ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಆಂಡ್ ಟೂರಿಸಂ ಕಾರ್ಪೋರೇಷನ್ (ಐಆರ್‌ಸಿಟಿಸಿ) ಬೇಸಿಗೆ ಕಾಲದಲ್ಲಿ ಹಲವಾರು ಸಮ್ಮರ್ ಟೂರ್ ಪ್ಯಾಕೇಜ್‌ಗಳನ್ನು ಆರಂಭಿಸಿದೆ. ಈಗ ಮುಂಗಾರು ವೇಳೆ ಅಂತರಾಷ್ಟ್ರೀಯ ಪ್ರವಾಸ ಪ್ಯಾಕೇಜ್ ಅನ್ನು ಪರಿಚಯಿಸಿದೆ. ಭಾರತ್ ಗೌರವ್ ರೈಲು ಪ್ರವಾಸ , ಚಾರ್‌ಧಾಮ್ ಮೊದಲಾದ ಪ್ರವಾಸವನ್ನು ಆರಂಭಿಸಿದೆ. ಈ ಹಿಂದೆ ಭಾರತದೊಳಗಿನ ಹಲವಾರು ಪ್ರದೇಶಗಳಿಗೆ ಪ್ರವಾಸ ಪ್ಯಾಕೇಜ್ ಘೋಷಿಸಿದ್ದ ಐಆರ್‌ಸಿಟಿಸಿ ನಿಮಗೀಗ ಬಾಲಿಗೆ ಪ್ಯಾಕೇಜ್ ಮೂಲಕ ಹೋಗಲು ಅವಕಾಶ ನೀಡಿದೆ.
ಹೌದು, ನೀವು ಬಾಲಿ ಪ್ರವಾಸ ಹೋಗಬೇಕು ಅಂದುಕೊಂಡಿದ್ದೀರಾ? ಹಾಗಿದ್ದರೆ, ಈ ಪ್ರವಾಸ ಪ್ಯಾಕೇಜ್ ಮಾಹಿತಿ ನಿಮಗೆ ಸಹಾಯಕವಾಗಲಿದೆ. ಯಾಕೆಂದರೆ ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಆಂಡ್ ಟೂರಿಸಂ ಕಾರ್ಪೋರೇಷನ್ (ಐಆರ್‌ಸಿಟಿಸಿ) ಬಾಲಿ ಪ್ರವಾಸ ಪ್ಯಾಕೇಜ್ ಅನ್ನು ಇತ್ತೀಚೆಗೆ ಘೋಷಣೆ ಮಾಡಿದೆ. ಈ ಬಾಲಿ ಪ್ರವಾಸ ಪ್ಯಾಕೇಜ್‌ನಲ್ಲಿ ವಿಶೇಷ ರಿಯಾಯಿತಿಯೂ ನಿಮಗೆ ಲಭ್ಯವಾಗುತ್ತದೆ.

ನಿಮಗೆ ಕಡಿಮೆ ಬೆಲೆಯಲ್ಲಿ ಬಾಲಿ ಪ್ರವಾಸ ಮಾಡಲು ಇದು ಐಆರ್‌ಸಿಟಿಸಿಯ ಉತ್ತಮ ಅವಕಾಶವಾಗಿದೆ. ಯಾರು ಬಾಲಿ ಪ್ರವಾಸವನ್ನು ಮಾಡಲು ಬಯಸುತ್ತೀರೋ ಅವರು ಐಆರ್‌ಸಿಟಿಸಿ ವೆಬ್‌ಸೈಟ್‌ನಲ್ಲಿ ಪ್ಯಾಕೇಜ್‌ಗೆ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ. ಇದು ಸುಮಾರು ಆರು ದಿನಗಳ ಪ್ರವಾಸವಾಗಿದ್ದು, ಟೂರ್ ಆಗಸ್ಟ್ 8, 2023ರಿಂದ ಆರಂಭವಾಗುತ್ತದೆ. ಈ ಬಾಲಿ ಪ್ರವಾಸ ಪ್ಯಾಕೇಜ್ ಬಗ್ಗೆ ಇಲ್ಲಿದೆ ಅಧಿಕ ವಿವರ ಮುಂದೆ ಓದಿ.....
ಐಆರ್‌ಸಿಟಿಸಿಯ ಬಾಲಿ ಪ್ರವಾಸ ಪ್ಯಾಕೇಜ್ ವಿವರ
"ಅದ್ಭುತ ಬಾಲಿ ಪ್ರವಾಸದ ಮೂಲಕ ನೀವು ತಿಳಿದಿರದ ಬಾಲಿಯನ್ನು ತಿಳಿಯುವ ಪ್ರಯತ್ನವನ್ನು ಮಾಡಿ," ಎಂದು ಐಆರ್‌ಸಿಟಿಸಿ ಟ್ವೀಟ್ ಮೂಲಕ ತನ್ನ ಪ್ರವಾಸ ಪ್ಯಾಕೇಜ್‌ನ ಮಾಹಿತಿಯನ್ನು ನೀಡಿದೆ. ವೆಬ್‌ಸೈಟ್‌ನಲ್ಲಿ ಉಲ್ಲೇಖ ಮಾಡಿರುವ ಮಾಹಿತಿಯ ಪ್ರಕಾರ, ಈ ಅಂತರಾಷ್ಟ್ರೀಯ ಪ್ರವಾಸ ಪ್ಯಾಕೇಜ್‌ನಲ್ಲಿ ಉಬುದ್ ಗ್ರಾಮ, ಕ್ರೂಸ್ ಟೂರ್, ತನಾಹ್ ಲಾಟ್ ದೇವಸ್ಥಾನಕ್ಕೆ ಹಾಗೂ ಹಲವಾರು ಬೀಚ್‌ಗಳಿಗೆ ಭೇಟಿ ನೀಡಬಹುದಾಗಿದೆ.
ಬಾಲಿ ಪ್ರವಾಸ ಪ್ಯಾಕೇಜ್ ದರ
ಸುಮಾರು ಆರು ದಿನ, ಐದು ರಾತ್ರಿಗಳ ಪ್ಯಾಕೇಜ್ ಇದಾಗಿದ್ದು, ಆಸಕ್ತಿ ಹೊಂದಿರುವ ಪ್ರವಾಸಿಗರು 1,05,900 ರೂಪಾಯಿಗೆ ಈ ಬಾಲಿ ಪ್ರವಾಸ ಪ್ಯಾಕೇಜ್ ಅನ್ನು ಖರೀದಿ ಮಾಡಬಹುದಾಗಿದೆ. ಕೆಲವು ಪ್ರವಾಸಿಗರಿಗೆ ಐಆರ್‌ಸಿಟಿಸಿ ರಿಯಾಯಿತಿ ಮತ್ತು ವಿಶೇಷ ಆಫರ್‌ಗಳನ್ನು ನೀಡುತ್ತದೆ. ಯುಪಿಯ ಲಕ್ನೋದ ಚೌಧರಿ ಚರಣ್ ಸಿಂಗ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಏರ್ ಏಷ್ಯಾದ ಕನ್ಫಾರ್ಟ್ ಕ್ಲಾಸ್‌ನಲ್ಲಿ ಪ್ರವಾಸವು ಈ ಪ್ಯಾಕೇಜ್‌ನಲ್ಲಿ ಒಳಗೊಂಡಿರುತ್ತದೆ.
ಬಾಲಿ ಪ್ರವಾಸ ಪ್ಯಾಕೇಜ್‌ನಲ್ಲಿ ಏನೇನಿದೆ?
ದಿನ 1: ಆಗಸ್ಟ್ 8ರಂದು ಲಕ್ನೋ ವಿಮಾನ ನಿಲ್ದಾಣದಿಂದ ಪ್ರವಾಸ ಆರಂಭವಾಗಲಿದೆ.
ದಿನ 2: ಇಂಡೋನೇಷಿಯಾಕ್ಕೆ ಪ್ರವಾಸಿಗರು ತಲುಪಲಿದ್ದಾರೆ. ಅಲ್ಲಿ ವಸತಿ ವ್ಯವಸ್ಥೆ ಇರಲಿದೆ. ಡ್ಯಾನ್ಸ್, ಇತರೆ ಮನರಂಜನಾ ಕಾರ್ಯಕ್ರಮಗಳು ಇರಲಿದೆ.
ದಿನ 3: ಬಾಲಿಯಲ್ಲಿ, ಪ್ರವಾಸಿಗರು ದ್ವೀಪದ ರಾಯಲ್ ಪ್ಯಾಲೇಸ್ ಮತ್ತು ಕಿಂತಾಮಣಿಗೆ ಭೇಟಿ ನೀಡಲಿದ್ದಾರೆ, ಜೊತೆಗೆ ಉಬುದ್ ಕಾಫಿ ಪ್ಲಾಂಟೇಶನ್‌ನಲ್ಲಿ ದಿನವನ್ನು ಕಳೆಯಲಿದ್ದಾರೆ.
ದಿನ 4: ಬಾಲಿ ಸಫಾರಿ ಹಾಗೂ ಮೆರಿನ್ ಪಾರ್ಕ್‌ನ ಭೇಟಿಯೊಂದಿಗೆ 4ನೇ ದಿನ ಆರಂಭವಾಗಲಿದೆ. ಸನ್‌ಸೆಟ್ ಸಂದರ್ಭದಲ್ಲಿ ನೌಕಾಯಾನವು ಕೂಡಾ ಇರಲಿದೆ. ಬೋಟ್‌ನಲ್ಲಿ ಊಟದ ವ್ಯವಸ್ಥೆ ಇರಲಿದೆ.
ದಿನ 5: ತಾಂಜಂಗ್ ಬೆನೋವಾದಲ್ಲಿನ ಟರ್ಟಲ್ ಐಸ್‌ಲ್ಯಾಂಡ್‌ನಲ್ಲಿ ದಿನ ಕಳೆಯಲಿದ್ದು, ರಾತ್ರಿ ತನಾಹ್ ಲಾಟ್‌ನಲ್ಲಿ ತಂಗಲಾಗುತ್ತದೆ.
ದಿನ 6: ಹೊಟೇಲ್‌ನಿಂದ ಚೆಕ್‌ಔಟ್ ಆಗಿ, ಲಕ್ನೋಗೆ ವಾಪಾಸ್ ಬರಲು ವಿಮಾನ ಹತ್ತುವುದು.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?



Click it and Unblock the Notifications