ಇಂಟರ್ ನ್ಯಾಷನಲ್ ಡ್ರೈವಿಂಗ್ ಲೈಸೆನ್ಸ್ ನವೀಕರಣ ಸುಲಭಗೊಳಿಸಿದ ಕೇಂದ್ರ

ಇನ್ನು ಮುಂದೆ ವಿದೇಶದಲ್ಲಿ ಇರುವ ಭಾರತೀಯರು ತಮ್ಮ ಅಂತರರಾಷ್ಟ್ರೀಯ ಚಾಲನಾ ಪರವಾನಗಿಯನ್ನು (ಡ್ರೈವಿಂಗ್ ಲೈಸೆನ್ಸ್) ಭಾರತೀಯ ಹೈಕಮಿಷನ್ ಅಥವಾ ಮಿಷನ್ ಮೂಲಕ ಮಾಡಿಸಿಕೊಳ್ಳಬಹುದು. VAHAN ಪೋರ್ಟಲ್ ನಲ್ಲಿ ಅರ್ಜಿಯನ್ನು ಆಯಾ ಪ್ರಾದೇಶಿಕ ಸಾರಿಗೆ ಕಚೇರಿಯಿಂದ ಪರಿಗಣಿಸಲಾಗುತ್ತದೆ. ಅಂತರರಾಷ್ಟ್ರೀಯ ಚಾಲನಾ ಪರವಾನಗಿಯನ್ನು (IDP) ಆಯಾ ನಾಗರಿಕರ ವಿಳಾಸಕ್ಕೆ ಆರ್ ಟಿಒ ಮೂಲಕ ಕೊರಿಯರ್ ಮಾಡಲಾಗುತ್ತದೆ.

ಐಡಿಪಿಗಾಗಿ ಭಾರತದಲ್ಲಿ ಮನವಿ ಸಲ್ಲಿಸುವ ವೇಳೆ ವೈದ್ಯಕೀಯ ಪ್ರಮಾಣ ಪತ್ರ ಹಾಗೂ ಮಾನ್ಯತೆ ಪಡೆದ ವೀಸಾ ಕಡ್ಡಾಯ ಎಂಬ ನಿಯಮವನ್ನು ಕೂಡ ತೆಗೆಯಲಾಗಿದೆ. ಈ ಬಗ್ಗೆ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದಿಂದ ಜನವರಿ 7ನೇ ತಾರೀಕಿನಂದು ಅಧಿಸೂಚನೆಯನ್ನು ಹೊರಡಿಸಲಾಗಿದೆ.

ಕೆಲವು ದೇಶಗಳಲ್ಲಿ ವೀಸಾವನ್ನು ಆನ್ ಅರೈವಲ್ ಅಥವಾ ಕೊನೆ ಕ್ಷಣದಲ್ಲಿ ನೀಡಲಾಗುತ್ತದೆ. ಅಂಥ ಪ್ರಕರಣಗಳಲ್ಲಿ ಪ್ರಯಾಣಕ್ಕೂ ಮುನ್ನ ಐಡಿಪಿಗೆ ಅರ್ಜಿ ಹಾಕಿಕೊಳ್ಳಲು ವೀಸಾ ದೊರೆಯುವುದಿಲ್ಲ. ಆದ್ದರಿಂದ ಈಗ ಐಡಿಪಿ ಅರ್ಜಿಯಲ್ಲಿ ವೀಸಾ ಇಲ್ಲದೆ ಸಲ್ಲಿಸಬಹುದು ಎಂದು ಅಧಿಸೂಚನೆಯಲ್ಲಿ ಸೇರಿಸಲಾಗಿದೆ.

ಇಂಟರ್ ನ್ಯಾಷನಲ್ ಡ್ರೈವಿಂಗ್ ಲೈಸೆನ್ಸ್ ನವೀಕರಣ ಸುಲಭಗೊಳಿಸಿದ ಕೇಂದ್ರ

ಈ ಹಿಂದೆ ನಾಗರಿಕರು ವಿದೇಶದಲ್ಲಿ ಇದ್ದಲ್ಲಿ ಮತ್ತು ಇಂಟರ್ ನ್ಯಾಷನಲ್ ಡ್ರೈವಿಂಗ್ ಲೈಸೆನ್ಸ್ ಅವಧಿ ಮುಕ್ತಾಯ ಆಗಿದ್ದಲ್ಲಿ ಅದರ ನವೀಕರಣಕ್ಕೆ ಯಾವುದೇ ಮಾರ್ಗ ಇರಲಿಲ್ಲ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+