ಬೋನಿನಲ್ಲಿ ಪ್ರಾಣಿಗಳನ್ನು ಇಟ್ಟಿರುವುದನ್ನು ನೀವು ನೋಡಿರಬಹುದು. ಆದರೆ ಈ ಜಗತ್ತಿನಲ್ಲಿ ಒಂದು ಸ್ಥಳ ಇದೆ. ಅಲ್ಲಿ ಕಬ್ಬಿಣದ ಬೋನಿನಲ್ಲಿ ಜನರೇ ವಾಸಿಸುತ್ತಾರೆ. ಅಂಥ ದೇಶ ಯಾವುದು ಮತ್ತು ಏಕೆ ಎಂಬ ಪ್ರಶ್ನೆ ಹಾಗೂ ಕುತೂಹಲ ನಿಮಗೆ ಮೂಡಬಹುದು. ಆ ದೇಶದ ಹೆಸರು ಹಾಂಕಾಂಗ್. ವಿಪರೀತ ಬಡತನ- ದುಬಾರಿ ಬಾಡಿಗೆ ಕಾರಣಕ್ಕೆ ಅಲ್ಲಿ ಕಬ್ಬಿಣದ ಬೋನಿನಲ್ಲಿ ಜನರು ವಾಸಿಸುತ್ತಾರೆ.
ಹಾಗೆ ವಾಸ ಮಾಡುವುದಕ್ಕೆ ಒಂದು ತಿಂಗಳಿಗೆ 1800ರಿಂದ 2400 ಹಾಂಕಾಂಗ್ ಡಾಲರ್ (ಭಾರತದ ರುಪಾಯಿಗಳಲ್ಲಿ 17ರಿಂದ 22 ಸಾವಿರ) ಬಾಡಿಗೆ ಕೂಡ ನೀಡಲಾಗುತ್ತದೆ. ಇವು ಬೋನು ಅಂತ ಹೊರಗಿನವರು ಕರೆಯಬಹುದು. ಆದರೆ ಇವರಿಗೆ ಮಾತ್ರ ಇವು ಮನೆಗಳು. ಈ ಬೋನಿನ ಮನೆಗಳಲ್ಲಿ ಸರಿಯಾದ ಸುರಕ್ಷತೆ ಇರುವುದಿಲ್ಲ. ಹಳೇ ಕಟ್ಟಡಗಳಲ್ಲಿ ಬೆಂಕಿ ಅವಘಡ ಸಂಭವಿಸಿದರೆ ರಕ್ಷಣಾ ವ್ಯವಸ್ಥೆಯೂ ಇರುವುದಿಲ್ಲ.
ಇಂಥ ಬೋನಿನ ಮನೆಗಳು ಅಪಾರ್ಟ್ ಮೆಂಟ್ ನೊಳಗೆ ಬೇಕಾದಷ್ಟು ಇರುತ್ತವೆ. ಒಂದು ಕಡೆ ನೂರಾರು ಮಂದಿ ಇರುತ್ತಾರೆ. ಒಂದು ಅಪಾರ್ಟ್ ಮೆಂಟ್ ನಲ್ಲಿ ಒಂದೋ ಎರಡೋ ಶೌಚಾಲಯ ಇರುತ್ತದೆ. ಅಂದ ಹಾಗೆ ಹೀಗೆ ಅಪಾರ್ಟ್ ಮೆಂಟ್ ಗಳಲ್ಲಿ ಕಬ್ಬಿಣದ ಬೋನಿನ ಮನೆಗಳನ್ನು ಬಾಡಿಗೆಗೆ ಕೊಡುವುದು ಸಹ ಇಲ್ಲಿ ತಪ್ಪೇನಲ್ಲ. ಆದರೆ ಅದಕ್ಕೆ ವಿಶೇಷ ಪರವಾನಗಿ ಪಡೆದಿರಬೇಕು, ಅಷ್ಟೇ.

ಶವ ಪೆಟ್ಟಿಗೆ ಆಕಾರದಲ್ಲಿ ಈ ಕಬ್ಬಿಣದ ಬೋನುಗಳು ಇರುತ್ತವೆ. ಇವುಗಳ ಅಳತೆ ಒಂದು ಕ್ಯಾಬಿನ್ ನಷ್ಟು ಇರುತ್ತದೆ. ಮಲಗುವುದಕ್ಕೆ ಈ ಬಾಡಿಗೆದಾರರು ಹಾಸಿಗೆ ಬದಲಿಗೆ ಬಿದಿರಿನ ಹಾಸುಗಳನ್ನು ಬಳಸುತ್ತಾರೆ. ಈ ಬೋನಿನ ಮನೆಗಳಲ್ಲಿ ಖಾಸಗಿತನದ ಮಾತೇ ಇಲ್ಲ. ಏಕೆಂದರೆ ಒಂದಕ್ಕೂ ಮತ್ತೊಂದಕ್ಕೂ ಬಹಳ ಹತ್ತಿರ ಇರುತ್ತದೆ.
ಇನ್ನು ಆಧುನಿಕ ವ್ಯವಸ್ಥೆ ಏನು ಗೊತ್ತಾ? ಆ ಕಬ್ಬಿಣದ ಬೋನಿನಂಥ ಕ್ಯಾಬಿನ್ ನೊಳಗೂ ಎರಡು- ಮೂರು ವಿಭಾಗಗಳು ಇರುತ್ತವೆ. ಸಣ್ಣ ಮರದ ತುಂಡುಗಳನ್ನೋ ಅಥವಾ ಕಾಗದದ ಬೋರ್ಡ್ ಗಳನ್ನೋ ಬಳಸಿ ವಿಂಗಡಣೆ ಮಾಡಿರಲಾಗುತ್ತದೆ.

ವಿಪರೀತ ಬಡತನದಲ್ಲಿ ಇರುವ ಜನರು ಇಂಥ ಕಡೆ ಬಾಡಿಗೆಗೆ ವಾಸ ಮಾಡುತ್ತಾರೆ. ಇಂಥ ಕಡೆ ವಾಸ ಮಾಡುವುದರಿಂದ ಮಾನಸಿಕ ಕ್ಷೋಭೆಗೆ ಗುರಿ ಆಗುತ್ತಾರೆ. ಇಂಥ ಕಡೆ ಇರುವ ವಯಸ್ಸಾದವರಂತೂ ತಮ್ಮ ಸಾವು ಯಾವಾಗ ಬರುತ್ತದೋ ಎಂದು ಬೇಸರ ವ್ಯಕ್ತಪಡಿಸುತ್ತಾರೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications