ಮ್ಯೂಚುವಲ್ ಫಂಡ್ ಹೂಡಿಕೆಯಲ್ಲಿ ಐದು ವರ್ಷಗಳಲ್ಲಿ ಅತಿಹೆಚ್ಚು ರಿಟರ್ನ್ ಗಳಿಸುವುದರಲ್ಲಿ ಎಸ್‌ಬಿಐನ ಎಸ್‌ಬಿಐ ಸ್ಮಾಲ್ ಕ್ಯಾಪ್ ಫಂಡ್ ಡೈರಕ್ಟ್ ಗ್ರೋತ್, ಎಸ್‌ಬಿಐ ಕಾಂಟ್ರಾ ಫಂಡ್ ಹಾಗೂ ಎಸ್‌ಬಿಐ ಟೆಕ್ನಾಲಜಿ ಅಪೊರ್ಚ್ಯುನಿಟೀಸ್ ಫಂಡ್ ಅತ್ಯುತ್ತಮ ಆಯ್ಕೆಯಾಗಿದೆ. ವಾರ್ಷಿಕ ಈ ಫಂಡ್‌ಗಳು ಶೇ.23ರವರೆಗೆ ರಿಟರ್ನ್ಸ್ ನೀಡಬಹುದು. ಬೆಳವಣಿಗೆ ಆಧಾರಿತ ಈ ಎಲ್ಲ ಪ್ಲ್ಯಾನ್‌ಗಳು ಡೈರೆಕ್ಟ್ ಪ್ಲ್ಯಾನ್‌ಗಳಾಗಿವೆ.
ಎಸ್‌ಬಿಐನ ಟೆಕ್ನಾಲಜಿ ಅಪೊರ್ಚ್ಯುನಿಟೀಸ್ ಫಂಡ್: ಎಸ್‌ಬಿಐನ ಟೆಕ್ನಾಲಜಿ ಅಪೊರ್ಚ್ಯುನಿಟೀಸ್ ಫಂಡ್‌ನಡಿ ತಂತ್ರಜ್ಞಾನ ಹಾಗೂ ತಂತ್ರಜ್ಞಾನ ಆಧಾರಿತ ಕಂಪೆನಿಗಳಲ್ಲಿ ಇಕ್ವಿಟಿ ಮತ್ತು ಇಕ್ವಿಟಿಗೆ ಸಂಬಂಧಿಸಿತ ಪೋರ್ಟ್‌ಪೊಲಿಯೊ ಸೆಕ್ಯೂರಿಟಿಗಳಲ್ಲಿ ಹೂಡಿಕೆ ಮಾಡುವುದರಿಂದ ಹೂಡಿಕೆದಾರರು ದೀರ್ಘಕಾಲಿಕ ಬಂಡವಾಳವನ್ನು ಗಳಿಸಬಹುದು.
ಐದು ವರ್ಷಗಳ ಹಿಂದೆ ಒಂದು ವೇಳೆ ನೀವು ಎಸ್‌ಬಿಐ ಟೆಕ್ನಾಲಜೀಸ್ ಅಪೊರ್ಚ್ಯುನಿಟೀಸ್ ಫಂಡ್‌ನಲ್ಲಿ ತಿಂಗಳಿಗೆ 12,000 ರೂ. ಹೂಡಿಕೆ ಮಾಡಿದ್ದರೆ, ನಿಮಗೆ ಶೇ.84.47ರಷ್ಟು ರಿಟರ್ನ್ಸ್ ಅಥವಾ ಆದಾಯ ಪಡೆಯಬಹುದು. ಅಂದರೆ ಒಟ್ಟು ಐದು ವರ್ಷಗಳಲ್ಲಿ 7.7 ಲಕ್ಷವನ್ನು ಹೂಡಿಕೆ ಮಾಡಿ 13.3 ಲಕ್ಷ ರೂ. ಹಣವನ್ನು ವಾಪಾಸ್ ಪಡೆಯಬಹುದು.

ಎಸ್‌ಬಿಐ ಕಾಂಟ್ರಾ ಇಕ್ವಿಟಿ: ಎಸ್‌ಬಿಐ ಕಾಂಟ್ರಾ ಇಕ್ವಿಟಿ ಮ್ಯೂಚುವಲ್ ಫಂಡ್ ಯೋಜನೆಯಲ್ಲಿಯೂ ಸಕ್ರಿಯ ಹೂಡಿಕೆ ನಿರ್ವಹಣೆ ಹಾಗೂ ವಿಭಿನ್ನವಾದ ಹೂಡಿಕೆ ಮನೋಭಾವದ ಮೂಲಕ ದೀರ್ಘಕಾಲಿಕ ಬಂಡವಾಳ ನಿರೀಕ್ಷಿಸಬಹುದು.
ಎಸ್‌ಬಿಐ ಕಾಂಟ್ರಾ ಫಂಡ್ ಖಂಡಿತವಾಗಿಯೂ ಶೇ.95.16ರಷ್ಟು ರಿಟರ್ನ್ಸ್ ನೀಡಬಲ್ಲದು. ಅಂದರೆ, ಐದು ವರ್ಷಗಳ ಅವಧಿಯಲ್ಲಿ ವಾರ್ಷಿಕ 14.3ರಷ್ಟು ರಿಟರ್ನ್ಸ್ ಕೊಡುತ್ತದೆ. ಇದರಲ್ಲಿನ ವಾರ್ಷಿಕ ಆದಾಯವು ಶೇ.11.69 ಬೆಂಚ್‌ಮಾರ್ಕ್ ರಿಟರ್ನ್ಸ್ ಮತ್ತು ಶೇ.13.85ರಷ್ಟು ಕೆಟಗರಿ ಸರಾಸರಿಗಿಂತ ಹೆಚ್ಚಾಗಿರುತ್ತದೆ.
ಪ್ರಸ್ತುತ ಕಂಪೆನಿಯ ನಿವ್ವಳ ಆಸ್ತಿ ಮೌಲ್ಯವು 241.69 ಕೋಟಿ ರೂ. ಆಗಿದೆ. ಒಂದುವೇಳೆ ಐದು ವರ್ಷದ ಹಿಂದೆ ಎಸ್‌ಬಿಐ ಕಾಂಟ್ರಾ ಫಂಡ್‌ನಲ್ಲಿ ಪ್ರತಿ ತಿಂಗಳು 12000 ರೂ.ನಂತೆ ಹೂಡಿಕೆ ಮಾಡಿದ್ದರೆ 79.31ರಷ್ಟು ರಿಟರ್ನ್ಸ್ ಆದಾಯ ಪಡೆಯಬಹುದು. ಅಂದರೆ, ಐದು ವರ್ಷಗಳಲ್ಲಿ ಒಟ್ಟು 7.2 ಲಕ್ಷ ರೂ. ಹೂಡಿಕೆ ಮಾಡಿ 12.9 ಲಕ್ಷ ಹಣ ಗಳಿಸಬಹುದು.
ಎಸ್‌ಬಿಐ ಸಣ್ಣ ಕ್ಯಾಪ್ ಫಂಡ್: ಇನ್ನು ಎಸ್‌ಬಿಐ ಸಣ್ಣ ಕ್ಯಾಪ್ ಫಂಡ್ ಪ್ರಾಥಮಿಕವಾಗಿ ಸಣ್ಣ ಸಂಸ್ಥೆಗಳ ಈಕ್ವಿಟಿ ಸ್ಟಾಕ್ ಹೂಡಿಕೆಯಾಗಿದ್ದು, ಹೂಡಿಕೆದಾರರಿಗೆ ದೀರ್ಘಕಾಲಿಕ ಬಂಡವಾಳ ಬೆಳವಣಿಗೆಗೆ ಅವಕಾಶವನ್ನು ಮಾಡಿಕೊಡುತ್ತದೆ. ಇದು ಕೂಡ ಖಚಿತವಾಗಿ ಶೇ.84.28 ಆದಾಯವನ್ನು ನೀಡಲಿದ್ದು, ಐದು ವರ್ಷಗಳ ಅವಧಿಯಲ್ಲಿ ವಾರ್ಷಿಕವಾಗಿ 14.29ರಷ್ಟು ರಿಟರ್ನ್ಸ್ ನೀಡುತ್ತದೆ. ಪ್ರಸ್ತುತ ಇದರ ಆಸ್ತಿ ಮೌಲ್ಯವು 124.7 ಕೋಟಿ ರೂ. ಆಗಿದೆ.
More From GoodReturns

Retirement with Savings Tips: ನಿವೃತ್ತಿ ಪ್ಲಾನ್ ಮಾಡ್ತಿದ್ದೀರಾ? ಹಾಗಿದ್ರೆ ಈ ಸ್ಕೀಮ್ನಲ್ಲಿ ಇನ್ವೆಸ್ಟ್ ಮಾಡಿ

SEBI: ಹೂಡಿಕೆದಾರರ ಸುರಕ್ಷತೆಗೆ ಸೆಬಿ ಹೊಸ ಲಾಕ್ ಸೌಲಭ್ಯ…ಮ್ಯೂಚುವಲ್ ಫಂಡ್ ಹಿಂಪಡೆಯುವಿಕೆ ತಡೆಯಿರಿ!

Money Tips: ದಂಪತಿ ಜೊತೆಯಾಗಿ ಈ ರೀತಿ ಇಎಂಐ ಪಾವತಿಸಿ! ನಿಮ್ಮಷ್ಟು ಬುದ್ಧಿವಂತರು ಯಾರೂ ಇರಲ್ಲ

Retirement Plans: 40 ವರ್ಷದಲ್ಲಿ ನಿವೃತ್ತಿ ಪಡೆಯೋ ಪ್ಲಾನ್ನಲ್ಲಿದ್ದೀರಾ? ಹಾಗಿದ್ರೆ ಇಲ್ಲಿದೆ ಸಲಹೆ

Alireza Arafi: ಇಸ್ರೇಲ್ ದಾಳಿಯಲ್ಲಿ ಖಮೇನಿ ನಿಧನ: ಅಲಿರೆಜಾ ಅರಾಫಿ ತಾತ್ಕಾಲಿಕ ಸುಪ್ರೀಂ ನಾಯಕನಾಗಿ ನೇಮಕ!

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Gold Rate Bengaluru: ಮಧ್ಯಪ್ರಾಚ್ಯದಲ್ಲಿ ಯುದ್ಧ ನಡುವೆ ಚಿನ್ನದ ಬೆಲೆಯಲ್ಲಿ 43,700 ರೂ. ಏರಿಕೆ! ಇಂದಿನ ಬೆಲೆ ಎಷ್ಟು?

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ



Click it and Unblock the Notifications