ಅಂತರರಾಷ್ಟ್ರೀಯ ತೈಲ ಬೆಲೆ 17 ವರ್ಷಗಳ ಕನಿಷ್ಠ ಮಟ್ಟಕ್ಕೆ: ದೇಶದಲ್ಲಿ ನೋ ಚೇಂಜ್

ಅಂತರರಾಷ್ಟ್ರೀಯ ತೈಲ ಬೆಲೆಯು ಸೋಮವಾರದಂದು 17 ವರ್ಷಗಳ ಕನಿಷ್ಠ ಮಟ್ಟಕ್ಕೆ ತಲುಪಿದೆ. ಆದರೆ ಭಾರತದಲ್ಲಿ ಪೆಟ್ರೋಲ್- ಡೀಸೆಲ್ ಚಿಲ್ಲರೆ ಮಾರಾಟ ಬೆಲೆಯಲ್ಲಿ ತೈಲ ಕಂಪೆನಿಗಳು ಯಾವುದೇ ಬದಲಾವಣೆ ಮಾಡಿಲ್ಲ. ಕೇಂದ್ರ ಸರ್ಕಾರದಿಂದ ಏರಿಕೆ ಮಾಡಿದ ಅಬಕಾರಿ ಸುಂಕವನ್ನು ಹೊಂದಾಣಿಕೆ ಮಾಡುವ ಕಾರಣಕ್ಕೆ ಬೆಲೆಯಲ್ಲಿ ಯಾವ ಇಳಿಕೆಯನ್ನೂ ಮಾಡುತ್ತಿಲ್ಲ.

ಬ್ರೆಂಟ್ ಕಚ್ಚಾ ತೈಲದದ ಫ್ಯೂಚರ್ ಬೆಲೆಯು ಪ್ರತಿ ಬ್ಯಾರೆಲ್ ಗೆ $ 23ಕ್ಕೆ ಕುಸಿದಿದೆ. ನವೆಂಬರ್ 2002ರ ನಂತರದಲ್ಲಿ ಕನಿಷ್ಠ ಮಟ್ಟ ಇದು. ಕೊರೊನಾ ವೈರಾಣು ಹಬ್ಬುತ್ತಿರುವ ಹಿನ್ನೆಲೆಯಲ್ಲಿ ತೈಲಕ್ಕೆ ಬೇಡಿಕೆ ಕುಸಿದು ಹೋಗಿ, ಬ್ಯಾರೆಲ್ ಗೆ 20 ಡಾಲರ್ ಗಿಂತ ಕೆಳಗೆ ಬಂದಿದೆ.

ಇನ್ನು ಭಾರತದಲ್ಲಿ ಪೆಟ್ರೋಲ್- ಡೀಸೆಲ್ ಬೆಲೆಯಲ್ಲಿ ಸತತ ಹದಿನಾಲ್ಕು ದಿನಗಳಿಂದ ಬದಲಾವಣೆ ಆಗಿಲ್ಲ. ಮಾರ್ಚ್ 16ನೇ ತಾರೀಕು ಕೊನೆಯದಾಗಿ ದರ ಬದಲಾವಣೆ ಆಗಿತ್ತು. ಆ ನಂತರ ಕಚ್ಚಾ ತೈಲ ದರದಲ್ಲಿ ದರ ಕುಸಿತವಾದರೂ ಅದನ್ನು ಪೆಟ್ರೋಲ್- ಡೀಸೆಲ್ ಮೇಲಿನ ಅಬಕಾರಿ ಸುಂಕ 3 ರುಪಾಯಿ ಏರಿಕೆಯನ್ನು ಹೊಂದಾಣಿಕೆ ಮಾಡುವ ಕಾರಣಕ್ಕೆ ಇಳಿಕೆ ಮಾಡಿಲ್ಲ.

ಅಂತರರಾಷ್ಟ್ರೀಯ ತೈಲ ಬೆಲೆ 17 ವರ್ಷಗಳ ಕನಿಷ್ಠ; ದೇಶದಲ್ಲಿ ನೋ ಚೇಂಜ್

ಇನ್ನು ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ತಲಾ ಎಂಟು ರುಪಾಯಿ ಅಬಕಾರಿ ಸುಂಕವನ್ನು ಹಾಕಲು ಸಂಸತ್ ನಲ್ಲಿ ಕೇಂದ್ರ ಸರ್ಕಾರ ಅನುಮತಿ ಪಡೆದಿದೆ. ಮಾರ್ಚ್ 14ನೇ ತಾರೀಕು ಅಬಕಾರಿ ಸುಂಕ ಏರಿಸಿದ ಮೇಲೆ ಪೆಟ್ರೋಲ್ ಮೇಲಿನ ಅಬಕಾರಿ ಸುಂಕ ಲೀಟರ್ ಗೆ ರು. 22.98 ಹಾಗೂ ಡೀಸೆಲ್ ಗೆ ರು. 18.83 ಆಗಿದೆ.

2014ರಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರ ವಹಿಸಿಕೊಳ್ಳುವಾಗ ಪೆಟ್ರೋಲ್ ಮೇಲಿನ ತೆರಿಗೆ ಲೀಟರ್ ಗೆ ರು. 9.48 ಹಾಗೂ ಡೀಸೆಲ್ ಮೇಲೆ ರು. 3.56 ಇತ್ತು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+