ಜಗದೀಪ್ ದನ್ಖರ್(Jagdeep Dhankhar) ಅವರು ಉಪ ರಾಷ್ಟ್ರಪತಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.ಆರೋಗ್ಯ ಸಮಸ್ಯೆಗಳ ಕಾರಣಣವನ್ನು ಕೊಟ್ಟು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.ಸಂಸತ್ತಿನ ಮುಂಗಾರು ಅಧಿವೇಶನದ ಅಧ್ಯಕ್ಷತೆ ವಹಿಸಿದ ಬಳಿಕ ಅವರು ಈ ನಿರ್ಧಾರ ತೆಗೆದುಕೊಂಡಿರುವುದು ಎಲ್ಲರಿಗೂ ಅಚ್ಚರಿಯನ್ನುಂಟು ಮಾಡಿದೆ. ಜಗದೀಪ್ ಧನ್‌ಖರ್ ಅವರು ರಾಜೀನಾಮೆ ಪತ್ರದಲ್ಲಿ ನನ್ನ ರಾಜೀನಾಮೆ ಜುಲೈ 21 ರಿಂದಲೇ ಜಾರಿಗೆ ಬರುವಂತೆ ಕೇಳಿಕೊಂಡಿದ್ದಾರೆ.
ಹೌದು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಬರೆದ ಪತ್ರದಲ್ಲಿ, "ಆರೋಗ್ಯದ ಕಡೆ ಗಮನಹರಿಸುವುದು ಮತ್ತು ವೈದ್ಯಕೀಯ ಸಲಹೆಗಳನ್ನು ಪಾಲಿಸುವುದು ಅಗತ್ಯವಿರುವುದರಿಂದ, ಸಂವಿಧಾನದ 67(ಎ) ವಿಧಿಯ ಪ್ರಕಾರ ನಾನು ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ರಾಜೀನಾಮೆ ಪತ್ರದಲ್ಲಿ ಕಾರಣವನ್ನು ಕೊಟ್ಟಿದ್ದಾರೆ.

ಜುಲೈ 22 ರಂದು ರಾಜ್ಯಸಭೆಯ ಅಧ್ಯಕ್ಷರಾಗಿ ವ್ಯವಹಾರ ಸಲಹಾ ಸಮಿತಿ ಸೇರಿದಂತೆ ಹಲವು ಪ್ರಮುಖ ಸಭೆಗಳಲ್ಲಿ ಅವರು ಭಾಗವಹಿಸಬೇಕಿತ್ತು. ಅಲ್ಲದೆ, ಜುಲೈ 23 ರಂದು ಜೈಪುರಕ್ಕೆ ಭೇಟಿ ನೀಡಿ, ಭಾರತೀಯ ರಿಯಲ್ ಎಸ್ಟೇಟ್ ಡೆವಲಪರ್‌ಗಳ ಸಂಘದ (ಕ್ರೆಡೈ) ರಾಜಸ್ಥಾನದ ನೂತನ ಸಮಿತಿ ಸದಸ್ಯರೊಂದಿಗೆ ಸಂವಾದ ನಡೆಸುವ ಕಾರ್ಯಕ್ರಮ ಸಹ ಇತ್ತು ಈ ಎಲ್ಲಾ ಕಾರ್ಯಕ್ರಮಗಳು ಮುಂದೂಡಿಕೆಯಾಗಬಹುದು. ಎಲ್ಲರಿಗೂ ಮುಂದಿನ ಉಪರಾಷ್ಟ್ರಪತಿ ಯಾರು ಎಂಬುದು ದೊಡ್ಡ ಪ್ರಶ್ನೆಯಾಗಿ ಕಾಡುತ್ತಿದೆ.
ಜಗದೀಪ್ ಧನ್‌ಖರ್ ಅವರಿಗೆ ತಿಂಗಳ ವೇತನ ಎಷ್ಟು ಸಿಗುತ್ತಿತ್ತು?
ಉಪ ರಾಷ್ಟ್ರಪತಿ ಹುದ್ದೆ ಸಾಂವಿಧಾನಿಕ ಹುದ್ದೆಯಾಗಿರುವುದರಿಂದ ತಿಂಗಳಿಗೆ ಹೆಚ್ಚಿನ ವೇತನ ಮತ್ತು ಭತ್ಯೆಗಳು ಸಹ ಇವರಿಗೆ ಸಿಗುತ್ತಿತ್ತುವರದಿಗಳ ಪ್ರಕಾರ, ಅವರ ಚರಾಸ್ತಿ ಸುಮಾರು 4.5 ಕೋಟಿ ರೂ.ಗಳಷ್ಟಿದ್ದು, ಸ್ಥಿರ ಆಸ್ತಿ ಸುಮಾರು 3.3 ಕೋಟಿ ರೂ.ಗಳಷ್ಟಿದೆ.
ಜಗದೀಪ್ ಧನ್‌ಖರ್ ಜೀವನ
ಜಗದೀಪ್ ಧನ್‌ಖರ್ ಅವರು ಮೇ 8, 1951 ರಂದು ಜನಿಸಿದ ಇವರು ಭಾರತೀಯ ರಾಜಕಾರಣಿ ಮತ್ತು ವಕೀಲರಾಗಿ 2022 ರಿಂದ 2025 ರವರೆಗೆ ಭಾರತದ ಉಪರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದಾರೆ. ಇದಕ್ಕೂ ಮೊದಲು, 2019 ರಿಂದ 2022 ರವರೆಗೆ ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿದ್ದರು. 1990 ರಿಂದ 1991 ರವರೆಗೆ ಚಂದ್ರಶೇಖರ್ ಅವರ ಸಂಪುಟದಲ್ಲಿ ಕೇಂದ್ರ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವರಾಗಿಯೂ, 1989 ರಿಂದ 1991 ರವರೆಗೆ ಲೋಕಸಭಾ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಅಲ್ಲದೆ, 1993 ರಿಂದ 1998 ರವರೆಗೆ ರಾಜಸ್ಥಾನದ ವಿಧಾನಸಭೆಯ ಸದಸ್ಯರಾಗಿದ್ದರು.
ಭಾರತೀಯ ಜನತಾ ಪಕ್ಷ (ಬಿಜೆಪಿ), ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐಎನ್‌ಸಿ) ಮತ್ತು ಜನತಾ ದಳ (ಜೆಡಿ) ಸೇರಿದಂತೆ ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಗುರುತಿಸಿಕೊಂಡು ತಮ್ಮ ಛಾಪುನ್ನು ಮೂಡಿಸಿದ್ದಾರೆ. 2008 ರ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಪಕ್ಷದ ಪ್ರಚಾರ ಸಮಿತಿಯ ಸದಸ್ಯರಾಗಿದ್ದರು. 2016 ರಲ್ಲಿ ಅವರು ಬಿಜೆಪಿಯ ಕಾನೂನು ಮತ್ತು ಕಾನೂನು ವ್ಯವಹಾರಗಳ ವಿಭಾಗದ ಮುಖ್ಯಸ್ಥರಾಗಿದ್ದರು. ಅವರು ರಾಜಸ್ಥಾನ ವಿಶ್ವವಿದ್ಯಾಲಯಕ್ಕೆ ಸಂಯೋಜಿತವಾಗಿರುವ ಜೈಪುರದ ಮಹಾರಾಜ ಕಾಲೇಜಿನಿಂದ ಬಿ.ಎಸ್ಸಿ. ಪದವಿ 1978-1979 ರಲ್ಲಿ ರಾಜಸ್ಥಾನ ವಿಶ್ವವಿದ್ಯಾಲಯದಿಂದ ಎಲ್‌ಎಲ್‌ಬಿ ಪದವಿಯನ್ನು ಪಡೆದಿದ್ದಾರೆ.
1990 ರಿಂದ ಜಗದೀಪ್ ಧಂಖರ್ ಅವರು ಸುಪ್ರೀಂ ಕೋರ್ಟ್‌ನಲ್ಲಿ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದರು. ಉಕ್ಕು, ಕಲ್ಲಿದ್ದಲು, ಗಣಿಗಾರಿಕೆ ಮತ್ತು ಅಂತರರಾಷ್ಟ್ರೀಯ ವಾಣಿಜ್ಯ ಮಧ್ಯಸ್ಥಿಕೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅವರು ಪರಿಣತಿ ಹೊಂದಿದ್ದರು.
More From GoodReturns

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Mandya ARAI Centre: ಮಂಡ್ಯಕ್ಕೆ ಮತ್ತೊಂದು ಮೆಗಾ ಗಿಫ್ಟ್…500 ಕೋಟಿ ಹೂಡಿಕೆಯಲ್ಲಿ ARAIನ ಸುಧಾರಿತ ಕೇಂದ್ರ ಸ್ಥಾಪನೆ!

Karnataka Budget 2026: 4.49 ಲಕ್ಷ ಕೋಟಿಯ ದಾಖಲೆ ಬಜೆಟ್…ಈ ಬಜೆಟ್ನಲ್ಲಿ ಜನಸಾಮಾನ್ಯರಿಗೆ ಸಿಕ್ಕ ಕೊಡುಗೆ ಏನು?

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Karnataka Budget 2026 Live Updates: ಕರ್ನಾಟಕ ಬಜೆಟ್ನ ಪ್ರಮುಖ ಘೋಷಣೆಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ

North Karnataka: ಕೈಗಾರಿಕೆ, ಕೃಷಿ, ಶಿಕ್ಷಣ..ಉತ್ತರ ಕರ್ನಾಟಕಕ್ಕೆ ಸರ್ಕಾರದಿಂದ ಸಿಕ್ಕ ಹೊಸ ಯೋಜನೆಗಳು ಏನು?

ಕರ್ನಾಟಕ ಬಜೆಟ್ 2026: ಕೃಷಿ, ಶಿಕ್ಷಣ, ಸಾರಿಗೆ, ವೈದ್ಯಕೀಯ ಕ್ಷೇತ್ರಗಳ ನಿರೀಕ್ಷೆ ಏನು? ಬಜೆಟ್ ಮೇಲೆ ಭಾರಿ ಬೇಡಿಕೆ

Karnataka Budget 2026–27: ಬೆಂಗಳೂರು ಮೂಲಸೌಕರ್ಯ ಮತ್ತು ಕಲ್ಯಾಣ ಯೋಜನೆಗಳಿಗೆ ಒತ್ತು ಸಾಧ್ಯತೆ!

Karnataka Weather: ರಾಜ್ಯದ ಜನರಿಗೆ ಬಿಸಿಲಿನ ಕಂಟಕ! ಹವಾಮಾನ ಇಲಾಖೆಯಿಂದ ಎಚ್ಚರಿಕೆ

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ



Click it and Unblock the Notifications