ಐಫೋನ್ 11, ಐಫೋನ್ 11 ಪ್ರೋ ಹಾಗೂ ಐಫೋನ್ 11 ಮ್ಯಾಕ್ಸ್ ಮೊಬೈಲ್ ಫೋನ್ ಬಳಸುತ್ತಿರುವ ಕೆಲವರು ಟಚ್ ಸ್ಕ್ರೀನ್ ಸಮಸ್ಯೆ ಎದುರಿಸುತ್ತಿರುವ ಬಗ್ಗೆ ಆಪಲ್ ಕಂಪೆನಿ ಘೋಷಣೆ ಮಾಡಿದೆ. ದೋಷಪೂರಿತ ಡಿಸ್ ಪ್ಲೇ ಈ ಸಮಸ್ಯೆಗೆ ಕಾರಣ ಎಂದಿರುವ ಕಂಪೆನಿ, ಸೀಮಿತವಾದ ಐಫೋನ್ 11 ಮಾಡೆಲ್ ನಲ್ಲಿ ಸಮಸ್ಯೆ ಉಂಟು ಮಾಡುತ್ತಿದೆ ಎಂದು ಹೇಳಿದೆ. ಆ ಕಾರಣಕ್ಕೆ ಐಫೋನ್ 11 ಡಿಸ್ ಪ್ಲೇ ಮಾಡ್ಯುಲ್ ಬದಲಿ ಪ್ರೋಗ್ರಾಂ ಶುರು ಮಾಡಿದೆ.
ಯಾವ ಐಫೋನ್ 11 ಡಿಸ್ ಪ್ಲೇ ಬದಲಾವಣೆಗೆ ಅರ್ಹವಿದೆಯೋ ಅಂಥದ್ದನ್ನು ಬದಲಿಸಿಕೊಡಲಾಗುತ್ತದೆ. ಡಿಸ್ ಪ್ಲೇ ಮಾಡ್ಯುಲ್ ಸಮಸ್ಯೆ ಇರುವುದರಿಂದ ತುಂಬ ಸಣ್ಣ ಪ್ರಮಾಣದ ಐಫೋನ್ 11 ಡಿಸ್ ಪ್ಲೇ ಟಚ್ ಸ್ಕ್ರೀನ್ ಪ್ರತಿಕ್ರಿಯೆ ನಿಲ್ಲಿಸಿರಬಹುದು. 2019ರ ನವೆಂಬರ್ ನಿಂದ 2020ರ ಮಧ್ಯೆ ಈ ಫೋನ್ ಗಳು ತಯಾರಾಗಿವೆ.
ಯಾವ ಐಫೋನ್ 11, ಐಫೋನ್ 11 ಪ್ರೋ ಹಾಗೂ ಐಫೋನ್ 11 ಮ್ಯಾಕ್ಸ್ ಮೊಬೈಲ್ ಫೋನ್ ಬದಲಾವಣೆ ಮಾಡಿಕೊಳ್ಳುವುದಕ್ಕೆ ಅರ್ಹತೆ ಪಡೆದಿದೆ ಎಂದು ತಿಳಿದುಕೊಳ್ಳುವುದಕ್ಕೆ "Replacement program page"ಗೆ ಭೇಟಿ ನೀಡಬೇಕು. ಇನ್ನು ಸೀರಿಯಲ್ ಸಂಖ್ಯೆ ಗೊತ್ತಾಗ ಬೇಕಾದಲ್ಲಿ ಹೀಗೆ ಮಾಡಬೇಕು.

* ಸೆಟ್ಟಿಂಗ್ಸ್ ಗೆ ತೆರಳಿ, ಜನರಲ್ ಎಂಬ ಆಯ್ಕೆ ಮಾಡಿಕೊಳ್ಳಬೇಕು
* ಎಬೌಟ್ ಎಂಬುದನ್ನು ಕ್ಲಿಕ್ ಮಾಡಬೇಕು
* ಸೀರಿಯಲ್ ನಂಬರ್ ಮಾಹಿತಿ ಅಲ್ಲಿ ಸಿಗುತ್ತದೆ
ಇನ್ನು ಐಫೋನ್ 11, ಐಫೋನ್ 11 ಪ್ರೋ ಹಾಗೂ ಐಫೋನ್ 11 ಮ್ಯಾಕ್ಸ್ ಮೊಬೈಲ್ ಫೋನ್ ರೀಟೇಲ್ ಬಾಕ್ಸ್ ಬಾರ್ ಕೋಡ್ ಕೆಳಗೆ ಸೀರಿಯಲ್ ಸಂಖ್ಯೆ ಮುದ್ರಿತವಾಗಿರುತ್ತದೆ. ಒಂದು ವೇಳೆ ಫೋನ್ ನ ಡಿಸ್ ಪ್ಲೇ ರೀಪೇಸ್ ಮೆಂಟ್ ಮಾಡಿಸಬೇಕಿದ್ದಲ್ಲಿ ಹತ್ತಿರದ ಆಪಲ್ ಅಥವಾ ಆಪಲ್ ನವರ ಅಧಿಕೃತ ಸೇವಾ ಕೇಂದ್ರದಲ್ಲಿ ಸಮಯ ನಿಗದಿ ಮಾಡಿಕೊಂಡು, ಭೇಟಿ ನೀಡಬೇಕು.
ಡಿಸ್ ಪ್ಲೇ ಬದಲಿಸಿಕೊಳ್ಳುವುದಕ್ಕೆ ಫೋನ್ ಅನ್ನು ನೀಡುವ ಮುನ್ನ ಐಕ್ಲೌಡ್ ಅಥವಾ ಕಂಪ್ಯೂಟರ್ ಗೆ ಫೋನ್ ನೊಳಗಿನ ಮಾಹಿತಿಯನ್ನು ತೆಗೆದಿಟ್ಟುಕೊಳ್ಳಬೇಕು. ಡಿಸ್ ಪ್ಲೇ ಹೊರತಾಗಿ ಬೇರೆ ಸಮಸ್ಯೆ ಇದ್ದಲ್ಲಿ ಅದರ ಜವಾಬ್ದಾರಿಯನ್ನು ಕಂಪೆನಿ ವಹಿಸಿಕೊಳ್ಳಲ್ಲ. ಕೆಲವು ಪ್ರಕರಣದಲ್ಲಿ ಹೆಚ್ಚುವರಿ ರಿಪೇರಿಗೆ ವೆಚ್ಚ ತಗುಲುತ್ತದೆ.
ಒಂದು ವೇಳೆ ಈ ಹಿಂದೆಯೇ ಟಚ್ ಸ್ಕ್ರೀನ್ ಸಮಸ್ಯೆ ಎಂಬ ಕಾರಣಕ್ಕೆ ಹಣ ಕೊಟ್ಟು ಡಿಸ್ ಪ್ಲೇ ರೀಪ್ಲೇಸ್ ಮಾಡಿದ್ದಲ್ಲಿ ಹಣ ವಾಪಸ್ ದೊರೆಯಲಿದೆ. ಐಫೋನ್ 11 ಮಾರಾಟ ಮಾಡಿದ ದಿನದಿಂದ ಎರಡು ವರ್ಷದ ತನಕ ಈ ಬದಲಿ ಕಾರ್ಯಕ್ರಮ ಅನ್ವಯ ಆಗುತ್ತದೆ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?



Click it and Unblock the Notifications