಚ್ಚು ಹೊಸಬರನ್ನು ವಜಾಗೊಳಿಸಿದ ನಂತರ ಟೀಕೆಯನ್ನು ಎದುರಿಸಲಾಗಿತು.
ಕಂಪನಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಐಟಿ ಉದ್ಯೋಗಿಗಳ ಸಂಘ NITES ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ತುರ್ತು ಹಸ್ತಕ್ಷೇಪವನ್ನು ಕೋರಿತ್ತು. ವಾಸ್ತವವಾಗಿ, ಇನ್ಫೋಸಿಸ್ ಮೈಸೂರು ಕ್ಯಾಂಪಸ್‌ನಲ್ಲಿರುವ ಸಭೆ ಕೊಠಡಿಗಳಿಗೆ ನೌಕರರನ್ನು ಕರೆಸಿ, "ಪರಸ್ಪರ ಬೇರ್ಪಡಿಕೆ" ಪತ್ರಗಳಿಗೆ ಸಹಿ ಹಾಕುವಂತೆ ಕೇಳಲಾಗಿದೆ ಎಂದು ನವ ಮಾಹಿತಿ ತಂತ್ರಜ್ಞಾನ ನೌಕರರ ಸೆನೆಟ್ (NITES) ಆರೋಪಿಸಿದೆ.
ಇದರ ನಡುವೆ ಇನ್ಫೋಸಿಸ್ ಮೈಸೂರು ಕ್ಯಾಂಪಸ್‌ನಲ್ಲಿ ತರಬೇತಿ ಪಡೆಯುವವರ ಸಾಮೂಹಿಕ ವಜಾಗೊಳಿಸುವಿಕೆಯಲ್ಲಿ ಮಧ್ಯಪ್ರವೇಶಿಸುವಂತೆ ಒತ್ತಾಯಿಸಿ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಕರ್ನಾಟಕ ಕಾರ್ಮಿಕ ಆಯುಕ್ತರಿಗೆ ಎರಡನೇ ಬಾರಿಗೆ ನೋಟಿಸ್ ಕಳುಹಿಸಿದ್ದಾರೆ.


Click it and Unblock the Notifications