ರಿಲಯನ್ಸ್ ಇಂಡಸ್ಟ್ರೀಸ್ ಗೆ ಸಮೂಹ ಅಧ್ಯಕ್ಷರಾಗಿ ಸಂಜೀವ್ ಸಿಂಗ್ ಸೇರ್ಪಡೆ

ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOCL) ಮಾಜಿ ಅಧ್ಯಕ್ಷ ಸಂಜೀವ್ ಸಿಂಗ್ ಅವರು ರಿಲಯನ್ಸ್ ಇಂಡಸ್ಟ್ರೀಸ್ ಗೆ ಸಮೂಹ ಅಧ್ಯಕ್ಷರಾಗಿ ಸೇರ್ಪಡೆಯಾಗಿದ್ದಾರೆ. ಮತ್ತು ಇದರ ಜತೆಗೆ ಆಯಿಲ್-ಟು-ಕೆಮಿಕಲ್ಸ್ (O2C) ವ್ಯವಹಾರದ ನಾಯಕತ್ವ ತಂಡದ ಸದಸ್ಯರಾಗಿಯೂ ಇರುತ್ತಾರೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ಸಂಜೀವ್ ಸಿಂಗ್ ಅವರು ಈ ವರ್ಷದ ಜೂನ್ 30ರಂದು IOCLನಲ್ಲಿ ತಮ್ಮ ಅವಧಿಯನ್ನು ಮುಗಿಸಿದ್ದಾರೆ. ರಿಲಯನ್ಸ್ O2C ವ್ಯವಹಾರದ ಬೆನ್ನೆಲುಬು ಎಂದು ಗುರುತಿಸಲಾದ ಸಮೂಹದ ಪ್ರಮುಖ ಉತ್ಪಾದನಾ ಸೇವೆಯನ್ನು ಇನ್ನು ಮುಂದೆ ಮುನ್ನಡೆಸಲಿದ್ದಾರೆ. ಸಿಂಗ್ ಅವರು 2017ರ ಜೂನ್ ನಲ್ಲಿ IOCL ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿದ್ದರು.

ಸಂಜೀವ್ ಸಿಂಗ್ ಅವರು ಐಐಟಿ- ರೂರ್ಕೀಯಿಂದ ಕೆಮಿಕಲ್ ಎಂಜಿನಿಯರಿಂಗ್ ಹಾಗೂ ಡಿಪ್ಲೊಮಾ ಇನ್ ಮ್ಯಾನೇಜ್ ಮೆಂಟ್ ಪೂರ್ಣಗೊಳಿಸಿದ್ದು, 1981ರಲ್ಲಿ ತೈಲ ಮಾರ್ಕೆಟಿಂಗ್ ಕಂಪೆನಿಯನ್ನು ಸೇರಿದ್ದರು. ಅವರು ಐಒಸಿಎಲ್ ನಲ್ಲಿ ಹಲವು ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ.

ರಿಲಯನ್ಸ್ ಇಂಡಸ್ಟ್ರೀಸ್ ಸಮೂಹ ಅಧ್ಯಕ್ಷರಾಗಿ ಸಂಜೀವ್ ಸಿಂಗ್ ಸೇರ್ಪಡೆ

ರಿಲಯನ್ಸ್ ಗೆ ಸಿಂಗ್ ನೇಮಕ ಮಾಡಿರುವುದು ಹಲವರ ಹುಬ್ಬೇರುವಂತೆ ಮಾಡಿದೆ. ನಿಯಮಾವಳಿ ಪ್ರಕಾರ, ಅಧ್ಯಕ್ಷ ಅಥವಾ ನಿರ್ದೇಶಕ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುವವರು ಅಲ್ಲಿಂದ ನಿರ್ಗಮಿಸಿದ ನಂತರ ಆರು ತಿಂಗಳು ಬೇರೆಲ್ಲೂ ಕಾರ್ಯ ನಿರ್ವಹಿಸುವಂತಿಲ್ಲ. ಆದರೆ ಸಂಜೀವ್ ಸಿಂಗ್ ನಿವೃತ್ತರಾಗಿ ಕೇವಲ ಎರಡು ತಿಂಗಳಾಗಿದೆ.

ಸಾರ್ವಜನಿಕ ಸ್ವಾಮ್ಯದ ನಿರ್ದೇಶಕರು ಮತ್ತು ಅಧ್ಯಕ್ಷರು ಒಂದು ಬಾಂಡ್ ಗೆ ಸಹಿ ಹಾಕಬೇಕು. ತಮ್ಮ ಸಂಸ್ಥೆ ಜತೆಗೆ ವ್ಯಾವಹಾರಿಕ ಸಂಬಂಧ ಹೊಂದಿರುವ ಯಾವುದೇ ಕಂಪೆನಿ ಜತೆಗೆ ನಿವೃತ್ತಿಯಾದ ಒಂದು ವರ್ಷದ ತನಕ ಸರ್ಕಾರದ ಅನುಮತಿ ಇಲ್ಲದೆ ಕೆಲಸ ಮಾಡುವುದಿಲ್ಲ ಎಂಬ ಒಪ್ಪಂದ ಅದಾಗಿರುತ್ತದೆ. ಅಥವಾ ಆರು ತಿಂಗಳ ವೇತನವನ್ನು ಪರಿಹಾರ ಎಂಬಂತೆ (ಆ ಮೊತ್ತ ಹತ್ತರಿಂದ ಹದಿನೈದು ಲಕ್ಷ ರುಪಾಯಿ) ಸರ್ಕಾರಕ್ಕೆ ಪಾವತಿಸಬೇಕಾಗುತ್ತದೆ ಎಂದು ತೈಲ ಮಾರ್ಕೆಟಿಂಗ್ ಕಂಪೆನಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+