2,000 ಉದ್ಯೋಗ ಕಡಿತಗೊಳಿಸಲಿದೆ ಜಾಗ್ವಾರ್‌ ಲ್ಯಾಂಡ್ ರೋವರ್

ಟಾಟಾ ಸಮೂಹದ ಅಂಗಸಂಸ್ಥೆಯಾದ ಜಾಗ್ವಾರ್ ಲ್ಯಾಂಡ್ ರೋವರ್ ಜಾಗತಿಕ ಮಟ್ಟದಲ್ಲಿ 2,000 ಉದ್ಯೋಗಿಗಳನ್ನು ಕಡಿತಗೊಳಿಸುವುದಾಗಿ ಬುಧವಾರ ಘೋಷಿಸಿದೆ.

ಜಗತ್ತಿನ ಐಷಾರಾಮಿ ಕಾರುಗಳಲ್ಲಿ ಒಂದಾದ ಜಾಗ್ವಾರ್‌ ಬ್ರಾಂಡ್ 2025ರ ವೇಳೆಗೆ ಸಂಪೂರ್ಣವಾಗಿ ಎಲೆಕ್ಟ್ರಿಕ್ ಆಗಲಿದೆ. ಈ ಮೂಲಕ ಜಾಗ್ವಾರ್‌ನ ಎಲ್ಲಾ ಬ್ರ್ಯಾಂಡ್‌ ಕಾರುಗಳು ಎಲೆಕ್ಟ್ರಿಕ್ ಆಗಿ ಪರಿವರ್ತನೆಗೊಂಡು 2030 ರ ವೇಳೆಗೆ ಸಂಪೂರ್ಣ ಮಾದರಿಗಳನ್ನು ಪ್ರಾರಂಭಿಸಲಾಗುವುದು ಎಂದು ತಿಳಿಸಿದೆ.

2,000 ಉದ್ಯೋಗ ಕಡಿತಗೊಳಿಸಲಿದೆ ಜಾಗ್ವಾರ್‌ ಲ್ಯಾಂಡ್ ರೋವರ್

"ಜಾಗ್ವಾರ್ ಲ್ಯಾಂಡ್ ರೋವರ್ ಸಂಘಟನೆಯ ಸಂಪೂರ್ಣ ಪರಿಶೀಲನೆ ಈಗಾಗಲೇ ನಡೆಯುತ್ತಿದೆ" ಎಂದು ಕಂಪನಿಯು ಇಮೇಲ್ ಹೇಳಿಕೆಯಲ್ಲಿ ತಿಳಿಸಿದೆ ಎಂದು ಎಕನಾಮಿಕ್ ಟೈಮ್ಸ್‌ ವರದಿ ಮಾಡಿದೆ.

"ಮುಂದಿನ ಹಣಕಾಸು ವರ್ಷದಲ್ಲಿ ಜಾಗತಿಕವಾಗಿ ಸಂಬಳ ಪಡೆಯುವ ನಮ್ಮ ಉದ್ಯೋಗಿಗಳಲ್ಲಿ ಸುಮಾರು 2,000 ಜನರ ಉದ್ಯೋಗ ಕಡಿತವನ್ನು ನಾವು ನಿರೀಕ್ಷಿಸುತ್ತೇವೆ" ಎಂದು ಅದು ಹೇಳಿದೆ.

ಭಾರತದ ಟಾಟಾ ಮೋಟಾರ್ಸ್ ಒಡೆತನದ ಜೆಎಲ್‌ಆರ್ ತನ್ನ ಲ್ಯಾಂಡ್ ರೋವರ್ ಬ್ರಾಂಡ್ ಮುಂದಿನ ಐದು ವರ್ಷಗಳಲ್ಲಿ ಆರು ಸಂಪೂರ್ಣ ವಿದ್ಯುತ್ ಮಾದರಿಗಳನ್ನು ಬಿಡುಗಡೆ ಮಾಡಲಿದೆ ಎಂದು ಹೇಳಿದೆ, ಮೊದಲನೆಯದು 2024 ರಲ್ಲಿ ಬಿಡುಗಡೆ ಮಾಡಲಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+