2019-20ರ ಆರ್ಥಿಕ ವರ್ಷದಲ್ಲಿ ಕರಗಿದ್ದು 37.59 ಲಕ್ಷ ಕೋಟಿ ಹೂಡಿಕೆದಾರರ ಸಂಪತ್ತು

2019-20ರ ಆರ್ಥಿಕ ವರ್ಷದಲ್ಲಿ ಹೂಡಿಕೆದಾರರ ಸಂಪತ್ತು 37.59 ಲಕ್ಷ ಕೋಟಿ ರುಪಾಯಿ ಇಳಿಕೆಯಾಗಿದೆ. ಅದರಲ್ಲಿ ಬಿಎಸ್ ಇ ಸೂಚ್ಯಂಕವೇ 24 ಪರ್ಸೆಂಟ್ ಕುಸಿತ ಕಂಡಿದೆ. 30 ಷೇರುಗಳ ಗುಚ್ಛ ಇರುವ ಬಿಎಸ್ ಇ ಸೂಚ್ಯಂಕವು 9204.42 ಪಾಯಿಂಟ್ ಇಳಿದಿದ್ದರೆ, ನಿಫ್ಟಿ 3026.15 ಪಾಯಿಂಟ್ ನೆಲ ಕಚ್ಚಿದೆ.

ಬಿಎಸ್ ಇಯಲ್ಲಿ ಲಿಸ್ಟ್ ಆಗಿರುವ ಕಂಪೆನಿಗಳ ಬಡವಾಳ ಮೌಲ್ಯವು 37.59 ಲಕ್ಷ ಕೋಟಿ ರುಪಾಯಿ ಕರಗಿದೆ. ಅಂದ ಹಾಗೆ ಮಾರ್ಚ್ ತಿಂಗಳು ಮಾರ್ಕೆಟ್ ಪಾಲಿಗೆ ದುಃಸ್ವಪ್ನದಂತೆ ಕಾಡಿದೆ. ಒಂದೇ ತಿಂಗಳಲ್ಲಿ 8828.8 ಪಾಯಿಂಟ್ ಅಥವಾ 23 ಪರ್ಸೆಂಟ್ ಇಳಿಕೆ ಕಂಡಿದೆ. ಇದು ಕೊರೊನಾ ವೈರಾಣು ವ್ಯಾಪಿಸಿದ ಆತಂಕದಿಂದ ಆದ ಅನಾಹುತ.

ಜಗತ್ತಿನಾದ್ಯಂತ ಲಾಕ್ ಡೌನ್ ಆಗಿದೆ. ಈ ಮಧ್ಯೆ ಜಾಗತಿಕ ಆರ್ಥಿಕ ಕುಸಿತದ ಆತಂಕವೂ ಎದುರಾಗಿದೆ. ಜನವರಿ 20ರಂದು ಸಾರ್ವಕಾಲಿಕ ಗರಿಷ್ಠ ಮಟ್ಟವಾದ 42,273.87 ಪಾಯಿಂಟ್ ನಲ್ಲಿ ಇದ್ದ ಸೆನ್ಸೆಕ್ಸ್, ಮಾರ್ಚ್ 24ರಂದು 25,638.9 ಪಾಯಿಂಟ್ ಗೆ ಕುಸಿದಿತ್ತು.

2019-20ರಲ್ಲಿ ಕರಗಿದ್ದು 37.59 ಲಕ್ಷ ಕೋಟಿ ಹೂಡಿಕೆದಾರರ ಸಂಪತ್ತು

ಸದ್ಯಕ್ಕೆ 7.05 ಲಕ್ಷ ಕೋಟಿ ಮಾರುಕಟ್ಟೆ ಬಂಡವಾಳದೊಂದಿಗೆ ರಿಲಯನ್ಸ್ ಇಂಡಸ್ಟ್ರೀಸ್ ಅತ್ಯಂತ ಮೌಲ್ಯಯುತ ಕಂಪೆನಿಯ ಮೊದಲ ಸ್ಥಾನದಲ್ಲಿದ್ದರೆ, 6.84 ಲಕ್ಷ ಕೋಟಿಯೊಂದಿಗೆ ಟಿಸಿಎಸ್ ಎರಡನೇ ಸ್ಥಾನದಲ್ಲಿ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+