For Quick Alerts
ALLOW NOTIFICATIONS  
For Daily Alerts

ಚಿನ್ನದ ಬೆಲೆ 10 ಗ್ರಾಂಗೆ 1,000 ರೂಪಾಯಿ ಕಡಿಮೆಯಾಗುವ ಸಾಧ್ಯತೆ!

|

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಇಳಿಕೆಗೊಂಡಿರುವ ಹಿನ್ನಲೆಯಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಮತ್ತಷ್ಟು ಇಳಿಕೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಮಾರುಕಟ್ಟೆ ವಿಶ್ಲೇಷಕರ ಪ್ರಕಾರ ಚಿನ್ನದ ಬೆಲೆ 10 ಗ್ರಾಂಗೆ 1,000 ರೂಪಾಯಿಗಳಷ್ಟು ತಗ್ಗುವ ಸಾಧ್ಯತೆಯಿದೆ.

 

ಶನಿವಾರದಂದು ಅಂತರಾಷ್ಟ್ರೀಯ ಬೆಲೆಗಳು ವ್ಯಾಪಾರದಲ್ಲಿ ಶೇಕಡಾ 2.5ರಷ್ಟು ಕಡಿಮೆಯಾಗಿದೆ, ಚಿನ್ನದ ಬೆಲೆಗಳು 952 ರೂಪಾಯಿಗಳಷ್ಟು ಕುಸಿತ ಕಂಡಿದೆ. ದೇಶದ ಬಹುತೇಕ ಆಭರಣ ಮಾರಾಟಗಾರರು MCX ಬೆಲೆಗಳಿಂದ ಸೂಚನೆಗಳನ್ನು ತೆಗೆದುಕೊಳ್ಳುತ್ತವೆ.

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಇಳಿಕೆ

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಇಳಿಕೆ

ಭಾರತೀಯ ನಗರಗಳಲ್ಲಿ 22 ಕ್ಯಾರೆಟ್‌ ಚಿನ್ನವು ಪ್ರತಿ 10 ಗ್ರಾಂಗೆ 44,600 ರಿಂದ 46,600 ರೂ.ಗಳಷ್ಟು ವಹಿವಾಟು ನಡೆಸುತ್ತಿದೆ. ಇದೀಗ ಅಂತರಾಷ್ಟ್ರೀಯ ಮಟ್ಟದಲ್ಲಿ ಕುಸಿತಗೊಂಡಿರುವುದು ಶನಿವಾರ ಕಡಿಮೆ ಮಟ್ಟದಿಂದ ತೆರೆಯಲಿದೆ.

ಜಾಗತಿಕ ಮಾರುಕಟ್ಟೆಗಳಲ್ಲಿ ಬಲಿಷ್ಠ ಅಮೆರಿಕಾದ ಉದ್ಯೋಗ ವರದಿಯು ಹೊರಬಿದ್ದು ಒಂದು ತಿಂಗಳ ಬಳಿಕ ಚಿನ್ನದ ಬೆಲೆಗಳು ಕುಸಿತಗೊಂಡಿವೆ. ಯುಎಸ್‌ ಫೆಡರಲ್ ರಿಸರ್ವ್ ತನ್ನ ಆರ್ಥಿಕ ಬೆಂಬಲವನ್ನು ಹಿಂದೆ ನಿರೀಕ್ಷಿಸಿದ್ದಕ್ಕಿಂತ ಬೇಗನೆ ತಗ್ಗಿಸಬಹುದೆಂದು ನಿರೀಕ್ಷೆಗಳನ್ನು ಹೆಚ್ಚಿಸಿದ ನಂತರ ಒಂದು ತಿಂಗಳಲ್ಲಿ ಚಿನ್ನವು ಅತ್ಯಂತ ಕಡಿಮೆ ಮಟ್ಟಕ್ಕೆ ಇಳಿದಿದೆ.

 

ಸ್ಪಾಟ್‌ ಚಿನ್ನದ ಬೆಲೆಯೂ ಇಳಿಕೆ

ಸ್ಪಾಟ್‌ ಚಿನ್ನದ ಬೆಲೆಯೂ ಇಳಿಕೆ

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಳಿಕೆಯ ಪರಿಣಾಮ ಸ್ಪಾಟ್ ಚಿನ್ನವು ಪ್ರತಿ ಔನ್ಸ್‌ಗೆ ಶೇಕಡಾ 2.3ರಷ್ಟು ಕುಸಿದು 1,763 ಅಮೆರಿಕನ್ ಡಾಲರ್‌ಗೆ ಇಳಿದಿದ್ದು, ಜೂನ್ 30 ರ ನಂತರ 1,757 ಡಾಲರ್‌ ಮಟ್ಟಕ್ಕೆ ತಲುಪಿದೆ.

ನೂತನ ಹಾಲ್‌ಮಾರ್ಕ್‌ ನಿಯಮ: ಚಿನ್ನ ಖರೀದಿದಾರರು, ವ್ಯಾಪಾರಿಗಳ ಮೇಲೆ ಏನು ಪ್ರಭಾವ ಬೀರುತ್ತದೆ?ನೂತನ ಹಾಲ್‌ಮಾರ್ಕ್‌ ನಿಯಮ: ಚಿನ್ನ ಖರೀದಿದಾರರು, ವ್ಯಾಪಾರಿಗಳ ಮೇಲೆ ಏನು ಪ್ರಭಾವ ಬೀರುತ್ತದೆ?

ಅಮೆರಿಕಾದಲ್ಲಿ ಉದ್ಯೋಗ ಮಟ್ಟ ಹೆಚ್ಚಳ, ಚಿನ್ನದ ಬೆಲೆ ಇಳಿಕೆ
 

ಅಮೆರಿಕಾದಲ್ಲಿ ಉದ್ಯೋಗ ಮಟ್ಟ ಹೆಚ್ಚಳ, ಚಿನ್ನದ ಬೆಲೆ ಇಳಿಕೆ

ಕೋವಿಡ್ -19 ರ ಡೆಲ್ಟಾ ರೂಪಾಂತರದ ಭಯದ ಹೊರತಾಗಿಯೂ ಮತ್ತು ಕಂಪನಿಗಳು ಬಿಗಿಯಾದ ಕಾರ್ಮಿಕ ಪೂರೈಕೆಯೊಂದಿಗೆ ಹೆಣಗಾಡುತ್ತಿರುವಾಗಲೂ ಅಮೆರಿಕಾದಲ್ಲಿ ಉದ್ಯೋಗ ನೇಮಕಾತಿಯು ಸುಮಾರು ಒಂದು ವರ್ಷದಲ್ಲಿ ಮೊದಲ ಬಾರಿಗೆ ಹೆಚ್ಚಿನ ಏರಿಕೆ ದಾಖಲಿಸಿದ್ದು, ಜುಲೈ ತಿಂಗಳಲ್ಲಿ ಅತ್ಯಂತ ವೇಗದಲ್ಲಿ ಏರಿತು ಎಂದು ಕಾರ್ಮಿಕ ಇಲಾಖೆ ವರದಿ ಮಾಡಿದೆ.

ಇಲಾಖೆಯ ಕಾರ್ಮಿಕ ಅಂಕಿಅಂಶಗಳ ಪ್ರಕಾರ ನಿರುದ್ಯೋಗ ದರವು ಶೇಕಡಾ 5.4ರಷ್ಟು ಇಳಿದಿದ್ದು, ತಿಂಗಳಿಗೆ 9,43,000ರಷ್ಟು ಹೆಚ್ಚಾಗಿದೆ. ಈ ವೇತನ ಹೆಚ್ಚಳ ಪ್ರಮಾಣವು ಕಳೆದ ಆಗಸ್ಟ್ 2020 ರಿಂದ ಅತ್ಯಂತ ಉತ್ತಮವಾಗಿದೆ.

ಈ ಬಲವಾದ ಉದ್ಯೋಗ ಏರಿಕೆಯ ಅಂಕಿ-ಅಂಶಗಳಿಂದಾಗಿ ಯುಎಸ್ ಫೆಡ್ ತನ್ನ ಕಾರ್ಯಕ್ರಮಗಳನ್ನು ನಿರೀಕ್ಷಿಸಿರುವುದಕ್ಕಿಂತ ಸರಾಗಗೊಳಿಸುವ ಪ್ರಯತ್ನ ಮಾಡಬಹುದು.

 ಚಿನ್ನದ ಮೇಲಿನ ಹೂಡಿಕೆ: ನಾಲ್ಕು ಅತ್ಯುತ್ತಮ ಆಯ್ಕೆಗಳು ಇಲ್ಲಿವೆ ಚಿನ್ನದ ಮೇಲಿನ ಹೂಡಿಕೆ: ನಾಲ್ಕು ಅತ್ಯುತ್ತಮ ಆಯ್ಕೆಗಳು ಇಲ್ಲಿವೆ

ಚಿನ್ನದ ಬೆಲೆ ಮತ್ತಷ್ಟು ಇಳಿಕೆಯಾಗುವ ಸಾಧ್ಯತೆ

ಚಿನ್ನದ ಬೆಲೆ ಮತ್ತಷ್ಟು ಇಳಿಕೆಯಾಗುವ ಸಾಧ್ಯತೆ

ಅನೇಕ ಮಾರುಕಟ್ಟೆ ವಿಶ್ಲೇಷಕರ ಪ್ರಕಾರ ಚಿನ್ನವು ಔನ್ಸ್‌ಗೆ 1700 ಅಮೆರಿಕನ್ ಡಾಲರ್‌ಗಿಂತ ಕಡಿಮೆಯಾಗಬಹುದು ಎಂದು ನಂಬುತ್ತಾರೆ. ಆದಾಗ್ಯೂ ಈ ಹಂತಗಳಲ್ಲಿ ಬೆಂಬಲವು ಉಂಟಾಗಬಹುದು, ಏಕೆಂದರೆ ಜಾಗತಿಕ ಮಟ್ಟದಲ್ಲಿ ಇನ್ನೂ ದ್ರವ್ಯತೆಯಿಂದ ಕೂಡಿದೆ ಮತ್ತು ಇದು ಕಡಿಮೆ ಮಟ್ಟದಲ್ಲಿ ಖರೀದಿಗೆ ಕಾರಣವಾಗಬಹುದು.

ಸವರನ್ ಗೋಲ್ಡ್ ಬಾಂಡ್ 5ನೇ ಚಂದಾದಾರಿಕೆ

ಸವರನ್ ಗೋಲ್ಡ್ ಬಾಂಡ್ 5ನೇ ಚಂದಾದಾರಿಕೆ

ಸವರನ್ ಗೋಲ್ಡ್ ಬಾಂಡ್ ಯೋಜನೆ (2021) ಐದನೇ ಚಂದಾದಾರಿಕೆಯು ಆಗಸ್ಟ್ 09, ಸೋಮವಾರದಿಂದ ತೆರೆಯಲಿದೆ. ಐದನೇ ಕಂತಿನ ವಿಂಡೋ ಆಗಸ್ಟ್ 9 ರಿಂದ ಆಗಸ್ಟ್ 13 ರ ನಡುವೆ ಹೂಡಿಕೆದಾರರಿಗೆ ತೆರೆದಿರುತ್ತದೆ. ಐದು ದಿನಗಳ ಅವಧಿಗೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ನಿಂದ 2021-22 ಗೋಲ್ಡ್ ಬಾಂಡ್ ಯೋಜನೆಗಾಗಿ ನಿಗದಿಪಡಿಸಿದ ವೇಳಾಪಟ್ಟಿಯಲ್ಲಿ ಚಿನ್ನದ ಬಾಂಡ್‌ಗಳನ್ನು ಖರೀದಿಸಬಹುದು.

ಆರ್‌ಬಿಐ ಪ್ರಕಾರ, ಒಂದು ಗ್ರಾಂ ಚಿನ್ನದ ಮೌಲ್ಯಕ್ಕೆ ಸಮನಾದ ಪ್ರತಿ ಯೂನಿಟ್‌ಗೆ 4,790 ರ ವಿತರಣಾ ಬೆಲೆಯಿದ್ದು, 2021-22 ಚಿನ್ನದ ಬಾಂಡ್ ಯೋಜನೆಯ ಐದನೇ ಕಂತಿಗೆ ಅನ್ವಯಿಸುತ್ತದೆ. ಐದನೇ ಕಂತಿನ ವಿತರಣೆಯ ದಿನಾಂಕವನ್ನು ಆಗಸ್ಟ್ 17, 2021 ಎಂದು ನಿಗದಿಪಡಿಸಲಾಗಿದೆ.

 

English summary

International Prices Impact: Gold Price Set To Fall Rs 1000

Gold rates In indian cities are set to fall by Rs 1,000 per 10 grams at the very least on Saturday.
Story first published: Saturday, August 7, 2021, 9:14 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X