ಆಪಲ್ ಕಂಪೆನಿಯ iPhone SE (2020) ಭಾರತದಲ್ಲಿ ಮಾರಾಟ ಆರಂಭಿಸುವ ದಿನಾಂಕ ಅಂತೂ ಖಾತ್ರಿ ಆಗಿದೆ. ಅಂದ ಹಾಗೆ iPhone SE (2020) ಮಾಡೆಲ್ ಅನ್ನು ಕಂಪೆನಿ ಸದ್ದಿಲ್ಲದೆ ಬಿಡುಗಡೆ ಮಾಡಿತ್ತು. ಲಾಕ್ ಡೌನ್ ಇದ್ದಿದ್ದರಿಂದ ಭಾರತದಲ್ಲಿ ಯಾವಾಗ ಖರೀದಿಗೆ ಲಭ್ಯ ಎಂಬ ಮಾಹಿತಿ ಕೂಡ ಸಿಕ್ಕಿರಲಿಲ್ಲ.
ಈಗಲೂ ಭಾರತದಲ್ಲಿ ಲಾಕ್ ಡೌನ್ ಇದೆ. ಆದರೆ ಇ- ಕಾಮರ್ಸ್ ಕಂಪೆನಿಗಳು ಪೂರ್ಣ ಪ್ರಮಾಣದಲ್ಲಿ ಕೆಲಸ ಶುರು ಮಾಡಬಹುದು ಎಂದು ಸರ್ಕಾರ ಅನುಮತಿ ನೀಡಿದೆ. ಆದರೆ ಕೆಲವು ನಿಯಮಗಳಿವೆ (ಸದ್ಯಕ್ಕೆ ಆರೆಂಜ್ ಮತ್ತು ಹಸಿರು ವಲಯದಲ್ಲಿ ಮಾತ್ರ ಡೆಲಿವರಿ ನೀಡಬಹುದು).
ಭಾರತದಲ್ಲಿ iPhone SE (2020) ಬೆಲೆ ಎಷ್ಟು?
ಅಂದಹಾಗೆ, iPhone SE (2020) ಫ್ಲಿಪ್ ಕಾರ್ಟ್ ನಲ್ಲಿ ಮೇ 20ನೇ ತಾರೀಕಿನಿಂದ ಲಭ್ಯವಿದೆ. ಬೇರೆ ಮಾರಾಟ ಪ್ಲಾಟ್ ಫಾರ್ಮ್ ಗಳಲ್ಲೂ ಅದೇ ಸಮಯಕ್ಕೆ ಲಭ್ಯವಿರುತ್ತದೆ. iPhone SE (2020) ಭಾರತದಲ್ಲಿ ಬೆಲೆ ಎಷ್ಟು ಎಂಬ ವಿವರ ಹೀಗಿದೆ:
* iPhone SE (2020) 64 GB 42,500 ರುಪಾಯಿ
* iPhone SE (2020) 128 GB 47,800 ರುಪಾಯಿ
* iPhone SE (2020) 256 GB 58,300 ರುಪಾಯಿ
ಆಫರ್ ಗಳು ಏನಿವೆ?
iPhone SE (2020) ಭಾರತದಲ್ಲಿ ಮಾರಾಟ ಆರಂಭವಾಗುವಾಗ ಇರುವ ಆಫರ್ ಹೀಗಿದೆ. ಎಚ್ ಡಿಎಫ್ ಸಿ ಬ್ಯಾಂಕ್ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಬಳಸಿ iPhone SE (2020) ಖರೀದಿ ಮಾಡಿದರೆ 3,600 ರುಪಾಯಿ ತಕ್ಷಣ ರಿಯಾಯಿತಿ ಸಿಗುತ್ತದೆ. ಗರಿಷ್ಠ ಕ್ಯಾಶ್ ಬ್ಯಾಕ್ ಸಿಕ್ಕ ನಂತರ ಹೊಸ iPhone SE (2020) ಬೆಲೆ ಹೀಗಿದೆ.
* iPhone SE (2020) 64 GB 38,900 ರುಪಾಯಿ
* iPhone SE (2020) 128 GB 44,200 ರುಪಾಯಿ
* iPhone SE (2020) 256 GB 54,700 ರುಪಾಯಿ
iPhone SE (2020) ವೈಶಿಷ್ಟ್ಯ ಹಾಗೂ ಫೀಚರ್
iPhone 8ರಂತೆ ಕಾಣುವ ಈ ಫೋನ್ ನ ಒಳಗೆ iPhone 11ರ ವೈಶಿಷ್ಟ್ಯಗಳಿವೆ. ಅದರದೇ ಗ್ಲಾಸ್ ಮತ್ತು ಮೆಟಲ್ ಡಿಸೈನ್, ಟಚ್ ಐಡಿ, ಫಿಂಗರ್ ಪ್ರಿಂಟ್ ಸ್ಕ್ಯಾನರ್ ಹಾಗೂ 4.7 ಇಂಚಿನ ಎಲ್ ಸಿಡಿ ಡಿಸ್ ಪ್ಲೇ. iPhone 11ರಲ್ಲಿ ಇರುವ ಕ್ಯಾಮೆರಾವನ್ನೇ ಇದಕ್ಕೂ ಬಳಸಲಾಗಿದೆ. 12 MP ಕ್ಯಾಮೆರಾ ಜತೆಗೆ OIS ಇದೆ. iPhone SE (2020)ಗೆ ನೀರು ಹಾಗೂ ಧೂಳಿನಿಂದ ಸಂಪೂರ್ಣ ರಕ್ಷಣೆ ಇದೆ.
More From GoodReturns

LPG ಪೂರೈಕೆಯಲ್ಲಿ ಕೊರತೆ; ದೇಶದಲ್ಲಿ ಎಲ್ಪಿಜಿ ಉತ್ಪಾದನೆ 10% ಹೆಚ್ಚಳ

Egg Price Down: ಬೆಂಗಳೂರು ಮೊಟ್ಟೆ ಪ್ರಿಯರಿಗೆ ಗುಡ್ ನ್ಯೂಸ್; ಬೆಲೆ ಭಾರೀ ಇಳಿಕೆ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

ಶೀಘ್ರ ನಿವೃತ್ತಿ ಮತ್ತು ಆರ್ಥಿಕ ಸ್ವಾತಂತ್ರ್ಯ...ಭಾರತೀಯ ಯುವಕರಿಗಾಗಿ FIRE ಚಳುವಳಿ ರಹಸ್ಯಗಳು!

Market Prediction: ನಾಳೆ ಹೇಗಿರಲಿದೆ ಷೇರು ಮಾರುಕಟ್ಟೆ? ಲಾಭವೋ? ನಷ್ಟವೋ? ಇಲ್ಲಿದೆ ಓದಿ

Silver Rate Today: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ಬೆಲೆ! ಎಷ್ಟಿದೆ ಇಂದಿನ ದರ?

Silver Rate Kannada: ಬೆಳ್ಳಿ ಪ್ರಿಯರಿಗೆ ಗುಡ್ ನ್ಯೂಸ್; ಒಂದೇ ದಿನ 5,000 ರೂ. ಇಳಿಕೆ

Bank Holidays: ಮಾರ್ಚ್ನಲ್ಲಿ ಬ್ಯಾಂಕ್ಗಳಿಗೆ 18 ದಿನ ರಜೆ! ಗ್ರಾಹಕರೇ ಇಲ್ಲಿ ಗಮನಿಸಿ

Silver Price Today: ಭಾನುವಾರ ನಿಂತಲ್ಲೇ ನಿಂತ ಬೆಳ್ಳಿ ದರ! ಅತ್ತ ಏರಿಕೆಯೂ ಇಲ್ಲ, ಇಳಿಕೆಯೂ ಇಲ್ಲ

Silver Rate: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

India Oil: ಇಸ್ರೇಲ್, ಯುಎಸ್ ಮತ್ತು ಇರಾನ್ ನಡುವೆ ವಾರ್! ಭಾರತದ ಕಚ್ಚಾ ತೈಲದ ಮೇಲೆ ಪರಿಣಾಮ ಬೀರಿದ್ದು ಹೇಗೆ?



Click it and Unblock the Notifications