ಬ್ಲಾಕ್ ಇಂಕ್‌ನ ಸಹ ಸಂಸ್ಥಾಪಕ, ಟ್ವಿಟ್ಟರ್‌ನ ಮಾಜಿ ಸಿಇಒ ಜ್ಯಾಕ್ ಪ್ಯಾಟ್ರಿಕ್ ಡಾರ್ಸಿಯ ವಿರುದ್ಧ, ಬ್ಲಾಕ್ ಸಂಸ್ಥೆಯ ವಿರುದ್ಧವಾಗಿ ಹಿಂಡನ್‌ಬರ್ಗ್ ಹೊಸದಾಗಿ ವರದಿಯನ್ನು ಪ್ರಕಟಿಸಿದೆ. ಇದಾದ ಗಂಟೆಗಳಲ್ಲೇ ಜ್ಯಾಕ್ ಪ್ಯಾಟ್ರಿಕ್ ಡಾರ್ಸಿಯ ನಿವ್ವಳ ಆದಾಯವು ಭಾರೀ ಕುಸಿತ ಕಂಡಿದೆ. ಜ್ಯಾಕ್ ಡಾರ್ಸಿ ಸಂಸ್ಥೆಯಲ್ಲಿ ಆಗುತ್ತಿರುವ ವಂಚನೆಯನ್ನು ನಿರ್ಲಕ್ಷ ಮಾಡಿದ್ದಾರ ಎಂದು ಆರೋಪ ಮಾಡಲಾಗಿದೆ. ಗುರುವಾರ ಒಂದು ದಿನದಲ್ಲೇ ಜ್ಯಾಕ್ ನಿವ್ವಳ ಆದಾಯವು ಸುಮಾರು 526 ಮಿಲಿಯನ್ ಡಾಲರ್ ಇಳಿಕೆ ಕಂಡಿದೆ. ಇದು ಕಳೆದ ಮೇ ಬಳಿಕದ ಅತೀ ದೊಡ್ಡ ನಷ್ಟವಾಗಿದೆ.
ಬ್ಲ್ಯೂಬರ್ಗ್ ಬಿಲಿಯನೇರ್ ಇಂಡೆಕ್ಸ್ ಪ್ರಕಾರ ಜ್ಯಾಕ್ ಡಾರ್ಸಿಯ ನಿವ್ವಳ ಆದಾಯವು ಸುಮಾರು ಶೇಕಡ 11ರಷ್ಟು ಕುಸಿತ ಕಂಡ ಬಳಿಕ ಪ್ರಸ್ತುತ 4.4 ಬಿಲಿಯನ್ ಡಾಲರ್ ಆಗಿದೆ. ಇನ್ನು ಬ್ಲಾಕ್‌ನ ಮಾಜಿ ಉದ್ಯೋಗಿಗಳು ಈ ಸಂಸ್ಥೆಯಲ್ಲಿ ಶೇಕಡ 40ರಿಂದ 75 ಖಾತೆಗಳು ನಕಲಿ, ವಂಚನೆ ಮಾಡಲು ಬಳಸುವ ಖಾತೆಗಳು ಎಂದು ಹೇಳಿದ್ದಾರೆ. ಹಾಗೆಯೇ ಒಂದೇ ವ್ಯಕ್ತಿ ಹಲವಾರು ಖಾತೆಗಳನ್ನು ಹೊಂದಿದ್ದಾರೆ ಎಂದು ತಿಳಿಸಿದ್ದಾರೆ.

ಹಿಂಡನ್‌ಬರ್ಗ್ ವರದಿ ಪ್ರಕಾರ ಜ್ಯಾಕ್ ಡಾರ್ಸಿ ಹಲವಾರು ಬ್ಯಾಂಕ್ ಖಾತೆಗಳನ್ನು ಹೊಂದಿದ್ದಾರೆ. ಆ ಪೈಕಿ ಕೆಲವು ಖಾತೆಗಳನ್ನು ಕ್ಯಾಷ್ ಆಪ್ ಗ್ರಾಹಕರಿಗೆ ವಂಚನೆ ಮಾಡಲು ಬಳಸಲಾಗುತ್ತಿದೆ. ಅಲ್ಲಿ ನಕಲಿ ಖಾತೆಗಳು ಕೂಡಾ ಇದೆ. ಅದು ಕೂಡಾ ಎಲಾನ್ ಮಸ್ಕ್, ಡೊನಾಲ್ಡ್ ಟ್ರಂಪ್ ಎಂಬ ಹೆಸರಿನಲ್ಲಿ ನಕಲಿ ಖಾತೆಗಳಿದೆ. ಜ್ಯಾಕ್ ಡಾರ್ಸಿ ಎಂಬ ಹೆಸರಲ್ಲಿ ಹಲವಾರು ಮಂದಿ ಈ ಅಪ್ಲಿಕೇಷನ್‌ನಲ್ಲಿ ಕಂಡು ಬರುತ್ತಾರೆ. ಈ ಖಾತೆಯನ್ನು ಬಳಸಿಕೊಂಡು ಇತರೆ ಬಳಕೆದಾರರನ್ನು ಮೋಸಗೊಳಿಸಲು ಮತ್ತು ವಂಚಿಸಲಾಗುತ್ತಿದೆ ಎಂಬ ಆರೋಪ ಮಾಡಲಾಗಿದೆ.
ಬ್ಲಾಕ್, ಜ್ಯಾಕ್ ಡಾರ್ಸಿ ಆದಾಯ ಕುಸಿತ
ಗುರುವಾರ ಬ್ಲಾಕ್ ಇಂಕ್ ಸಂಸ್ಥೆಯು ಸುಮಾರು ಶೇಕಡ 22ರಷ್ಟು ಕುಸಿತ ಕಂಡಿದೆ, ವಹಿವಾಟಿನ ಅಂತ್ಯದ ವೇಳೆಗೆ ಶೇಕಡ 15ರಷ್ಟು ನಷ್ಟದೊಂದಿಗೆ ವಹಿವಾಟು ನಿಲ್ಲಿಸಿದೆ. ಟ್ವಿಟ್ಟರ್‌ನ ಸಹ ಸಂಸ್ಥಾಪಕ ಕೂಡಾ ಆದ ಜ್ಯಾಕ್ ಡಾರ್ಸಿ ವೈಯಕ್ತಿಕ ಆದಾಯವು ಬ್ಲಾಕ್‌ನ ಆದಾಯದ ಮೇಲೆ ಅವಲಂಭಿತವಾಗಿದೆ. ಬ್ಲ್ಯೂಬರ್ಗ್ ವೆಲ್ತ್ ಇಂಡೆಕ್ಸ್ ಅಂದಾಜಿನ ಪ್ರಕಾರ ಬ್ಲಾಕ್ ಇಂಕ್ ನಿವ್ವಳ ಆದಾಯವು 3 ಬಿಲಿಯನ್ ಡಾಲರ್ ಆಗಿದೆ. ಇನ್ನು ಈಗ ಎಲಾನ್ ಮಸ್ಕ್ ಖರೀದಿ ಮಾಡಿರುವ ಸಂಸ್ಥೆ ಟ್ವಿಟ್ಟರ್‌ನಲ್ಲಿ ಜ್ಯಾಕ್ ಡಾರ್ಸಿ ಇದ್ದಾಗ ನಿವ್ವಳ ಆದಾಯವು 388 ಮಿಲಿಯನ್ ಡಾಲರ್ ಆಗಿತ್ತು.
ಬಿಲಿಯನೇರ್‌ಗಳು ತತ್ತಿರಿಸುವಂತೆ ಮಾಡಿದ ಹಿಂಡನ್‌ಬರ್ಗ್
ಇನ್ನು ನಾಥನ್ ಆಡೆರ್ಸನ್ ನೇತೃತ್ವದ ಹಿಂಡನ್‌ಬರ್ಗ್ ಇದೇ ಮೊದಲ ಬಾರಿಗೆ ಬಿಲಿಯನೇರ್ ಆದಾಯ ನಷ್ಟದಿಂದಾಗಿ ತತ್ತರಿಸುವಂತೆ ಮಾಡಿರುವುದು ಅಲ್ಲ. ಈ ಹಿಂದೆಯೂ ಹಲವಾರು ಸಂಶೋಧನಾ ವರದಿಗಳನ್ನು ಹಿಂಡನ್‌ಬರ್ಗ್ ಪ್ರಕಟಿಸಿದೆ. ಹಾಗೆಯೇ ತನ್ನ ಸಾಕ್ಷಿಗಳ ಮೂಲಕ ಆರೋಪವನ್ನು ಸಾಬೀತು ಕೂಡಾ ಪಡಿಸಿದೆ. ಹಾಗೆಯೇ ಆರೋಪ ಎದುರಿಸಿದ ಸಂಸ್ಥೆಯು ಭಾರೀ ನಷ್ಟವನ್ನು ಕಾಣಲು ಕಾರಣ ಕೂಡಾ ಆಗಿದೆ. ಹಿಂಡನ್‌ಬರ್ಗ್ ವರದಿ ಪ್ರಕಟಿಸಿದ ಕೆಲವೇ ಗಂಟೆಗಳಲ್ಲಿ ಕೋಟ್ಯಾಂತರ ರೂಪಾಯಿಯನ್ನು ಬಿಲಿಯನೇರ್‌ಗಳು ಕಳೆದುಕೊಂಡಿದ್ದಾರೆ.
ಹಿಂಡನ್‌ಬರ್ಗ್ ಈ ಹಿಂದೆ ಎಲೆಕ್ಟ್ರಿಟ್ ಟ್ರಕ್‌ಗಳ ಉತ್ಪಾದನ ಸಂಸ್ಥೆಯಾದ ನಿಕೋಲಾ ಕಾರ್ಪೋರೇಷನ್ ವಿರುದ್ಧ ಸೆಪ್ಟೆಂಬರ್ 2020ರಲ್ಲಿ ವರದಿ ಪ್ರಕಟಿಸಿ ಪ್ರಕರಣ ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿದೆ. ಈ ಬಗ್ಗೆ ನಿಕೋಲಾ ಕಾರ್ಪೋರೇಷನ್ ಮಾಜಿ ಉದ್ಯೋಗಿಗಳ ಸಹಕಾರ ನೀಡಿದ್ದರು. 2020 ಜೂನ್‌ನಲ್ಲಿ ನಿಕೋಲಾ ಆರಂಭವಾಗಿದೆ. ಕೆಲವು ದಿನಗಳಲ್ಲೇ 34 ಬಿಲಿಯನ್ ಡಾಲರ್ ಸಂಪತ್ತನ್ನು ದಾಟಿ ಸಂಸ್ಥೆಯು ಫೋರ್ಡ್ ಮೋಟರ್ ಅನ್ನು ಮೀರಿಸಿದೆ. ಜನವರಿ 2023 ರಲ್ಲಿ, ಕಂಪನಿಯ ಮೌಲ್ಯವು 1.34 ಬಿಲಿಯನ್ ಡಾಲರ್‌ಗೆ ಕುಸಿದಿದೆ.
ಇನ್ನು ಭಾರತದ ಅತೀ ಶ್ರೀಮಂತ ವ್ಯಕ್ತಿಯಾಗಿದ್ದ ಗೌತಮ್ ಅದಾನಿಯ ಸಂಸ್ಥೆಯ ವಿರುದ್ಧವಾಗಿ ಹಿಂಡನ್‌ಬರ್ಗ್ ವರದಿ ಮಾಡಿದೆ. ಅದಾದ ಬೆನ್ನಲ್ಲೇ ಅದಾನಿ ಸಂಸ್ಥೆಯ ಸ್ಟಾಕ್‌ಗಳು ಭಾರೀ ನಷ್ಟವನ್ನು ಕಂಡಿದೆ. ವಿಶ್ವದ ಎರಡನೇ ಶ್ರೀಮಂತ ವ್ಯಕ್ತಿಯಾಗಿದ್ದ ಗೌತಮ್ ಅದಾನಿ ಬ್ಲ್ಯೂಬರ್ಗ್ ವೆಲ್ತ್ ಇಂಡೆಕ್ಸ್ ಪ್ರಕಾರ ಈಗ ವಿಶ್ವದ 21ನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ನಿವ್ವಳ ಆದಾಯವು 60.1 ಬಿಲಿಯನ್ ಡಾಲರ್ ಆಗಿದೆ.


Click it and Unblock the Notifications