ಜನವರಿಯಲ್ಲಿ ಸಗಟು ಹಣದುಬ್ಬರ ಮತ್ತೆ ಇಳಿಕೆಯಾಗಿದೆ. ಡಿಸೆಂಬರ್‌ನಲ್ಲಿ ಸಗಟು ಹಣದುಬ್ಬರ ಇಳಿಕೆಯಾಗಿದ್ದು, ಜನವರಿಯಲ್ಲಿಯೂ ಕುಸಿದಿದೆ. ಸಗಟು ಹಣದುಬ್ಬರವು 24 ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿದಿದ್ದು, ಶೇಕಡ 4.73ಕ್ಕೆ ತಲುಪಿದೆ. ಸರ್ಕಾರದ ಡೇಟಾದಲ್ಲಿ ಈ ಬಗ್ಗೆ ಮಾಹಿತಿಯಿದೆ. ಕಳೆದ ತಿಂಗಳು ಪ್ರಮುಖವಾಗಿ ನ್ಯಾಚುರಲ್ ಗ್ಯಾಸ್, ತೈಲ ದರ ಇಳಿಕೆಯಾಗಿರುವುದರಿಂದ ಹಣದುಬ್ಬರವು ಇಳಿದಿದೆ.
ಡಿಸೆಂಬರ್ 2022ರಲ್ಲಿ ಆಹಾರ ಉತ್ಪನ್ನಗಳ ಬೆಲೆ ಇಳಿಕೆ, ಕಚ್ಚಾ ಎಣ್ಣೆಗಳ ಬೆಲೆ ಇಳಿಕೆ, ಕಚ್ಚಾ ತೈಲ, ನೈಸರ್ಗಿಕ ಅನಿಲ, ಆಹಾರ ಉತ್ಪನ್ನ, ಜವಳಿ, ರಾಸಾಯನಿಕ ಮತ್ತು ರಾಸಾಯನಿಕ ಉತ್ಪನ್ನಗಳ ಬೆಲೆ ಇಳಿಕೆಯಾದ ಕಾರಣದಿಂದಾಗಿ ಸಗಟು ಹಣದುಬ್ಬರವು ಇಳಿದಿದೆ. ಜನವರಿಯಲ್ಲಿ ಆಹಾರ ಉತ್ಪನ್ನಗಳು, ತೈಲ, ಕಚ್ಚಾ ಪೆಟ್ರೋಲಿಯಂ ಮತ್ತು ನ್ಯಾಚುರಲ್ ಗ್ಯಾಸ್, ಟೆಕ್ಸ್‌ಟೈಲ್ ದರ ಇಳಿಕೆಯಿಂದಾಗಿ ಸಗಟು ಹಣದುಬ್ಬರ ಕುಸಿದಿದೆ.
ಕಳೆದ ಕೆಲವು ತಿಂಗಳುಗಳಿಂದ ಸಗಟು ಹಣದುಬ್ಬರವು ಕಡಿಮೆಯಾಗುತ್ತಿದೆ. ಡಿಸೆಂಬರ್‌ನಲ್ಲಿ ಸಗಟು ಹಣದುಬ್ಬರ ಇಳಿಕೆಯಾಗಿದೆ. 2022ರ ನವೆಂಬರ್‌ನಲ್ಲಿ ಶೇಕಡ 5.85ರಷ್ಟಿದ್ದ ಸಗಟು ಹಣದುಬ್ಬರ, ಡಿಸೆಂಬರ್‌ಗೆ ಶೇಕಡ 4.95ಕ್ಕೆ ಇಳಿಕೆಯಾಗಿದೆ. ಈ ಬಗ್ಗೆ ಇಲ್ಲಿದೆ ಅಧಿಕ ಮಾಹಿತಿ ಮುಂದೆ ಓದಿ....

ಹಣದುಬ್ಬರವನ್ನು ಲೆಕ್ಕಾಚಾರ ಮಾಡುವುದು ಹೇಗೆ?
ಪ್ರಮುಖವಾಗಿ ವೋಲ್‌ಸೇಲ್ ಪ್ರೈಸ್ ಇಂಡೆಕ್ಸ್ ಮತ್ತು ಗ್ರಾಹಕರ ದರ ಹಣದುಬ್ಬರ (ಸಿಪಿಐ) ಆಧಾರದಲ್ಲಿ ಸಗಟು ಹಣದುಬ್ಬರವನ್ನು ಲೆಕ್ಕಾಚಾರ ಮಾಡಲಾಗುತ್ತದೆ. ಈ ಆಧಾರದಲ್ಲಿ ನೋಡಿದಾಗ ಜನವರಿಯಲ್ಲಿ ಸಗಟು ಹಣದುಬ್ಬರವು ಇಳಿಕೆಯಾಗಿದೆ. ಇನ್ನು ರಿಟೇಲ್ ಹಣದುಬ್ಬರವು ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ.
ರಿಟೇಲ್ ಹಣದುಬ್ಬರ ಏರಿಕೆ
ರಿಟೇಲ್ ಹಣದುಬ್ಬರವು ಜನವರಿಯಲ್ಲಿ ಮೂರು ತಿಂಗಳ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ. ಪ್ರಮುಖವಾಗಿ ಮೊಟ್ಟೆ, ಮಾಂಸ, ಮೀನು, ಹಾಲಿನ ದರ ಏರಿಕೆಯಾದ ಕಾರಣ ಜನವರಿಯಲ್ಲಿ ರಿಟೇಲ್ ಹಣದುಬ್ಬರವು ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಸೋಮವಾರ ಈ ಮಾಹಿತಿಯನ್ನು ಎನ್‌ಎಸ್‌ಒ ಮಾಹಿತಿ ನೀಡಿದೆ.
ಜನವರಿಯಲ್ಲಿ ರಿಟೇಲ್ ಹಣದುಬ್ಬರವು ಶೇಕಡ 6.5ಕ್ಕೆ ಏರಿಕೆಯಾಗಿದೆ. ಡಿಸೆಂಬರ್‌ನಲ್ಲಿ ರಿಟೇಲ್ ಹಣದುಬ್ಬರವು ಶೇಕಡ 5.7ರಷ್ಟು ಆಗಿತ್ತು. ಕಳೆದ ವರ್ಷ ಜನವರಿಯಲ್ಲಿ ರಿಟೇಲ್ ಹಣದುಬ್ಬರವು ಶೇಕಡ 6 ಆಗಿತ್ತು. ಇನ್ನು ಆಹಾರ ದರ ಇಂಡೆಕ್ಸ್ ಜನವರಿಯಲ್ಲಿ ಶೇಕಡ 6 ಆಗಿದೆ. ಆದರೆ ಡಿಸೆಂಬರ್‌ನಲ್ಲಿ ಶೇಕಡ 4.2 ಆಗಿತ್ತು. ಗ್ರಾಮೀಣ ಹಣದುಬ್ಬರವು ಶೇಕಡ 6.9ಕ್ಕೆ ಏರಿಕೆಯಾಗಿದೆ. ಈ ಹಿಂದೆ ಗ್ರಾಮೀಣ ಹಣದುಬ್ಬರವು ಶೇಕಡ 6 ಆಗಿತ್ತು.


Click it and Unblock the Notifications