ಪೂರ್ತಿ ನಗದು ಮೊತ್ತ 2150 ಕೋಟಿ ರುಪಾಯಿ ನೀಡಿ, ಸನ್ ರೈಸ್ ಫುಡ್ಸ್ ಪ್ರೈವೇಟ್ ಲಿಮಿಟೆಡ್ (SFPL) ಅನ್ನು ಐಟಿಸಿ ಖರೀದಿ ಮಾಡಿದೆ ಎಂದು ಕಂಪೆನಿ ತಿಳಿಸಿದೆ. ಯಾವುದೇ ನಗದು ಹಾಗೂ ಸಾಲ ಇಲ್ಲದಂತೆ 2150 ಕೋಟಿ ರುಪಾಯಿ ಪಾವತಿಸಿ, SFPL ಖರೀದಿ ಮಾಡಿದ್ದಾಗಿ ಐಟಿಸಿ ಕಂಪೆನಿ ಮಾಹಿತಿ ನೀಡಿದೆ.
ಈ ಮೊತ್ತದ ಜತೆಗೆ ಸಂಭವನೀಯ ಸನ್ನಿವೇಶಗಳಿಗಾಗಿ 150 ಕೋಟಿ ರುಪಾಯಿ ಮೀರದಂತೆ ಹಣ ಕೂಡ ಮಾರಾಟಗಾರರಿಗೆ ನೀಡಲಾಗುತ್ತದೆ. ಪರಸ್ಪರ ಕಾರ್ಯ ನಿರ್ವಹಣೆಗೆ ಒಪ್ಪಿದ ಮೇಲೆ ಹಾಗೂ ಹಣಕಾಸು ಮೈಲುಗಲ್ಲು ತಲುಪಿದ ಮೇಲೆ ಮುಂದಿನ ಎರಡು ವರ್ಷಗಳಲ್ಲಿ ಈ ಮೊತ್ತವನ್ನು ಪಾವತಿಸಲಾಗುತ್ತದೆ.
ಈಕ್ವಿಟಿ ಬಂಡವಾಳದ ಶೇಕಡಾ 100ರಷ್ಟು ಖರೀದಿ
SFPL ಕೋಲ್ಕತ್ತಾ ಮೂಲದ ಕುಟುಂಬದ ಮಾಲೀಕತ್ವ ಇರುವ ಕಂಪೆನಿ. ಸಂಬಾರ ಪದಾರ್ಥಗಳ ವ್ಯವಹಾರವನ್ನು ಮಾಡುತ್ತದೆ. ಈ ಖರೀದಿ ವ್ಯವಹಾರದ ಮೂಲಕ ಐಟಿಸಿ ವ್ಯಾಪ್ತಿ ಇನ್ನಷ್ಟು ಹೆಚ್ಚಾಗುತ್ತದೆ. ಆಶೀರ್ವಾದ್ ಬ್ರ್ಯಾಂಡ್ ಗೆ ಬಲ ಹೆಚ್ಚಿದಂತಾಗುತ್ತದೆ. "ಜುಲೈ 27, 2020ಕ್ಕೆ ಸನ್ ರೈಸ್ ಈಕ್ವಿಟಿ ಬಂಡವಾಳದಲ್ಲಿ ಶೇಕಡಾ 100ರಷ್ಟು ಖರೀದಿ ಮಾಡಲಾಗಿದೆ" ಎಂದು ಐಟಿಸಿ ತಿಳಿಸಿದೆ.
ಕಳೆದ ಮೇ 24ನೇ ತಾರೀಕಿನಂದು ಘೋಷಣೆ
ಈ ವ್ಯವಹಾರದ ನಂತರ ಸನ್ ರೈಸ್ ಅಂಗಸಂಸ್ಥೆಗಳಾದ ಸನ್ ರೈಸ್ ಶೀತ್ ಗೃಹ್ ಪ್ರೈವೇಟ್ ಲಿಮಿಟೆಡ್ ಹಾಗೂ ಹಾಬಿಟ್ಸ್ ಇಂಟರ್ ನ್ಯಾಷನಲ್ ಫುಡ್ಸ್ ಲಿಮಿಟೆಡ್ ಸಂಪೂರ್ಣವಾಗಿ ಐಟಿಸಿಯ ಅಂಗಸಂಸ್ಥೆಯಾಗುತ್ತವೆ. ಕಳೆದ ಮೇ 24ನೇ ತಾರೀಕಿನಂದು SFPL ಖರೀದಿ ಮಾಡುತ್ತಿರುವುದಾಗಿ ಐಟಿಸಿ ಘೋಷಣೆ ಮಾಡಿತ್ತು.
ಸನ್ ರೈಸ್ ವಹಿವಾಟು 591.50 ಕೋಟಿ ರುಪಾಯಿ
ಪೂರ್ವ ಭಾರತದಲ್ಲಿ ಸನ್ ರೈಸ್ ದೊಡ್ಡ ಮಟ್ಟದಲ್ಲಿ ಮಾರ್ಕೆಟ್ ಪಾಲನ್ನು ಹೊಂದಿದೆ. ಸಂಬಾರು ಪದಾರ್ಥಗಳ ಮಾರಾಟದಲ್ಲಿ ಎಪ್ಪತ್ತು ವರ್ಷದ ಪರಂಪರೆ ಇದೆ. ಇನ್ನು ಐಟಿಸಿಯ ಆಶೀರ್ವಾದ್ ಬ್ರ್ಯಾಂಡ್ ಸಂಬಾರ ಪದಾರ್ಥಗಳಿಗೆ ತೆಲಂಗಾಣ ಹಾಗೂ ಆಂಧ್ರಪ್ರದೇಶದಲ್ಲಿ ಪ್ರಬಲವಾದ ನೆಲೆ ಇದೆ. ಇದು ಸಂಬಾರ ಪದಾರ್ಥಗಳನ್ನು ರಫ್ತು ಮಾಡುವ ಭಾರತದ ಪ್ರಮುಖ ಉತ್ಪಾದಕ ಸಂಸ್ಥೆಗಳಲ್ಲಿ ಒಂದು. ಈಗಿನ ವ್ಯವಹಾರದ ಮೂಲಕ ಐಟಿಸಿ ದೇಶದಾದ್ಯಂತ ನೆಲೆ ವಿಸ್ತರಿಸಲು ನೆರವಾಗುತ್ತದೆ. 2019-20ನೇ ಸಾಲಿನಲ್ಲಿ ಸನ್ ರೈಸ್ ವಹಿವಾಟು 591.50 ಕೋಟಿ ರುಪಾಯಿ ಆಗಿತ್ತು.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ನಿಫ್ಟಿ ಏರಿಕೆ: ಈಗಲೇ ಹೂಡಿಕೆ ಮಾಡಬೇಕಾ ಅಥವಾ ಕಾಯಬೇಕಾ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಭಾರತೀಯ ಷೇರು ಮಾರುಕಟ್ಟೆ: ಇಂದಿನ ವಹಿವಾಟಿನಲ್ಲಿ ಅಡಗಿದೆ ಅಚ್ಚರಿಯ ತಿರುವು!

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಪ್ರಾಪ್ಶೇರ್ ಸೆಲೆಸ್ಟಿಯಾ ಐಪಿಒ: ಹೂಡಿಕೆಗೆ ಇಂದು ಕೊನೆಯ ಅವಕಾಶ!

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!



Click it and Unblock the Notifications