For Quick Alerts
ALLOW NOTIFICATIONS  
For Daily Alerts

ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಗಡುವು ಜನವರಿ 31ಕ್ಕೆ ವಿಸ್ತರಣೆ

|

ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಗಡುವನ್ನು ಆದಾಯ ತೆರಿಗೆ ಇಲಾಖೆ ನವೆಂಬರ್ 30 ರಿಂದ ಎರಡು ತಿಂಗಳು ವಿಸ್ತರಿಸಿದೆ. ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನೆಲೆ ತೆರಿಗೆದಾರರು ಸಂಕಷ್ಟ ಎದುರಿಸುತ್ತಿದ್ದಾರೆ. ಹೀಗಾಗಿ ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಶಿಫಾರಸ್ಸಿನಂತೆ 2019-2020ರ ಆರ್ಥಿಕ ವರ್ಷದ ಐಟಿ ರಿಟರ್ನ್ಸ್ ಡಿಸೆಂಬರ್ 31,2020ಕ್ಕೆ ವಿಸ್ತರಿಸಲಾಗಿದ್ದು, ಖಾತೆಗಳ ಲೆಕ್ಕಪರಿಶೋಧನೆ ನಡೆಸಬೇಕಿರುವ ತೆರಿಗೆದಾರರಿಗೆ ಐಟಿಆರ್ ಸಲ್ಲಿಕೆ ಗಡುವು ಜನವರಿ 31, 2021ಕ್ಕೆ ವಿಸ್ತರಿಸಲಾಗಿದೆ.

ಕೊರೊನಾವೈರಸ್ ಸೋಂಕಿನ ದೃಷ್ಟಿಯಿಂದ, 2019-2020ರ ಮೌಲ್ಯಮಾಪನ ವರ್ಷಕ್ಕೆ (AY 2020-2021) ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಹೆಚ್ಚುವರಿ ಅವಕಾಶವನ್ನು ನೀಡಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ.

ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಗಡುವು ಜನವರಿ 31ಕ್ಕೆ ವಿಸ್ತರಣೆ

ಕೊರೊನಾವೈರಸ್ ಸೋಂಕಿನಿಂದ ಆರ್ಥಿಕತೆಯ ಮೇಲೆ ಭಾರೀ ಹಾನಿಯಾಗಿದೆ. ಹೀಗಾಗಿ ತೆರಿಗೆದಾರರಿಗೆ ತೊಂದರೆಯಾಗದಂತೆ ಆದಾಯ ತೆರಿಗೆ ಇಲಾಖೆ, ಈ ಮಧ್ಯೆ, ಗಡುವನ್ನು ಮೂರು ಬಾರಿ ವಿಸ್ತರಿಸಿತ್ತು.

ಈ ನಿಟ್ಟಿನಲ್ಲಿ ನಿಗದಿತ ದಿನಾಂಕವನ್ನು ಮಾರ್ಚ್ 31 ರಿಂದ ಜೂನ್ 30 ರವರೆಗೆ ವಿಸ್ತರಿಸಲಾಯಿತು. ನಂತರ ಜೂನ್‌ನಲ್ಲಿ ಇದನ್ನು ಮತ್ತೆ ಜುಲೈ 31 ರವರೆಗೆ ಒಂದು ತಿಂಗಳು ವಿಸ್ತರಿಸಲಾಯಿತು. ಜುಲೈನಲ್ಲಿ ಇದನ್ನು ಸೆಪ್ಟೆಂಬರ್ 30 ರವರೆಗೆ ವಿಸ್ತರಿಸಲಾಗಿತ್ತು.ಅಂತಾರಾಷ್ಟ್ರೀಯ, ನಿರ್ದಿಷ್ಟ ಆಂತರಿಕ ವ್ಯವಹಾರಗಳಿಗೆ ಸಂಬಂಧಿಸಿದಂತೆ ವರದಿ ಒದಗಿಸಬೇಕಾದ ತೆರಿಗೆದಾರರು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಕೊನೆಯ ದಿನವನ್ನು 2021ರ ಜನವರಿ 31ರವರೆಗೂ ವಿಸ್ತರಿಸಲಾಗಿದೆ

English summary

ITR filing deadline for FY 2019-20 (AY 2020-21) extended to Jan 31, 2021

Central government on Saturday extended the deadline for filing income-tax returns (ITR) for FY 2019-20 (AY 2020-21) by a month till 31 December, 2020.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X