ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಹೋಗಬೇಕೆಂದರೆ ರೈಲು, ವಿಮಾನ ಪ್ರಯಾಣ ಅಗತ್ಯವಾಗಿದೆ. ಇದು ವೇಗದ ಪ್ರಯಾಣದ ಜೊತೆಗೆ, ಆರಾಮದಾಯಕ ಪ್ರಯಾಣವನ್ನು ಜನರಿಗೆ ನೀಡುತ್ತದೆ. ಇನ್ನು ಭಾರತೀಯ ರೈಲ್ವೇ ಇಲಾಖೆ (IRCTC) ತನ್ನ ಪ್ರಯಾಣಿಕರಿಗಾಗಿ ಇತ್ತೀಚೆಗೆ ಹಲವಾರು ಮಹತ್ವದ ಬದಲಾವಣೆಗಳನ್ನು ಜಾರಿಗೆ ತಂದಿದೆ. ಇನ್ನು ಮಹಾಮಾರಿ ಕೊರೊನಾ ನಂತರವಂತೂ ಭಾರತೀಯ ರೈಲ್ವೇ (Indian Railways) ಹಲವಾರು ಕ್ರಮಗಳನ್ನು ಕೈಗೊಂಡಿದೆ. ಅದರಲ್ಲೊಂದು ಆಹಾರ.

ಭಾರತೀಯ ರೈಲ್ವೇಯು ರೈಲುಗಳಲ್ಲಿನ ಆಹಾರ ಆಯ್ಕೆಗಳ ವಿಚಾರದಲ್ಲಿ ಪ್ರಯಾಣಿಕರಿಗೆ ಇದೀಗ ಹೆಚ್ಚಿನ ಆಯ್ಕೆಗಳನ್ನು ನೀಡುತ್ತಿದೆ. ಕೋವಿಡ್ ನಂತರ, ಪ್ರಯಾಣಿಕರಿಗೆ ರೈಲಿನಲ್ಲಿ ಊಟದ ಆಯ್ಕೆಗಳು ಸ್ವಯಂ ಆಯ್ಕೆಯಾಗಿಬಿಟ್ಟಿದೆ. ಅಂದರೆ ಆನ್‌ಲೈನ್‌ನಲ್ಲಿ ರೈಲು ಟಿಕೆಟ್ ಕಾಯ್ದಿರಿಸುವವರು ಟಿಕೆಟ್ ಬುಕ್ ಮಾಡುವಾಗಲೇ ಊಟ ಬೇಕೋ ಬೇಡವೋ ಎಂಬುದನ್ನು ಮೊದಲೇ ಆಯ್ಕೆ ಮಾಡಬಹುದು.
ರಾಜಧಾನಿ ಎಕ್ಸ್‌ಪ್ರೆಸ್, ಶತಾಬ್ದಿ ಎಕ್ಸ್‌ಪ್ರೆಸ್ ಮತ್ತು ವಂದೇ ಭಾರತ್ ಎಕ್ಸ್‌ಪ್ರೆಸ್‌ನಂತಹ ಪ್ರೀಮಿಯಂ ರೈಲುಗಳಲ್ಲಿ, ಟಿಕೆಟ್ ದರದಲ್ಲೇ ಆಹಾರ ಶುಲ್ಕಗಳು ಸಹ ಸೇರಿರುತ್ತವೆ. ಆದರೂ, ಪ್ರಯಾಣಿಕರು ಟಿಕೆಟ್ ಬುಕ್ ಮಾಡುವಾಗ ಊಟವನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಒಂದು ವೇಳೆ ಆರಂಭದಲ್ಲಿ ಟಿಕೆಟ್ ಮಾಡುವಾಗ ಆಹಾರ ಬೇಡ ಎಂದು ಹೇಳಿದರೂ, ಪ್ರಯಾಣದ ಸಮಯದಲ್ಲಿ ಆಹಾರ ಬೇಕು ಎಂದಾದರೆ, ಆರ್ಡರ್ ಮಾಡುವ ಅವಕಾಶ ಇರುತ್ತದೆ.
ಪ್ರಯಾಣಿಕರಿಗೆ ಮೊದಲ ಆದ್ಯತೆ
ಪ್ರಯಾಣಿಕರು ಊಟವನ್ನು ಆರ್ಡರ್ ಮಾಡಿದರೆ ಅಥವಾ ಟಿಕೆಟ್ ಕಾಯ್ದಿರಿಸುವ ಸಂದರ್ಭದಲ್ಲಿ ಮೊದಲೇ ಬುಕ್ ಮಾಡಿದ್ದರೆ, ಕ್ಯಾಟರಿಂಗ್ ಶುಲ್ಕಗಳನ್ನು ಒಟ್ಟು ಟಿಕೆಟ್ ದರಕ್ಕೆ ಸೇರಿಸಲಾಗುತ್ತದೆ. ಒಂದು ವೇಳೆ ಊಟ ಬೇಡ ಎಂದಾದರೆ, ಊಟದ ಶುಲ್ಕಗಳನ್ನು ಮೊದಲೇ ಟಿಕೆಟ್ ದರದಿಂದ ಕಡಿತಗೊಳಿಸಲಾಗುತ್ತದೆ. ಈ ಮೂಲಕ, ಪ್ರಯಾಣಿಕರು ತಮ್ಮ ಅಗತ್ಯಕ್ಕೆ ತಕ್ಕಂತೆ ಆಹಾರ ಸೇವೆಗಳನ್ನು ಆಯ್ಕೆ ಮಾಡಿಕೊಳ್ಳಲು ಸ್ವಾತಂತ್ರ್ಯವಿದೆ.
ಉಚಿತ ನೀರಿನ ಬಾಟಲ್ ಸಿಗುತ್ತಾ?
ರಾಜಧಾನಿ ಮತ್ತು ಇತರ ಪ್ರೀಮಿಯಂ ರೈಲುಗಳಲ್ಲಿ ಉಚಿತ ಒಂದು ಲೀಟರ್ ರೈಲ್ ನೀರ್ ಬಾಟಲಿ ನೀಡುವ ಬಗ್ಗೆ ಪ್ರಯಾಣಿಕರಿಗೆ ಭಾರೀ ಗೊಂದಲವಿದೆ. ಊಟದ ಆಯ್ಕೆ ಸ್ವಇಚ್ಛೆಯಾಗಿರುವುದರಿಂದ, 'ಊಟ ಬೇಡ' ಎಂಬ ಆಯ್ಕೆಯನ್ನು ನೀಡಿದರೆ ಉಚಿತ ನೀರಿನ ಬಾಟಲಿ ಸಿಗುತ್ತಾ? ಎಂಬ ಪ್ರಶ್ನೆ ಬರುತ್ತದೆ. ಈ ಉಚಿತ ನೀರಿನ ಬಾಟಲಿ ಊಟದ ಆಯ್ಕೆಗೆ ಸಂಬಂಧಿಸಿದ್ದೇ ಅಥವಾ ಎಲ್ಲ ಪ್ರಯಾಣಿಕರಿಗೂ ಸಿಗುತ್ತಾ ಎಂಬ ಪ್ರಶ್ನೆ ಇತ್ತು.
ಈ ಕುರಿತು ಮಾಧ್ಯಮವೊಂದಕ್ಕೆ ಹಿರಿಯ ಐಆರ್‌ಸಿಟಿಸಿ ಅಧಿಕಾರಿಯೊಬ್ಬರು ಸ್ಪಷ್ಟನೆ ನೀಡಿದ್ದು, "ಪ್ರಯಾಣಿಕರು ಊಟವನ್ನು ಆಯ್ಕೆ ಮಾಡಲಿ ಅಥವಾ ಮಾಡದೇ ಇರಲಿ, ಎಲ್ಲರಿಗೂ ಉಚಿತವಾಗಿ ನೀರಿನ ಬಾಟಲಿಯನ್ನು ನೀಡಲಾಗುತ್ತದೆ" ಎಂದು ಹೇಳಿದ್ದಾರೆ. ಆದ್ದರಿಂದ ನೀರಿನ ಬಾಟಲಿಗೂ, ಆಹಾರದ ಆಯ್ಕೆಗೂ ಯಾವುದೇ ಸಂಬಂಧವಿಲ್ಲ ಎಂಬುದು ಇಲ್ಲಿ ಸ್ಪಷ್ಟವಾಗಿದೆ.
ಊಟ ಖರೀದಿಸಲೇಬೇಕಾ?
ಕಳೆದ ತಿಂಗಳು, ರಾಜಧಾನಿ ಎಕ್ಸ್‌ಪ್ರೆಸ್, ಶತಾಬ್ದಿ ಎಕ್ಸ್‌ಪ್ರೆಸ್ ಮತ್ತು ವಂದೇ ಭಾರತ್ ಎಕ್ಸ್‌ಪ್ರೆಸ್‌ನಂತಹ ಪ್ರೀಮಿಯಂ ರೈಲುಗಳಲ್ಲಿ ಊಟವನ್ನು ಕಡ್ಡಾಯಗೊಳಿಸಲಾಗಿದೆ ಎಂಬ ವದಂತಿ ಇತ್ತು. ಐಆರ್‌ಸಿಟಿಸಿ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಟಿಕೆಟ್ ಬುಕ್ ಮಾಡುವಾಗ ಊಟವನ್ನು ಕಡ್ಡಾಯವಾಗಿ ಆಯ್ಕೆ ಮಾಡಲೇಬೇಕು ಎಂಬ ಸುದ್ದಿಗಳು ಹರಿದಾಡಿತ್ತು. ಆದ್ರೆ ಇದೀಗ. ಹಿರಿಯ ರೈಲ್ವೇ ಅಧಿಕಾರಿಯೊಬ್ಬರು ಪ್ರೀಮಿಯಂ ರೈಲುಗಳಲ್ಲಿ ಟಿಕೆಟ್ ಬುಕ್ ಮಾಡುವಾಗ 'ಆಹಾರ ಬೇಡ' ಆಯ್ಕೆ ಇನ್ನೂ ಲಭ್ಯವಿದೆ, ಅದರ ಸ್ಥಾನದಲ್ಲಿ ಮಾತ್ರ ಬದಲಾವಣೆ ಮಾಡಲಾಗಿದೆ" ಎಂದು ಅಧಿಕಾರಿ ತಿಳಿಸಿದ್ದಾರೆ.
More From GoodReturns

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ



Click it and Unblock the Notifications