ರತನ್ ಟಾಟಾ ಕಾಲಿಗೆ ನಮಸ್ಕರಿಸಿದ ಇನ್ಫಿ ನಾರಾಯಣಮೂರ್ತಿ; ಫೋಟೋ ವೈರಲ್

ಇನ್ಫೋಸಿಸ್ ಸಹ ಸಂಸ್ಥಾಪಕ ಎನ್. ಆರ್. ನಾರಾಯಣ ಮೂರ್ತಿ ಅವರು ತಮ್ಮ ವಿನಯವಂತಿಕೆ ಹಾಗೂ ನಡವಳಿಕೆಯಿಂದ ಮತ್ತೆ ಸುದ್ದಿಯಲ್ಲಿ ಇದ್ದಾರೆ. ಉದ್ಯಮಿ ರತನ್ ಟಾಟಾ ಅವರ ಕಾಲಿಗೆ ನಾರಾಯಣ ಮೂರ್ತಿ ಅವರು ನಮಸ್ಕರಿಸುತ್ತಿರುವ ಭಾವಚಿತ್ರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಮುಂಬೈನಲ್ಲಿ ನಡೆದ ಟಿಐಇ ಸಮಾವೇಶದಲ್ಲಿ ಈ ಇಬ್ಬರೂ ಪಾಲ್ಗೊಂಡಿದ್ದರು. ಈ ವೇಳೆ ಜೀವಮಾನ ಸಾಧನೆಗಾಗಿ ರತನ್ ಟಾಟಾ ಅವರಿಗೆ ಸನ್ಮಾನ ಮಾಡಲಾಯಿತು. ಈ ಸನ್ಮಾನವನ್ನು ನಾರಾಯಣ ಮೂರ್ತಿ ಅವರೇ ಮಾಡಿದರು. ಅ ನಂತರ ರತನ್ ಟಾಟಾ ಅವರ ಕಾಲು ಮುಟ್ಟಿ ನಮಸ್ಕಾರ ಮಾಡಿದರು.

ನಾರಾಯಣ ಮೂರ್ತಿ ಅವರು ನಮಸ್ಕರಿಸಿದ ಫೋಟೋವನ್ನು ರತನ್ ಟಾಟಾ ತಮ್ಮ ಇನ್ ಸ್ಟಾಗ್ರಾಮ್ ಅಕೌಂಟ್ ನಲ್ಲಿ ಹಂಚಿಕೊಂಡಿದ್ದಾರೆ. "ನನ್ನ ಗೆಳೆಯರಾದ ನಾರಾಯಣ ಮೂರ್ತಿ ಅವರಿಂದ ಈ ಪ್ರಶಸ್ತಿ ಸ್ವೀಕರಿಸಿದ್ದು ಅತಿ ದೊಡ್ಡ ಗೌರವ" ಎಂಬ ಒಕ್ಕಣೆಯನ್ನು ಬರೆದುಕೊಂಡಿದ್ದಾರೆ.

ರತನ್ ಟಾಟಾ ಕಾಲಿಗೆ ನಮಸ್ಕರಿಸಿದ ಇನ್ಫಿ ನಾರಾಯಣಮೂರ್ತಿ; ಫೋಟೋ ವೈರಲ್

ಯಾವಾಗ ಈ ಫೋಟೋ ವೈರಲ್ ಆಯಿತೋ ಇಬ್ಬರ ವ್ಯಕ್ತಿತ್ವದ ಬಗ್ಗೆಯೂ ಭಾರೀ ಮೆಚ್ಚುಗೆ ಕೇಳಿಬರುತ್ತಿದೆ. ಅಂದ ಹಾಗೆ ನಾರಾಯಣ ಮೂರ್ತಿ ಅವರಿಗೆ ಎಪ್ಪತ್ಮೂರು ವರ್ಷ ವಯಸ್ಸಾದರೆ, ರತನ್ ಟಾಟಾಗೆ ಎಂಬತ್ತೆರಡು ವರ್ಷ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+