ಈ ಬಾರಿ ಕಪ್ ನಮ್ಮದೇ ಎಂಬ ಜೋಶ್‌ನಲ್ಲಿರುವ RCB ಅಭಿಮಾನಿಗಳು ತಂಡಕ್ಕೆ ಎಂದಿನಂತೆ ಹಾರೈಸುತ್ತಿದ್ದಾರೆ. ಆದರೆ ಬೆಳಗಾವಿ ಜಿಲ್ಲೆಯ ಗೋಕಾಕ್‌ನ RCB ಅಭಿಮಾನಿಯಾದ ಶಿವಾನಂದ ಎಂಬುವವರು ಸಿಎಂ ಸಿದ್ದರಾಮಯ್ಯ ಅವರಿಗೆ ಬರೆದಿದ್ದು ಎನ್ನಲಾದ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೈರಲ್ ಪತ್ರದಲ್ಲಿ RCB ಫೈನಲ್ ಗೆ ಹೋಗಿ, ಕಪ್ ಗೆದ್ದರೆ ಆ ದಿನವನ್ನು RCB ಫ್ಯಾನ್ಸ್ ಹಬ್ಬ ಮತ್ತು ಒಂದು ದಿನ ರಜೆ ಘೋಷಣೆ ಮಾಡುವಂತೆ ಮನವಿ ಮಾಡಿಕೊಳ್ಳಲಾಗಿದೆ. ಸದ್ಯ ಈ ಪತ್ರ ವೈರಲ್ ಆಗುತ್ತಿದೆ.ಇತ್ತ ಇದರ ಜೊತೆಗೆ ಕಪ್ ಗೆಲ್ಲದಿದ್ರೆ ಗಂಡನಿಗೆ ಡಿವೋರ್ಸ್ ಎಂಬ ಸುದ್ದಿ ಕೂಡ ಹರಿದಾಡುತ್ತಿದೆ.
ಹೌದು, ಆರ್ ಸಿಬಿ ಅಭಿಮಾನಿ ಶಿವಾನಂದ್ ಮಲ್ಲಣ್ಣವರ್ ಎಂಬುವರ ಪತ್ರ ಸಾಮಾಜಿಕ ಜಾಲತಾಣದಲ್ಲಿ ಕಳೆದ ಎರಡು ದಿನದಿಂದ ಈ ಪತ್ರ ಸಾಮಾಜಿಕ ಜಾಲತಾಣದಲ್ಲಿ ಬಹುಬೇಗನೆ ಸಖತ್ ವೈರಾಲ್ ಆಗಿತ್ತು. ಆರ್‌ಸಿಬಿಯ 18ವರ್ಷದ ಕಪ್ ಗೆಲುವು ಕನಸು ನಸಾಗಲು ಇಂದು ಗೆಲವು ಮಾತ್ರ ಬಾಕಿ ಇದೆ. ಐಪಿಎಲ್ 2025ರಲ್ಲಿ ಬಹುನಿರೀಕ್ಷಿತ ವಿಜಯವನ್ನು ಆರ್ ಸಿಬಿ ಗೆದ್ದರೆ, ಈ ದಿನವನ್ನು ಗೌರವದಿಂದ ಸಂಭ್ರಮಿಸಲು ರಾಜ್ಯಾದ್ಯಂತ ಆಚರಣೆಯಾಗಿ ಅಧಿಕೃತವಾಗಿ ರಜೆಯನ್ನು ಗೊತ್ತುಪಡಿಸುವಂತೆ ಮಲ್ಲಣ್ಣವರ್ ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ.ಇದರ ಜೊತಗೆ ಪ್ರತಿ ವರ್ಷವು ಈ ದಿನವನ್ನು ಸ್ಮರಿಸಲು "ಆರ್‌ಸಿಬಿ ಅಭಿಮಾನಿಗಳ ಉತ್ಸವ" ದಿನವನ್ನಾಗಿ ಆಚರಿಸಬೇಕು ಎಂದು ಪ್ರಸ್ತಾಪ ಕೂಡ ಮಾಡಿದ್ದಾರೆ.

ಈ ಬಾರಿ ಆರ್‌ಸಿಬಿ ಐಪಿಎಲ್ ಟ್ರೋಫಿ ಗೆದ್ದರೆ, ದಯವಿಟ್ಟು ಜೂನ್ 3 ಅನ್ನು ಕರ್ನಾಟಕದಾದ್ಯಂತ ಸಾರ್ವಜನಿಕ ರಜಾದಿನವೆಂದು ಘೋಷಿಸಿ ಮತ್ತು ನಾವು ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸುವಂತೆಯೇ ಅದನ್ನು 'ಆರ್‌ಸಿಬಿ ಅಭಿಮಾನಿಗಳ ಹಬ್ಬ' ಎಂದು ಆಚರಿಸಿ ಎಂದು ಪತ್ರದಲ್ಲಿ ಬರೆದಿದ್ದಾರೆ. ಆರ್‌ಸಿಬಿ ಅಭಿಮಾನಿಯು ಮುಖ್ಯಮಂತ್ರಿಯನ್ನು ರಾಜ್ಯಾದ್ಯಂತ ಉತ್ಸವಗಳಿಗೆ ಅನುಕೂಲ ಮಾಡಿಕೊಡುವಂತೆಯೂ, ಪ್ರತಿ ಜಿಲ್ಲೆಯಾದ್ಯಂತ ಸರ್ಕಾರಿ ಬೆಂಬಲಿತ ಸಾರ್ವಜನಿಕ ಆಚರಣೆಗಳನ್ನು ನಡೆಸುವಂತೆಯೂ ಒತ್ತಾಯಿಸಿದರು.
ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಆಚರಣೆಗಳಿಗೆ ವ್ಯವಸ್ಥೆ ಮಾಡಬೇಕೆಂದು ನಾವು ಸರ್ಕಾರವನ್ನು ವಿನಂತಿಸುತ್ತೇವೆ, ಇದರಿಂದ ಅಭಿಮಾನಿಗಳು ಒಟ್ಟಾಗಿ ಈ ಐತಿಹಾಸಿಕ ಕ್ಷಣವನ್ನು ಆಚರಣೆ ಮಾಡಬಹುದು ಎಂದು ಹೇಳಿದ್ದಾರೆ.
RCB ಕಪ್ ಗೆಲ್ಲದಿದ್ರೆ ಗಂಡನಿಗೆ ಡಿವೋರ್ಸ್
PBKS ವಿರುದ್ಧ ಗೆದ್ದು ಫೈನಲ್‌ಗೆ ಲಗ್ಗೆ ಇಟ್ಟಿರುವ ಆರ್‌ಸಿಬಿ ತಂಡ ತನ್ನ ಮೊದಲ ಕಪ್ ಎತ್ತಿ ಇಡ್ಡಿಯಲು ಒಂದೇ ಒಂದು ಗೆಲವು ಮಾತ್ರ ಬಾಕಿ ಇದೆ. ಈ ಬಾರಿ ಖಂಡಿತ ಕಪ್ ನಮ್ಮದೇ ಎಂದು ಆಟಗಾರರು, ಅಭಿಮಾನಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇನ್ನೂ, ನಿನ್ನೆಯ ಪಂದ್ಯದ ವೇಳೆ ಸ್ಟೇಡಿಯಂನಲ್ಲಿ ಓರ್ವ ಮಹಿಳಾ ಅಭಿಮಾನಿ ಪ್ರದರ್ಶಿಸಿದ ಪೋಸ್ಟರ್ ವೈರಲ್ ಆಗಿದೆ. ಫೈನಲ್‌ನಲ್ಲಿ RCB ಗೆಲ್ಲದಿದ್ದರೆ ತನ್ನ ಪತಿಗೆ ಡಿವೋರ್ಸ್ ನೀಡುವುದಾಗಿ ಅವರು ಆ ಪೋಸ್ಟರ್‌ನಲ್ಲಿ ಬರೆದಿದ್ದರು. ಈ ಬಗ್ಗೆ ನೆಟಿಜನ್‌ಗಳು ತಮಾಷೆಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.
ಈ ವರ್ಷದ ಟಾಟಾ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡ ಭರ್ಜರಿ ಪೈಪೋಟಿ ಕೊಟ್ಟಿ ಪೈನಲ್ ಹಂತ ತಲುಪಿದೆ. ದೀರ್ಘಕಾಲದ ವನವಾಸಕ್ಕೆ ಒಂದು ಒಂದು ಗೆಲುವು ಬಾಕಿ ಇದೆ. ಆರ್‌ಸಿಬಿ ಪೈನಲ್ ತಲಿಪಿದ್ದು,ಬಹಳ ವರ್ಷಗಳಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಈ ಬಾರಿ ಆರ್‌ಸಿಬಿ ತಂಡ ಮತ್ತೆ ಭರವಸೆಯನ್ನು ಹುಟ್ಟಿಹಾಕಿದೆ. ಮೇ 27ರಂದು ಗುರುವಾರ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಲ್ಲಿ ನಡೆದ ಕ್ವಾಲಿಫೈಯರ್ 1 ರಲ್ಲಿ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧದ ಭರ್ಜರಿ ಗೆಲುವಿನೊಂದಿಗೆ ರಜತ್ ಪಾಟಿದಾರ್ ನೇತೃತ್ವದ ತಂಡ ಆರ್‌ಸಿಬಿ ಫೈನಲ್‌ಗೆ ಲಗ್ಗೆ ಇಟ್ಟಿತ್ತು. 14 ಪಂದ್ಯಗಳಲ್ಲಿ ಆರ್‌ಸಿಬಿ ತಂಡ ಒಂಬತ್ತು ಜಯಗಳೊಂದಿಗೆ ಲೀಗ್ ಹಂತವನ್ನು ಮುಗಿಸಿತು, ಅಗ್ರ-ಎರಡು ಸ್ಥಾನವನ್ನು ಗಳಿಸಿ ಪ್ಲೇಆಫ್ ನಲ್ಲಿ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಗಿಟ್ಟಿಸಿಕೊಂಡಿದದೆ. ನಾಳೆ ಅಹಮದಾಬಾದಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡುವೆಯುವ ಪೈನಲ್ ಟ್ರೋಫಿಗಾಗಿ ಕಾದಾಟದ ಪಂದ್ಯವನ್ನು ಇಡೀ ವಿಶ್ವವೇ ಕಾತುರದಿಂದ ಕಾಯುತ್ತಿದ್ದಾರೆ.
ಐಪಿಎಲ್ 2008 ರಲ್ಲಿ ಶುರುವಾಗಿದ್ದ ಆರ್‌ಸಿಬಿ ತಂಡ ಇಂದುವರೆಗೂ ಮೂರು ಬಾರಿ ರನ್ನರ್-ಅಪ್ (2009, 2011, 2016) ಪ್ರಶಸ್ತಿಯನ್ನು ಗೆದ್ದಿದೆ. ಆದರೆ ಒಂದು ಬಾರಿಯೂ ಕಪ್ ಗೆದಿಲ್ಲ ಆದರೂ ತನ್ನ ನಿಷ್ಠಾವಂತ ಅಭಿಮಾನಿಗಳನ್ನು ಉಳಿಸಿಕೊಂಡಿದೆ. ಆರ್‌ಸಿಬಿ ಮೇಲೆ ಇರುವ ಕ್ರೇಸ್ ಮಾತ್ರ ಎಂದಿಗೂ ಕಡಿಮೆಯಾಗುವುದಿಲ್ಲ. ಸೋತರು ಗೆದ್ದರೂ ಅಭಿಮಾನಿಗಳು ಆರ್‌ಸಿಬಿ ಮೇಲೆ ಇಟ್ಟಿರುವ ಭರವಸೆಯನ್ನು ಮಾತ್ರ ಕೈ ಬಿಟ್ಟಿಲ್ಲ.. ಗೆದ್ದರೂ ಆರ್‌ಸಿಬಿ ಸೋತರುನೂ ಆರ್‌ಸಿಬಿ ಎಂದು ಆರ್‌ಸಿಬಿಗೆ ಸಾಥ್ ಕೊಟ್ಟಿದ್ದಾರೆ.
ಇತ್ತೀಚೆಗೆ ಆರ್‌ಸಿಬಿ ಕಿಂಗ್ ವಿರಾಟ್ ಕೊಹ್ಲಿಗೆ ಗೌರವ ಸಲ್ಲಿಸಲು ಬಿಳಿ ನಂಬರ್ 18 ಶರ್ಟ್‌ಗಳನ್ನು ಧರಿಸಿ ಸಾವಿರಾರು ಸಂಖ್ಯೆಯಲ್ಲಿ ಬೆಂಬಲಿಗರು ಸೇರಿದ್ದರು. ಒಂದು ಚೆಂಡು ಬೌಲ್ ಮಾಡದೆಯೇ ಪಂದ್ಯ ರದ್ದಾದಾಗಲೂ ಅಭಿಮಾನಿಗಳು ಧಾರಾಕಾರ ಮಳೆಯನ್ನು ಲೆಕ್ಕಿಸದೆ ದಿಗ್ಗಜ ಬ್ಯಾಟ್ಸ್‌ಮನ್‌ಗೆ ಗೌರವ ಸಲ್ಲಿಸಿದ್ದಾರೆ.
ಈ 18ನೇ ವರ್ಷದ ಪರಿಶ್ರಮದ ವನವಾಸಕ್ಕೆ ಪ್ರತಿಫಲ ಸಿಗುವಂತಹ ದಿನ ಜೂನ್ 3ರಂದು ನೆಡೆಯುವ ಪಂದ್ಯ. ಕಿಂಗ್ ಕೊಹ್ಲಿ ವಿರಾಟ್ ಜರ್ಸಿ ನಂಬರ್ ಕೂಡ 18. ಅವರ ಹುಟ್ಟು ಹಬ್ಬ ಕೂಡ ಹದಿನೆಂಟು.. ಐಪಿಎಲ್ ಆವೃತ್ತಿ ಕೂಡ ಹದಿನೆಂಟು.. ಹದಿನೆಂಟುರ ನಂಟು ಗೆಲವು ಕೊಡುತ್ತಾ? ಎಂಬುವುದೇ ಕುತೂಹಲ. ಐಪಿಎಲ್ 18ನೇ ಅವೃತ್ತಿಯಲ್ಲಿ ಆರ್‌ಸಿಬಿ ತಂಡ ಕಪ್ ಗೆಲುತ್ತಾ ಎಂಬುವುದನ್ನು ಕಾದುನೋಡಬೇಕಿದೆ. ಸೋತರೂ ಗೆದ್ದರೂ ಆರ್‌ಸಿಬಿಗೆ ಇರುವ ಕ್ರೇಜ್ ಮಾತ್ರ ಕಡಿಮೆಯಾಗುವುದೇ ಇಲ್ಲ..


Click it and Unblock the Notifications