ಷೇರುಪೇಟೆಯಲ್ಲಿ ಹೂಡಿಕೆದಾರರ ಸಂಪತ್ತು ಒಂದೇ ದಿನ 2.53 ಲಕ್ಷ ಕೋಟಿ ರು. ಹೆಚ್ಚಳ

ಸತತ ಆರನೇ ದಿನವಾದ ಸೋಮವಾರ (ಫೆಬ್ರವರಿ 8, 2021) ಕೂಡ ಷೇರು ಮಾರುಕಟ್ಟೆ ಸೂಚ್ಯಂಕಗಳು ಏರಿಕೆ ಕಂಡಿವೆ. ಹೂಡಿಕೆದಾರರ ಸಂಪತ್ತು ಒಂದೇ ದಿನ 2.53 ಲಕ್ಷ ಕೋಟಿ ರುಪಾಯಿ ಜಾಸ್ತಿಯಾಗಿ, ಬಿಎಸ್ ಇ ಲಿಸ್ಟೆಡ್ ಕಂಪೆನಿಗಳ ಮಾರುಕಟ್ಟೆ ಬಂಡವಾಳ ಮೌಲ್ಯ ರು. 202.87 ಲಕ್ಷ ಕೋಟಿ ಆಗಿದೆ.

ನಿರೀಕ್ಷಿತಗಿಂತ ಉತ್ತಮವಾಗಿ ಮೂರನೇ ತ್ರೈಮಾಸಿಕದ ಫಲಿತಾಂಶ ಹಾಗೂ ಜಾಗತಿಕವಾಗಿ ಸಕಾರಾತ್ಮಕ ಪ್ರಭಾವದಿಂದಾಗಿ ಮಾರುಕಟ್ಟೆ ಮೇಲ್ಮುಖವಾಗಿ ಮುಂದುವರಿಸಿದೆ. ಲೋಹ ಹಾಗೂ ವಾಹನ ವಲಯದ ಷೇರುಗಳಲ್ಲಿ ಖರೀದಿ ಕಂಡುಬಂದಿದೆ.

ಕೇಂದ್ರ ಬಜೆಟ್ ದಿನದಿಂದ ಆರಂಭವಾಗಿ ಇಲ್ಲಿಯ ತನಕ ಬೆಂಚ್ ಮಾರ್ಕ್ ಸೂಚ್ಯಂಕ 11% ಏರಿಕೆ ಕಂಡಿದೆ. ಮುಖ್ಯವಾಗಿ ವಿದೇಶಿ ಹೂಡಿಕೆದಾರರಿಂದ ಬಂಡವಾಳ ಹರಿದುಬಂದಿದೆ. ಈ ಏರಿಕೆಯೊಂದಿಗೆ ಮೌಲ್ಯಮಾಪನವು ಮತ್ತೊಮ್ಮೆ ವಿಸ್ತರಣೆ ಆಗಿದೆ. ಸೆನ್ಸೆಕ್ಸ್ 617.14 ಪಾಯಿಂಟ್ಸ್ ಅಥವಾ 1.22% ಏರಿಕೆಯೊಂದಿಗೆ 51,348.77 ಪಾಯಿಂಟ್ ಜತೆ ದಿನಾಂತ್ಯದ ವಹಿವಾಟು ಮುಗಿಸಿದೆ. ಇನ್ನು ಎನ್ ಎಸ್ ಇ ನಿಫ್ಟಿ 191.55 ಅಥವಾ 1.22% ಮೇಲೇರಿ 15,115.80 ಪಾಯಿಂಟ್ ನಲ್ಲಿ ದಿನಾಂತ್ಯ ಮುಗಿಸಿದೆ.

ಷೇರುಪೇಟೆಯಲ್ಲಿ ಹೂಡಿಕೆದಾರರ ಸಂಪತ್ತು  2.53 ಲಕ್ಷ ಕೋಟಿ ರು. ಹೆಚ್ಚಳ

ಎರಡೂ ಸೂಚ್ಯಂಕಗಳು ಹೊಸ ದಾಖಲೆ ಎತ್ತರಕ್ಕೆ ಏರಿದೆ. ಇಂದಿನ ವಹಿವಾಟಿನಲ್ಲಿ ಪಿಎಸ್ ಯು ಬ್ಯಾಂಕ್ ಗಳ ಷೇರುಗಳ ಬೆಲೆಯಲ್ಲಿ ಇಳಿಕೆ ಕಂಡುಬಂತು, ಇದೇ ರೀತಿ ಎಫ್ ಎಂಸಿಜಿಯಲ್ಲೂ ಇತ್ತು. ವಾಹನ, ಇನ್ಫರ್ಮೇಷನ್ ಟೆಕ್ನಾಲಜಿ, ಲೋಹದ ಷೇರುಗಳು ಅದ್ಭುತ ಪ್ರದರ್ಶನ ನೀಡಿದವು.

ನಿಫ್ಟಿಯಲ್ಲಿ ಏರಿಕೆ ಕಂಡ ಟಾಪ್ ಐದು ಷೇರುಗಳು ಮತ್ತು ಪರ್ಸೆಂಟ್
ಮಹೀಂದ್ರಾ ಅಂಡ್ ಮಹೀಂದ್ರಾ 7.27%

ಹಿಂಡಾಲ್ಕೋ 6.45%

ಟಾಟಾ ಮೋಟಾರ್ಸ್ 6.35%

ಶ್ರೀ ಸಿಮೆಂಟ್ಸ್ 4.86%

ಜೆಎಸ್ ಡಬ್ಲ್ಯು ಸ್ಟೀಲ್ 3.84%

ನಿಫ್ಟಿಯಲ್ಲಿ ಇಳಿಕೆ ಕಂಡ ಟಾಪ್ ಐದು ಷೇರುಗಳು ಮತ್ತು ಪರ್ಸೆಂಟ್
ಬ್ರಿಟಾನಿಯಾ -1.92%

ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್ -1.45%

ಕೊಟಕ್ ಮಹೀಂದ್ರಾ -1.29%

ಡಿವೀಸ್ ಲ್ಯಾಬ್ಸ್ -1.06%

ಬಜಾಜ್ ಫೈನಾನ್ಸ್ -0.74%

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+