ಷೇರು ಹೂಡಿಕೆದಾರರ ಸಂಪತ್ತು 5 ಸೆಷನ್ ನಲ್ಲಿ 6 ಲಕ್ಷ ಕೋಟಿ ರು. ಹೆಚ್ಚಳ

ಈ ತಿಂಗಳಲ್ಲಿ, ಅಂದರೆ ಅಕ್ಟೋಬರ್ ನಲ್ಲಿ ಇಲ್ಲಿಯ ತನಕ ಸೆನ್ಸೆಕ್ಸ್- ನಿಫ್ಟಿ ತಲಾ 3% ಹೆಚ್ಚಳ ಆಗಿದೆ. ಹೂಡಿಕೆದಾರರ ಸಂಪತ್ತು ಐದು ಟ್ರೇಡಿಂಗ್ ಸೆಷನ್ ನಲ್ಲಿ 6 ಲಕ್ಷ ಕೋಟಿ ರುಪಾಯಿ ಹೆಚ್ಚಳವಾಗಿದೆ. ಬಿಎಸ್ ಇಯಲ್ಲಿ ಲಿಸ್ಟ್ ಆಗಿರುವ ಎಲ್ಲ ಸಂಸ್ಥೆಗಳ ಮಾರುಕಟ್ಟೆ ಬಂಡವಾಳ ಮೌಲ್ಯ ಒಟ್ಟು ಸೇರಿ ಸೆಪ್ಟೆಂಬರ್ 30ರ ಕೊನೆಗೆ 155.24 ಲಕ್ಷ ಕೋಟಿ ಇತ್ತು. ಅದೀಗ ಗುರುವಾದ ದಿನದ ಆರಂಭದ ವಹಿವಾಟಿನಲ್ಲಿ 161.07 ಲಕ್ಷ ಕೋಟಿ ರುಪಾಯಿಗೆ ಹೆಚ್ಚಳವಾಗಿದೆ.

ಇದರಿಂದಾಗಿ ಹೂಡಿಕೆದಾರರ ಸಂಪತ್ತಿಗೆ 6 ಲಕ್ಷ ಕೋಟಿ ರುಪಾಯಿ ಸೇರ್ಪಡೆ ಆಗಿದೆ. ಸೆಪ್ಟೆಂಬರ್ ಇಡೀ ತಿಂಗಳಲ್ಲಿ ಮೇ ತಿಂಗಳ ನಂತರ ಅತ್ಯಂತ ಕೆಟ್ಟ ಸಮಯ ಆಗಿತ್ತು. ಹೂಡಿಕೆದಾರರ ಸಂಪತ್ತು 1 ಲಕ್ಷ ಕೋಟಿಗಿಂತ ಕಡಿಮೆ ಸೇರ್ಪಡೆ ಆಗಿತ್ತು. ದಿನದ ಆರಂಭದಲ್ಲಿ ಸೆನ್ಸೆಕ್ಸ್ 400 ಪಾಯಿಂಟ್ ಅಥವಾ 1% ಹೆಚ್ಚಳವಾಗಿ, 40 ಸಾವಿರ ಪಾಯಿಂಟ್ ಗಳ ಗಡಿ ದಾಟಿತು.

ಫೆಬ್ರವರಿ 25ರ ನಂತರ ಸೆನ್ಸೆಕ್ಸ್ 40 ಸಾವಿರ ಪಾಯಿಂಟ್ ಗಳ ಮೇಲೆ ವಹಿವಾಟು ನಡೆಸಿದೆ. ನಿಫ್ಟಿ 50 ಸೂಚ್ಯಂಕವು 11,800ರ ಗಡಿ ದಾಟಿ, ವ್ಯವಹಾರ ನಡೆಸುತ್ತಿದೆ. ಸೂಚ್ಯಂಕಗಳು ಏರಿಕೆ ಕಂಡಿದ್ದರೂ ಬಿಎಸ್ ಇ ಸ್ಮಾಲ್ ಕ್ಯಾಪ್ ಹಾಗೂ ಮಿಡ್ ಕ್ಯಾಪ್ ಸೂಚ್ಯಂಕಗಳು ತಲಾ 1%ಗಿಂತ ಕಡಿಮೆ ಏರಿಕೆ ಕಂಡವು.

ಷೇರು ಹೂಡಿಕೆದಾರರ ಸಂಪತ್ತು 5 ಸೆಷನ್ ನಲ್ಲಿ 6 ಲಕ್ಷ ಕೋಟಿ ರು. ಹೆಚ್ಚಳ

ದೇಶೀಯ ಈಕ್ವಿಟಿಯಲ್ಲಿನ ಚಲನೆ ಹಾಗೂ ವಿದೇಶೀ ಹರಿವಿನಿಂದಾಗಿ ಮೇಲ್ಮುಖವಾದ ಏರಿಕೆ ಬಲವಾಗಿ ದಾಖಲಿಸಿತು. ಮುಂಬರುವ ದಿನಗಳಲ್ಲಿ ನಿಫ್ಟಿ ಸೂಚ್ಯಂಕವು 12 ಸಾವಿರ ಪಾಯಿಂಟ್ ಗಳ ಗಡಿ ದಾಟಲಿದೆ ಎಂದು ವಿಶ್ಲೇಷಕರು ಅಭಿಪ್ರಾಯ ಪಡುತ್ತಾರೆ. ಎರಡನೇ ತ್ರೈಮಾಸಿಕದ ಫಲಿತಾಂಶಗಳು ಬರುತ್ತಿರುವುದರಿಂದ ಈಕ್ವಿಟಿ ಮಾರ್ಕೆಟ್ ನಲ್ಲಿ ಚಲನೆ ಕಂಡುಬರುತ್ತದೆ ಎಂದು ಷೇರು ಬ್ರೋಕಿಂಗ್ ಸಂಸ್ಥೆಗಳು ಅಭಿಪ್ರಾಯ ಪಟ್ಟಿವೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+