ದೀಪಾವಳಿ ಹಬ್ಬದ (Deepavali Festival) ಪ್ರಯುಕ್ತ ಬಹುತೇಕರು ದೂರದ ಊರಿನಿಂದ ತಮ್ಮ ಸೂರಿನ ಕಡೆ ತೆರಳುತ್ತಿದ್ದಾರೆ. ಇನ್ನು ಈ ಸಂದರ್ಭದಲ್ಲಿ ರೈಲು, ಬಸ್ ವ್ಯವಸ್ಥೆಯನ್ನೇ ಹೆಚ್ಚಿನವರು ನೋಡಿಕೊಳ್ಳುತ್ತಾರೆ. ಆದ್ರೆ ಇದೀಗ ರೈಲು ಟಿಕೆಟ್ ಬುಕಿಂಗ್‌ನಲ್ಲಿ ಸಾರ್ವಜನಿಕರು ಭಾರೀ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಭಾರತೀಯ ರೈಲ್ವೆ ನಿಗಮದ (IRCTC) ವೆಬ್‌ಸೈಟ್ ಶುಕ್ರವಾರ ಮತ್ತೆ ಸಮಸ್ಯೆಯನ್ನು ಎದುರಿಸಿದೆ ಎನ್ನಲಾಗಿದೆ. ಈ ಪರಿಣಾಮ ಸಾವಿರಾರು ಬಳಕೆದಾರರಿಗೆ ಟಿಕೆಟ್ ಬುಕ್ ಮಾಡಲು ಸಮಸ್ಯೆಯಾಗಿದೆ. ಐಆರ್‌ಸಿಟಿಸಿ ವೆಬ್‌ಸೈಟ್ ಭಾರತದಲ್ಲಿ ಆನ್‌ಲೈನ್ ಮೂಲಕ ಬುಕ್ ಮಾಡಲಿರುವ ಏಕೈಕ ಪ್ಲಾಟ್‌ಫಾರ್ಮ್ (Online Train Ticket) ಆಗಿದೆ. ಆದರೆ ಹಬ್ಬದ ಸಂದರ್ಭದಲ್ಲಿ ಹೆಚ್ಚಿನ ಜನರು ರೈಲು ಟಿಕೆಟ್ ಬುಕ್ ಮಾಡಲು ಮುಂದಾಗಿದ್ದು, ಈ ಅಡಚಣೆಗೆ ಮುಖ್ಯ ಕಾರಣ ಎನ್ನಲಾಗಿದೆ.

ಈ ಸಮಸ್ಯೆಗೆ ಕಾರಣವೇನು?
ರೈಲ್ವೇ ಅಧಿಕಾರಿಗಳು ಈ ಅಡಚಣೆಗೆ "ತಾಂತ್ರಿಕ ಸಮಸ್ಯೆಗಳು" ಕಾರಣ ಎಂದು ಸ್ಪಷ್ಟನೆ ನೀಡಿದ್ದಾರೆ. ಇನ್ನು ಈ ಸಮಸ್ಯೆಯಿಂದಾಗಿ ಮೊಬೈಲ್ ಅಪ್ಲಿಕೇಶನ್‌ನಲ್ಲೂ ಅಡಚಣೆಯಾಗಿದ್ದು, ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದಾಗಿ ಅಧಿಕಾರಿಗಳು ವರದಿ ಮಾಡಿದ್ದಾರೆ.
IRCTC ಯ ಟಿಕೆಟಿಂಗ್ ವ್ಯವಸ್ಥೆ ಸ್ಥಗಿತಗೊಂಡಿರುವುದು ಇದು ಮೊದಲ ಸಲವಲ್ಲ. ಡಿಸೆಂಬರ್ 2024 ರಲ್ಲೇ, ಬಳಕೆದಾರರು ಮೂರು ಬಾರಿ ಇದೇ ರೀತಿಯ ಅಡಚಣೆಗಳನ್ನು ಎದುರಿಸಿದ್ದಾರೆ. ಪ್ರತಿದಿನ ಸುಮಾರು 12.5 ಲಕ್ಷ ಟಿಕೆಟ್‌ಗಳು ಕಾಯ್ದಿರಿಸಲ್ಪಡುತ್ತವೆ ಮತ್ತು ರೈಲ್ವೆ ಬುಕಿಂಗ್‌ಗಳಲ್ಲಿ 84% IRCTC ವೆಬ್‌ಸೈಟ್ ಮತ್ತು ಅಪ್ಲಿಕೇಶನ್ ಮೂಲಕ ನಡೆಯುತ್ತವೆ. ಯಾವುದೇ ಸ್ಥಗಿತವು ಪ್ರಯಾಣಿಕರಿಗೆ, ವಿಶೇಷವಾಗಿ ಧನ್‌ತೇರಸ್ ಮತ್ತು ದೀಪಾವಳಿಯಂತಹ ಹಬ್ಬದ ಅಥವಾ ಗರಿಷ್ಠ ಪ್ರಯಾಣದ ಅವಧಿಯಲ್ಲಿ ವ್ಯಾಪಕ ಅಡಚಣೆಯನ್ನು ಉಂಟುಮಾಡುತ್ತದೆ.
IRCTC ವೆಬ್‌ಸೈಟ್‌ನಲ್ಲಿ ಬಳಕೆದಾರರಿಗೆ ಸೂಚನೆ:
IRCTC ವೆಬ್‌ಸೈಟ್ ಓಪನ್ ಮಾಡಿದಾಗ ಬಳಕೆದಾರರು ನಾಟಿಫಿಕೇಶನ್ ಒಂದು ನೋಡಿದ್ದು, ಅದರಲ್ಲಿ "ತಾಂತ್ರಿಕ ಕಾರಣಗಳಿಂದಾಗಿ ಮುಂದಿನ ಒಂದು ಗಂಟೆಯವರೆಗೆ ಬುಕಿಂಗ್ ಮತ್ತು ರದ್ದತಿ ಸೇವೆಗಳು ಕಾರ್ಯನಿರ್ವಹಿಸುವುದಿಲ್ಲ. ಈ ಸಮಸ್ಯೆಯಿಂದಾಗಿ ಬಳಕೆದಾರರಲ್ಲಿ ಕ್ಷಮೆ ಕೇಳುತ್ತೇವೆ." ಇನ್ನು ಈ ಸಂದೇಶವು ರದ್ದತಿ ಅಥವಾ TDR ಸಲ್ಲಿಕೆಗಾಗಿ ಸಹಾಯವಾಣಿ ಸಂಖ್ಯೆಗಳು (14646, 08044647999, 08035734999) ಮತ್ತು ಇಮೇಲ್ ಐಡಿ ([email protected]) ಯನ್ನು ಸಹ ಒದಗಿಸಿತ್ತು.
ಪ್ರಯಾಣಿಕರಿಗೆ ಸಿಗದ ತತ್ಕಾಲ್ ಟಿಕೆಟ್
ತತ್ಕಾಲ್ ಬುಕಿಂಗ್‌ಗಳು ಸಾಮಾನ್ಯವಾಗಿ ಎಸಿ ಕೋಚ್‌ಗಳಿಗಾಗಿ ಬೆಳಿಗ್ಗೆ 10 ಗಂಟೆಗೆ ಮತ್ತು ನಾನ್-ಎಸಿ ಕೋಚ್‌ಗಳಿಗೆ ಬೆಳಿಗ್ಗೆ 11 ಗಂಟೆಗೆ ಪ್ರಾರಂಭವಾಗುತ್ತವೆ. ಆದರೆ ಶುಕ್ರವಾರ ಬೆಳಿಗ್ಗೆಯೇ ವೆಬ್‌ಸೈಟ್‌ನಲ್ಲಿ ಈ ತಾಂತ್ರಿಕ ಸಮಸ್ಯೆ ಎದುರಾಗಿದ್ದರಿಂದ, ಅಲ್ಲದೇ ಲಕ್ಷಾಂತರ ಜನರು ಕೊನೆಯ ಟಿಕೆಟ್‌ಗಳನ್ನು ಪಡೆಯಲು ಪ್ರಯತ್ನಿಸುತ್ತಿದ್ದರು. ಆದರೆ ತಾಂತ್ರಿಕ ಸಮಸ್ಯೆಯಿಂದ ಹಲವರು ತತ್ಕಾಲ್ ಟಿಕೆಟ್ ಪಡೆಯುವಲ್ಲಿ ವಿಫಲರಾದರು ಎನ್ನಲಾಗಿದೆ.
ಇನ್ನು ವಿಷಯ ತಿಳಿಯುತ್ತಿದ್ದಂತೆ, IRCTC ಅಧಿಕಾರಿಗಳು ಟೆಕ್ನಿಕಲ್ ಟೀಂ ಜೊತೆ ಮಾತನಾಡಿ, ಈ ಸಮಸ್ಯೆಯನ್ನು ಪರಿಹರಿಸಲು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ. ಆದರೆ, ಪೂರ್ಣ ಸೇವೆಗಳು ಯಾವಾಗ ಪುನರಾರಂಭಗೊಳ್ಳುತ್ತವೆ ಎಂಬುದರ ಬಗ್ಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿಗಳನ್ನು ಬಿಡುಗಡೆ ಮಾಡಿದೆ.
ಸಾರ್ವಜನಿಕರಿಗೆ ಸಲಹೆ:
ನೀವೂ ಕೂಡಾ ಇಂದು ತತ್ಕಾಲ್ ಟಿಕೆಟ್ ಬುಕ್ ಮಾಡುವ ಪ್ಲಾನ್ ಮಾಡಿದ್ದರೆ, ಸಮಸ್ಯೆ ಸರಿಯಾಗುವವರೆಗೆ ಸ್ವಲ್ಪ ಸಮಯ ಕಾಯಿರಿ ಎನ್ನಲಾಗಿದೆ. ಇನ್ನು ಅದಕ್ಕಾಗಿ ಸಂದೇಶದ ಜೊತೆಗೆ ಇಮೇಲ್ ಐಡಿ ಮತ್ತು ಕಸ್ಟಮರ್ ಕೇರ್ ನಂಬರ್ ಅನ್ನೂ ಒದಗಿಸಲಾಗಿದ್ದು, ಅದನ್ನು ಸಂಪರ್ಕಿಸಿ ಮಾಹಿತಿಯನ್ನು ಪಡೆಯಬಹುದು. ಅದೇ ರೀತಿ ಸಮಸ್ಯೆ ಪರಿಹರಿಸಿದ ತಕ್ಷಣ ವೆಬ್‌ಸೈಟ್ ನಿಧಾನವಾಗಬಹುದು.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?



Click it and Unblock the Notifications