For Quick Alerts
ALLOW NOTIFICATIONS  
For Daily Alerts

ರಿಲಯನ್ಸ್ ಹೊಸ ಆರೋಗ್ಯ ವಿಮೆಗಳಿಗೆ ಬ್ರೇಕ್

|

ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ಹೆಲ್ತ್ ಇನ್ಷುರೆನ್ಸ್ ಲಿಮಿಟೆಡ್‌ನ ಹೊಸ ಆರೋಗ್ಯ ವಿಮೆಗಳನ್ನು IRDAI ನಿರ್ಬಂಧಿಸಿದೆ. ದುರ್ಬಲ ಆರ್ಥಿಕಸ್ಥಿತಿಯನ್ನು ಹೊಂದಿರುವ ಕಾರಣ ರಿಲಯನ್ಸ್ ಯಾವುದೇ ಹೊಸ ಪಾಲಿಸಿಗಳನ್ನ ಮಾರಾಟ ಮಾಡಬಾರದೆಂದು ತಡೆದಿದೆ.

IRDAI (Insurance Regularatory and Development Authority of India) ನಿಯಂತ್ರಕವು ಹಣಕಾಸಿನ ಸ್ವತ್ತುಗಳ ಜೊತೆಗೆ ಸಂಪೂರ್ಣ ಪಾಲಿಸಿದಾರರ ಹೊಣೆಗಾರಿಕೆಗಳನ್ನು ರಿಲಯನ್ಸ್ ಜನರಲ್ ಇನ್ಷುರೆನ್ಸ್ ಕೋ ಲಿಮಿಟೆಡ್‌ಗೆ ವರ್ಗಾಯಿಸಲು RHICL ಗೆ ಕೇಳಿದೆ. ಇದು ಸದ್ಯ ಅಸ್ತಿತ್ವದಲ್ಲಿರುವ ಪಾಲಿಸಿದಾರರ ಹಕ್ಕುಗಳನ್ನ ಇತ್ಯರ್ಥಪಡಿಸುತ್ತದೆ.

ರಿಲಯನ್ಸ್ ಹೊಸ ಆರೋಗ್ಯ ವಿಮೆಗಳಿಗೆ ಬ್ರೇಕ್

RHICL(ರಿಲಯನ್ಸ್ ಆರೋಗ್ಯ ವಿಮಾ ಕಂಪನಿ ಲಿಮಿಟೆಡ್‌) ನ ಪರಿಹಾರವು ಗಣನೀಯವಾಗಿ ಮಾನದಂಡಗಳಿಗಿಂತ ಕಡಿಮೆ ಇದೆ. ಈ ಹಂತದಲ್ಲಿ ವಿಮಾ ವ್ಯವಹಾರವನ್ನು RHICL ನಲ್ಲಿ ಮುಂದುವರಿಸುವುದು ಪಾಲಿಸಿದಾರರ ಹಿತದೃಷ್ಟಿಯಿಂದ ಆಗುವುದಿಲ್ಲ ಎಂದು IRDAI ತನ್ನ ಆದೇಶದಲ್ಲಿ ಹೇಳಿದೆ. ನಿಗದಿತ ದಿನಾಂಕದಿಂದ (ನವೆಂಬರ್ 15) RHICL ಹೊಸ ವಿಮೆ ವ್ಯವಹಾರವನ್ನು ನಿಲ್ಲಿಸುತ್ತದೆ. ಅಲ್ಲದೆ ಈ ಕುರಿತು ಸಂವಹನವನ್ನು ತನ್ನ ವೆಬ್‌ಸೈಟ್ ಹಾಗೂ ಅದರ ಎಲ್ಲಾ ಶಾಖೆಗಳಲ್ಲಿ ಪ್ರದರ್ಶಿಸಲಾಗುತ್ತದೆ ಎಂದು IRDAI ಆದೇಶದಲ್ಲಿ ತಿಳಿಸಿದೆ.

ಇಷ್ಟಲ್ಲದೆ RHICL ತನ್ನ ಉಳಿದ ಆಸ್ತಿಗಳನ್ನು ''ring-fence'' ಮಾಡಲು ಮತ್ತು ವಿಮಾ ನಿಯಂತ್ರಕರ ಪೂರ್ವ ಲಿಖಿತ ಅನುಮೋದನೆ ಇಲ್ಲದೆ ಅವುಗಳನ್ನ ವಿಲೇವಾರಿ ಮಾಡಬಾರದು ಎಂದು IRDAI ತಿಳಿಸಿದೆ.

English summary

IRDAI Bars Reliance Health Insurance From Selling Policies

IRDAI barred Anil ambani led Reliance health insurance Ltd. from selling new policies due to weak financial health
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X