For Quick Alerts
ALLOW NOTIFICATIONS  
For Daily Alerts

ಷೇರು ಪೇಟೆಯಲ್ಲಿ ಹೂಡಿಕೆದಾರರ ಸಂಪತ್ತು 3 ಲಕ್ಷ ಕೋಟಿ ರುಪಾಯಿ ಹೆಚ್ಚಳ

|

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಬುಧವಾರ (ಡಿಸೆಂಬರ್ 23, 2020) ಭಾರೀ ಏರಿಕೆ ಆಗಿದೆ. ಹೂಡಿಕೆದಾರರ ಸಂಪತ್ತು 3 ಲಕ್ಷ ಕೋಟಿ ರುಪಾಯಿ ಹೆಚ್ಚಳವಾಗಿದೆ. ಸೆನ್ಸೆಕ್ಸ್ 437 ಪಾಯಿಂಟ್ ಗಳ ಏರಿಕೆ ಕಂಡು, 46,444.18 ಪಾಯಿಂಟ್ ನೊಂದಿಗೆ ದಿನಾಂತ್ಯದ ವಹಿವಾಟು ಮುಗಿಸಿದ್ದರೆ, ನಿಫ್ಟಿ 135 ಪಾಯಿಂಟ್ ಮೇಲೇರಿ 13,601.10 ಪಾಯಿಂಟ್ ನೊಂದಿಗೆ ವ್ಯವಹಾರ ಚುಕ್ತಾ ಮಾಡಿದೆ.

 

ಬುಧವಾರದಂದು ಷೇರು ಮಾರುಕಟ್ಟೆಯೊಳಗೆ 'ಗೂಳಿ ಪ್ರವೇಶ' ಆಗಿದ್ದು ಸ್ಪಷ್ಟವಾಯಿತು. ಮುಖ್ಯವಾಗಿ ಇನೋಫರ್ಮೇಷನ್ ಟೆಕ್ನಾಲಜಿ (ಐ.ಟಿ.) ವಲಯದ ಷೇರುಗಳು ಅದ್ಭುತ ಗಳಿಕೆ ಕಂಡವು. ವಾರ್ಷಿಕ ಗರಿಷ್ಠ ಮಟ್ಟವನ್ನು ತಲುಪಿದವು. ಅವುಗಳಿಗೆ ಎಫ್ ಎಂಸಿಜಿ ವಲಯದ ಷೇರುಗಳು ಸಾಥ್ ನೀಡಿದವು.

 

25 ವರ್ಷದ ದೀರ್ಘ ಹೂಡಿಕೆಗೆ ಸಂಪತ್ತು ಸೃಷ್ಟಿಸಲು 25 ಷೇರುಗಳು25 ವರ್ಷದ ದೀರ್ಘ ಹೂಡಿಕೆಗೆ ಸಂಪತ್ತು ಸೃಷ್ಟಿಸಲು 25 ಷೇರುಗಳು

ಹೊಸ ಬಗೆಯ ಕೊರೊನಾ ವೈರಸ್ ಆತಂಕ, ಲಾಕ್ ಡೌನ್ ಘೋಷಣೆ ಆಗುವ ನಿರೀಕ್ಷೆ, ದುರ್ಬಲ ಜಾಗತಿಕ ಪ್ರಭಾವದ ಮಧ್ಯಯೂ ಐಟಿ, ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಗಳ ಬಲದಲ್ಲಿ ಸೂಚ್ಯಂಕಗಳು ಮೇಲೇರಿದವು.

ನಿಫ್ಟಿಯಲ್ಲಿ ಏರಿಕೆ ಕಂಡ ಪ್ರಮುಖ ಷೇರುಗಳು
ವಿಪ್ರೋ

ಸಿಪ್ಲಾ

ಟಾಟಾ ಸ್ಟೀಲ್

ಇನ್ಫೋಸಿಸ್

ಟಾಟಾ ಮೋಟಾರ್ಸ್

ಷೇರು ಪೇಟೆಯಲ್ಲಿ ಹೂಡಿಕೆದಾರರ ಸಂಪತ್ತು 3 ಲಕ್ಷ ಕೋಟಿ ರುಪಾಯಿ ಹೆಚ್ಚಳ

ನಿಫ್ಟಿಯಲ್ಲಿ ಇಳಿಕೆ ಕಂಡ ಪ್ರಮುಖ ಷೇರುಗಳು
ಡಿವೀಸ್ ಲ್ಯಾಬ್ಸ್

ಟೈಟಾನ್ ಕಂಪೆನಿ

ಎನ್ ಟಿಪಿಸಿ

ಕೋಲ್ ಇಂಡಿಯಾ

ಹೀರೋ ಮೋಟೋಕಾರ್ಪ್

English summary

Investors Wealth Increased By Rs 3 Lakh Crore In Stock Market On December 23, 2020

Stock market index sensex, nifty surge on December 23, 2020. By this investors wealth increased by Rs 3 lakh crore.
Story first published: Wednesday, December 23, 2020, 17:12 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X