ಆಪಲ್ iPhone SE (2020) ಸದ್ದಿಲ್ಲದೆ ಬಿಡುಗಡೆ; ಭಾರತದಲ್ಲಿ ಎಷ್ಟಿದೆ ಬೆಲೆ?

ಆಪಲ್ ಕಂಪೆನಿಯು ಎರಡನೇ ತಲೆಮಾರಿನ iPhone SE ಮೊಬೈಲ್ ಫೋನ್ ಗಳನ್ನು ಭಾರತ ಸೇರಿದಂತೆ ಜಾಗತಿಕ ಮಾರುಕಟ್ಟೆಯಲ್ಲಿ ಬುಧವಾರ ಬಿಡುಗಡೆ ಮಾಡಿದೆ. ಮೊದಲಿಗೆ ಕಂಪೆನಿಯು ಫೋನ್ ನ ಆರಂಭಿಕ ಅವತರಣಿಕೆ ಬೆಲೆ ಎಷ್ಟಿರುತ್ತದೆ ಎಂಬ ಮಾಹಿತಿಯನ್ನು ಮಾತ್ರ ಬಿಟ್ಟುಕೊಟ್ಟಿತ್ತು. ಆದರೆ ಈಗ ಆಪಲ್ ಇಂಡಿಯಾ ವೆಬ್ ಸೈಟ್ ನಲ್ಲಿ ಬೆಲೆಯ ಸಂಪೂರ್ಣ ವಿವರ ಲಭ್ಯವಿದೆ.

iPhone SE (2020) ಬೇಸಿಕ್ ಅಂದರೆ 64 GB ಫೋನ್ ನ ಬೆಲೆ ಭಾರತದಲ್ಲಿ 42,500 ರುಪಾಯಿ ಇದೆ. 256 GBಯ ಫೋನ್ ಬೆಲೆ 58,300, 128 GB ಫೋನ್ ಬೆಲೆ 47,800 ರುಪಾಯಿ ಇದೆ. ಆದರೆ ಖರೀದಿಗೆ ಯಾವಾಗಿನಿಂದ ಲಭ್ಯವಿದೆ ಎಂಬ ಮಾಹಿತಿಯನ್ನು ನೀಡಿಲ್ಲ.

ಅಂದಹಾಗೆ iPhone SE (2020) ಬಿಡುಗಡೆ ಆದ ಮೇಲೆ ಭಾರತದಲ್ಲಿ iPhone 8ರ ಮಾರಾಟವನ್ನು ಆಪಲ್ ನಿಲ್ಲಿಸಲಿದೆ. ಆಪಲ್ ಇಂಡಿಯಾ ವೆಬ್ ಸೈಟ್ ನಿಂದ ಆ ಫೋನ್ ನ ಮಾಹಿತಿ ತೆಗೆಯಲಾಗಿದೆ. ಆ ಮೊಬೈಲ್ ಫೋನ್ ಈಗ ಅಪಲ್ ನ ಅಧಿಕೃತ ಮಾರಾಟಗಾರರ ಬಳಿ ಖರೀದಿಗೆ ಲಭ್ಯವಿಲ್ಲ. ಆದರೆ iPhone 8 Plus ಖರೀದಿ ಮಾಡಬಹುದು.

ಆಪಲ್ iPhone SE (2020) ಬಿಡುಗಡೆ; ಭಾರತದಲ್ಲಿ ಎಷ್ಟಿದೆ ಬೆಲೆ?

ಅಂದಹಾಗೆ iPhone SE (2020) ಎಂಬುದು ಈ ಹಿಂದೆ 2016ರಲ್ಲಿ ಬಿಡುಗಡೆಯಾಗಿದ್ದ iPhone SE ಫೋನ್ ನ ಮುಂದುವರಿದ ಸಿರೀಸ್. iPhone 11ರ ಹಲವು ವೈಶಿಷ್ಟ್ಯಗಳು iPhone SE (2020)ಯಲ್ಲಿ ಕೂಡ ಇವೆ. ಭಾರತದಲ್ಲಿ iPhone 7 ಮಾರಾಟವನ್ನು ಮುಂದುವರಿಸಲಿದೆ. 32 GB ಸಾಮರ್ಥ್ಯದ ಫೋನ್ ಬೆಲೆ 31,500 ನಿಗದಿಯಾಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+