For Quick Alerts
ALLOW NOTIFICATIONS  
For Daily Alerts

ಏರಿಕೆ ಕಂಡ ಷೇರು ಪೇಟೆಯಲ್ಲಿ ಮಿಂಚು ಹರಿಸಿದ ಇನ್ಫೋಸಿಸ್

|

ಮಾಹಿತಿ ತಂತ್ರಜ್ಞಾನ (ಐ.ಟಿ), ಫಾರ್ಮಾ ಮತ್ತು ಬ್ಯಾಂಕಿಂಗ್ ವಲಯದ ಷೇರುಗಳು ಗಳಿಕೆಯಿಂದಾಗಿ ಗುರುವಾರ (ಜುಲೈ 16, 2020) ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಹಾಗೂ ನಿಫ್ಟಿ ಸತತವಾಗಿ ಎರಡನೇ ದಿನ ಕೂಡ ಏರಿಕೆ ಕಂಡವು. ಸೆನ್ಸೆಕ್ಸ್ 419.87 ಪಾಯಿಂಟ್ ಏರಿಕೆ ಕಂಡು, ದಿನದ ಕೊನೆಗೆ 36,471.68 ಪಾಯಿಂಟ್ ನೊಂದಿಗೆ ವಹಿವಾಟು ಮುಗಿಸಿತು. ನಿಪ್ಟಿ 121.80 ಪಾಯಿಂಟ್ ಹೆಚ್ಚಳವಾಗಿ, 10,740 ಪಾಯಿಂಟ್ ನಲ್ಲಿ ವ್ಯವಹಾರ ಚುಕ್ತಾಗೊಳಿಸಿತು.

 

ಇನ್ಫೋಸಿಸ್ ಷೇರುದಾರರ ಸಂಪತ್ತಿಗೆ 1 ಗಂಟೆಯಲ್ಲಿ 50,000 ಕೋಟಿ ಸೇರ್ಪಡೆಇನ್ಫೋಸಿಸ್ ಷೇರುದಾರರ ಸಂಪತ್ತಿಗೆ 1 ಗಂಟೆಯಲ್ಲಿ 50,000 ಕೋಟಿ ಸೇರ್ಪಡೆ

ಒಟ್ಟು 1058 ಕಂಪೆನಿಯ ಷೇರುಗಳು ಏರಿಕೆ ದಾಖಲಿಸಿದರೆ, 1512 ಕಂಪೆನಿ ಷೇರುಗಳು ಕುಸಿತ ಕಂಡವು. 158 ಕಂಪೆನಿಗಳ ಷೇರಿನ ಬೆಲೆಯಲ್ಲಿ ಯಾವ ಬದಲಾವಣೆ ಕೂಡ ಆಗಲಿಲ್ಲ. ಇನ್ಫೋಸಿಸ್ ಷೇರು ಮಿಂಚು ಹರಿಸಿತು. ಬುಧವಾರದಂದು ನಿರೀಕ್ಷೆಗೂ ಮೀರಿದಂತೆ ಫಲಿತಾಂಶ ಪ್ರಕಟಿಸಿತ್ತು. ಗುರುವಾರದ ಬೆಳಗಿನ ವಹಿವಾಟಿನಲ್ಲಿ ಹದಿನೈದು ಪರ್ಸೆಂಟ್ ಗೂ ಹೆಚ್ಚಿನ ಏರಿಕೆ ಕಂಡಿತು.

 

ನಿಫ್ಟಿಯಲ್ಲಿ ಏರಿಕೆ ಕಂಡ ಪ್ರಮುಖ ಷೇರುಗಳು
ಇನ್ಫೋಸಿಸ್

ಬಿಪಿಸಿಎಲ್

ಸಿಪ್ಲಾ

ಮಹೀಂದ್ರಾ ಅಂಡ್ ಮಹೀಂದ್ರಾ

ಬ್ರಿಟಾನಿಯಾ

ಏರಿಕೆ ಕಂಡ ಷೇರು ಪೇಟೆಯಲ್ಲಿ ಮಿಂಚು ಹರಿಸಿದ ಇನ್ಫೋಸಿಸ್

ನಿಫ್ಟಿಯಲ್ಲಿ ನಷ್ಟ ಕಂಡ ಪ್ರಮುಖ ಷೇರುಗಳು
ಭಾರ್ತಿ ಇನ್ ಫ್ರಾಟೆಲ್

ಟೆಕ್ ಮಹೀಂದ್ರಾ

ಐಟಿಸಿ

ಜೀ ಎಂಟರ್ ಟೇನ್ ಮೆಂಟ್

ಐಒಸಿ

ಎಲ್ಲ ವಲಯದ ಷೇರುಗಳು ಏರಿಕೆಯಲ್ಲೇ ದಿನಾಂತ್ಯದ ವಹಿವಾಟು ಮುಗಿಸಿದವು. ಷೇರು ಮಾರುಕಟ್ಟೆ ಬಗ್ಗೆ ಹೂಡಿಕೆದಾರರು ಸಕಾರಾತ್ಮಕ ಬೆಳವಣಿಗೆಯ ನಿರೀಕ್ಷೆಯಲ್ಲಿದ್ದಾರೆ.

English summary

Infosys Leads Gain of Sensex And Nifty On July 16

Sensex and Nifty gain on July 16. Infosys leads gain. Here is the complete details.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X