ಜಾಗತಿಕ ವಿದ್ಯಮಾನಗಳು, ಭಾರತದ ವಾಹನ ವಲಯದ ಸಂಕಷ್ಟ ಸ್ಥಿತಿ, ಪ್ರಮುಖ ಕಂಪೆನಿಗಳ ಫಲಿತಾಂಶದಲ್ಲಿನ ಇಳಿಕೆ, ಎರಡು ವಾರಗಳ ಲಾಕ್ ಡೌನ್ ವಿಸ್ತರಣೆ ಇವೆಲ್ಲವೂ ಸೇರಿ ಸೋಮವಾರ (ಮೇ 4, 2020) ಷೇರ್ಉ ಮಾರುಕಟ್ತೆ ಸೂಚ್ಯಂಕಗಳ ಇಳಿಕೆಗೆ ಕಾರಣವಾದವು. ಹೂಡಿಕೆದಾರರ 6 ಲಕ್ಷ ಕೋಟಿಯಷ್ಟು ಸಂಪತ್ತು ಕರಗಿಹೋಯಿತು.
ಸೆನ್ಸೆಕ್ಸ್ ಸೂಚ್ಯಂಕವು 2002 ಪಾಯಿಂಟ್ ಇಳಿಕೆಯೊಂದಿಗೆ ದಿನಾಂತ್ಯಕ್ಕೆ 31,715ಕ್ಕೆ ವಹಿವಾಟು ಮುಗಿಸಿತು. ನಿಫ್ಟಿ ಸೂಚ್ಯಂಕವು 566 ಪಾಯಿಂಟ್ ಗಳ ಇಳಿಕೆ ಕಂಡು, 9293 ಅಂಶಗಳೊಂದಿಗೆ ವ್ಯವಹಾರ ಚುಕ್ತಾಗೊಳಿಸಿತು. ಫೈನಾನ್ಸ್, ಬ್ಯಾಂಕ್, ಲೋಹ, ಗ್ರಾಹಕ ಬಳಕೆ ಹಾಗೂ ರಿಯಾಲ್ಟಿ ವಲಯಗಳಲ್ಲಿ ಭಾರೀ ಇಳಿಕೆ ಕಂಡು ಬಂತು. ಇನ್ನು ಟೆಲಿಕಾಂ ಮತ್ತು ಹೆಲ್ತಿಕೇರ್ ವಲಯದಲ್ಲಿ ಸ್ವಲ್ಪ ಮಟ್ಟಿಗೆ ಖರೀದಿ ಕಂಡುಬಂತು.

ಎಚ್ ಡಿಎಫ್ ಸಿ, ಟಾಟಾ ಮೋಟಾರ್ಸ್, ಬಜಾಜ್ ಫೈನಾನ್ಸ್, ವೇದಾಂತ, ಹಿಂಡಾಲ್ಕೋ ಇಂಡಸ್ಟ್ರೀ ಮತ್ತು ಐಸಿಐಸಿಐ ಬ್ಯಾಂಕ್ ಷೇರುಗಳು ತಲಾ 10 ಪರ್ಸೆಂಟ್ ಗಳಿಗಿಂತ ಹೆಚ್ಚು ಇಳಿಕೆ ದಾಖಲಿಸಿದವು. ನೂರಕ್ಕೂ ಹೆಚ್ಚು ಷೇರುಗಳು ವಾರ್ಷಿಕ ಕನಿಷ್ಠ ಮಟ್ಟವನ್ನು ತಲುಪಿದ್ದು, ಮಾರುಕಟ್ಟೆ ಇಳಿಕೆಗೆ ನಿದರ್ಶನವಾಗಿತ್ತು.


Click it and Unblock the Notifications