ಬೆಂಗಳೂರು ಮೂಲದ ಪ್ರಮುಖ ಐಟಿ ರಫ್ತು ಕಂಪನಿ ಇನ್ಫೋಸಿಸ್ ಏಪ್ರಿಲ್ 13ರಂದು ತನ್ನ ನಾಲ್ಕನೇ ತ್ರೈಮಾಸಿಕ ವರದಿಯನ್ನು ಪ್ರಕಟಿಸಿದೆ. ಮಾರ್ಚ್ 31ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ವರ್ಷದಿಂದ ವರ್ಷಕ್ಕೆ ಲೆಕ್ಕದಲ್ಲಿ ಶೇ 12ರಷ್ಟು ಲಾಭ ಕಂಡು ಬಂದಿದ್ದರೂ, ಕಳೆದ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇ 2ರಷ್ಟು ಲಾಭ ಇಳಿಕೆಯಾಗಿದೆ. ಈ ತ್ರೈಮಾಸಿಕದಲ್ಲಿ 5,686 ಕೋಟಿ ರು ನಿವ್ವಳ ಲಾಭ ದಾಖಲಿಸಿದೆ.
ತೆರಿಗೆ ನಂತರ ಲಾಭ(PAT) 5,076 ಕೋಟಿ ರು ಬಂದಿದೆ. ಕಳೆದ ತ್ರೈಮಾಸಿಕದಲ್ಲಿ PAT 5,809 ಕೋಟಿ ರು ದಾಖಲಾಗಿತ್ತು. ಆದಾಯದ ವಿಷಯಕ್ಕೆ ಬಂದರೆ ವರ್ಷದಿಂದ ವರ್ಷಕ್ಕೆ (YoY) ಲೆಕ್ಕದಲ್ಲಿ ಶೇ 23ರಷ್ಟು ಹೆಚ್ಚು ಆದಾಯ ಗಳಿಕೆ ಹೆಚ್ಚಾಗಿದ್ದು, 32,276 ಕೋಟಿ ರು ದಾಖಲಾಗಿದೆ. ತ್ರೈಮಾಸಿಕದಲ್ಲಿ ಶೇ 1ರಷ್ಟು ಮಾತ್ರ ಆದಾಯ ಹೆಚ್ಚಳವಾಗಿದ್ದು, 26,311 ಕೋಟಿ ರು ಬಂದಿದೆ. ಅಕ್ಟೋಬರ್ -ಡಿಸೆಂಬರ್ ತ್ರೈಮಾಸಿಕದಲ್ಲಿ 31,867 ಕೋಟಿ ರು ಆದಾಯ ದಾಖಲಾಗಿತ್ತು.
ಇನ್ನು ಏಪ್ರಿಲ್ -ಮಾರ್ಚ್ 2022 ಅವಧಿಯಲ್ಲಿ ನಿವ್ವಳ ಲಾಭ 22,110 ಕೋಟಿ ರು ಇದ್ದು, 2021ರ ಆರ್ಥಿಕವರ್ಷಕ್ಕೆ ಹೋಲಿಸಿದರೆ ಶೇ 14ರಷ್ಟು ಲಾಭ ಹೆಚ್ಚಳವಾಗಿದೆ.ವಾರ್ಷಿಕ ನಿವ್ವಳ ಆದಾಯ 121,641 ಕೋಟಿ ರು ದಾಖಲಾಗಿದ್ದು, ಕಳೆದ ಆರ್ಥಿಕ ವರ್ಷದಲ್ಲಿ 100,472 ಕೋಟಿ ರು ಮಾತ್ರ ಬಂದಿತ್ತು. ಆದಾಯದಲಿ ವಾರ್ಷಿಕ ಶೇ 21ರಷ್ಟು ಹೆಚ್ಚಳ ಕಂಡು ಬಂದಿದೆ.

FY22 ರ ಕೊನೆಯಲ್ಲಿ ಕಂಪನಿಯು ತನ್ನ ರೋಲ್‌ಗಳಲ್ಲಿ 3,14,015 ಉದ್ಯೋಗಿಗಳನ್ನು ಹೊಂದಿತ್ತು. Q3FY22 ರ ಕೊನೆಯಲ್ಲಿ ಉದ್ಯೋಗಿಗಳ ಸಂಖ್ಯೆ 2,92,067 ರಷ್ಟಿದೆ. ಮಹಿಳಾ ಉದ್ಯೋಗಿಗಳು ಒಟ್ಟು ಉದ್ಯೋಗಿ ಸಾಮರ್ಥ್ಯದ 39.6 ಪ್ರತಿಶತವನ್ನು ಹೊಂದಿದ್ದಾರೆ.Q3FY22 ರ ಅವಧಿಯಲ್ಲಿ 25.5 ಶೇಕಡಾಕ್ಕೆ ಹೋಲಿಸಿದರೆ ತ್ರೈಮಾಸಿಕದಲ್ಲಿ ಕಂಪನಿಯ ಕ್ಷೀಣತೆ(attrition)ಯು 27.7 ಶೇಕಡಾಕ್ಕೆ ಏರಿದೆ.
ಡಿವಿಡೆಂಡ್
ಮಾರ್ಚ್ 31, 2022 ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ ಪ್ರತಿ ಈಕ್ವಿಟಿ ಷೇರಿಗೆ ರೂ 16/- ರ ಅಂತಿಮ ಲಾಭಾಂಶವನ್ನು ಇನ್ಫೋಸಿಸ್ ಶಿಫಾರಸು ಮಾಡಿದೆ. ಅಂತಿಮ ಲಾಭಾಂಶವನ್ನು ಪಾವತಿಸಲು ಜೂನ್ 1, 2022 ರ ದಾಖಲೆಯ ದಿನಾಂಕ ಮತ್ತು ಲಾಭಾಂಶವನ್ನು ಜೂನ್ 28, 2022 ರಂದು ಪಾವತಿಸಲಾಗುತ್ತದೆ.
ಏಪ್ರಿಲ್ 13 ರಂದು ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದಲ್ಲಿ ಇನ್ಫೋಸಿಸ್ ಷೇರು ರೂ 6.10 ರಷ್ಟು ಏರಿಕೆಯೊಂದಿಗೆ ರೂ 1,748.55 ಕ್ಕೆ ಕೊನೆಗೊಂಡಿತು. ಕಳೆದ ಒಂದು ತಿಂಗಳಲ್ಲಿ ಸ್ಟಾಕ್ 4.0 ಪ್ರತಿಶತದಷ್ಟು ಕಡಿಮೆ ವಹಿವಾಟು ನಡೆಸುತ್ತಿದೆ ಮತ್ತು ಕಳೆದ ಒಂದು ವರ್ಷದಲ್ಲಿ 25.2 ಶೇಕಡಾ ಆದಾಯವನ್ನು ಗಳಿಸಿದೆ.
ರಷ್ಯಾ ಕೇಂದ್ರ ಬಂದ್
ಇನ್ಫೋಸಿಸ್ ರಷ್ಯಾದಿಂದ ಇತರ ಜಾಗತಿಕ ವಿತರಣಾ ಕೇಂದ್ರಗಳಿಗೆ ಸೇವೆಗಳನ್ನು ಬದಲಾಯಿಸುತ್ತಿದೆ. ಇನ್ಫೋಸಿಸ್ ರಷ್ಯಾದಲ್ಲಿ 100 ಕ್ಕಿಂತ ಕಡಿಮೆ ಉದ್ಯೋಗಿಗಳನ್ನು ಹೊಂದಿದೆ.
"ಪರಿಸ್ಥಿತಿಯನ್ನು ನೋಡಿದಾಗ ನಾವು ನಮ್ಮ ವ್ಯವಹಾರ ಮತ್ತು ನಮ್ಮ ಎಲ್ಲಾ ಕೆಲಸಗಳನ್ನು ರಷ್ಯಾದಿಂದ ಹೊರಗಿನ ಕೇಂದ್ರಗಳಿಗೆ ಬದಲಾಯಿಸಲು ಪ್ರಾರಂಭಿಸಿದ್ದೇವೆ" ಎಂದು ಇನ್ಫೋಸಿಸ್ ಸಿಇಒ ಮತ್ತು ಎಂಡಿ ಸಲೀಲ್ ಪರೇಖ್ ಅವರು ರಷ್ಯಾ-ಉಕ್ರೇನ್ ಬಿಕ್ಕಟ್ಟಿನ ಪರಿಣಾಮದ ಕುರಿತು ಪ್ರಶ್ನೆಗೆ ಉತ್ತರಿಸಿದರು.


Click it and Unblock the Notifications