ಚಂದ್ರನನ್ನು ಸುತ್ತಲು ಗರ್ಲ್‌ಫ್ರೆಂಡ್ ಬೇಕಾಗಿದ್ದಾಳೆ: ಜಪಾನ್‌ನ ಶತಕೋಟ್ಯಾಧಿಪತಿ ಜಾಹೀರಾತು

ಸ್ಪೇಸ್‌ ಎಕ್ಸ್ ರಾಕೆಟ್‌ನಲ್ಲಿ ಚಂದ್ರನನ್ನು ಒಂದು ಸುತ್ತು ಹಾಕಲು ಸೂಕ್ತವಾದ ಗರ್ಲ್‌ಫ್ರೆಂಡ್ ಬೇಕಾಗಿದ್ದಾಳೆ ಎಂದು ಜಪಾನ್‌ನ ಶತಕೋಟ್ಯಧಿಪತಿ ಯುಸಾಕು ಮೇಜಾವಾ ಜಾಹೀರಾತು ನೀಡಿದ್ದಾರೆ.

ಜಪಾನ್‌ನ ಅತಿದೊಡ್ಡ ಆನ್‌ಲೈನ್ ಫ್ಯಾಷನ್‌ ವ್ಯಾಪಾರ ಸಂಸ್ಥೆಯಾದ ಜೊಜೊ ಕಂಪನಿಯ ಸಂಸ್ಥಾಪಕ, 44 ವರ್ಷದ ಯುಸಾಕು ಮೇಜಾವಾ ಈ ವಿಶಿಷ್ಟ ಬೇಡಿಯೊಂದನ್ನ ಮುಂದಿಟ್ಟಿದ್ದಾರೆ. 2023ರಲ್ಲಿ ಎಲನ್ ಮಸ್ಕ್ ಸ್ಪೇಸ್ ಎಕ್ಸ್ ಬಾಹ್ಯಾಕಾಶ ಸಂಸ್ಥೆಯಿಂದ ರಾಕೆಟ್ ಮೂಲಕ ಚಂದ್ರನನ್ನು ಸುತ್ತುವ ಪ್ರವಾಸವನ್ನು ಕೈಗೊಂಡಿರುವ ಮೊದಲ ಖಾಸಗಿ ಪ್ರಯಾಣಿಕರಾಗಿದ್ದಾರೆ.

ಚಂದ್ರನನ್ನು ಸುತ್ತಲು ಗರ್ಲ್‌ಫ್ರೆಂಡ್ ಬೇಕಾಗಿದ್ದಾಳೆ..!

'' ನನಗೆ ಈಗ 44 ವರ್ಷ. ಒಂಟಿತನ ಮತ್ತು ಶೂನ್ಯತೆಯ ಭಾವನೆಗಳು ನನ್ನ ಕಾಡಲಾರಂಭಿಸಿದೆ. ನಾನು ಒಬ್ಬಳೆ ಮಹಿಳೆಯನ್ನು ಪ್ರೀತಿಸುವಂತಾಗಬೇಕು ಎಂದು ಜಾಹೀರಾತಿನಲ್ಲಿ ಹೇಳಿದ್ದಾರೆ.

ಯುಸಾಕು ಮೇಜಾವಾ ಹೀಗೆ ಜಾಹೀರಾತು ನೀಡಿದ್ದೇ ತಡ ಸಾವಿರಾರು ಸಂಖ್ಯೆಯಲ್ಲಿ ಹುಡುಗಿಯರು ಈಗಾಗಲೇ ಆತನ ಗರ್ಲ್‌ಫ್ರೆಂಡ್ ಆಗಲು ಒಲವು ತೋರಿದ್ದಾರೆ. ಜನವರಿ 17, 2020 ಅರ್ಜಿ ಹಾಕಲು ಡೆಡ್‌ಲೈನ್ ಆಗಿದ್ದು, ಮಾರ್ಚ್‌ ನಂತರ ಆತನ ಗರ್ಲ್‌ಫ್ರೆಂಡ್ ಯಾರು ಎಂದು ಪ್ರಕಟಿಸಲಾಗುತ್ತದೆ.

ಯುಸಾಕು ಮೇಜಾವಾ ಇತ್ತೀಚೆಗಷ್ಟೇ ಇತ್ತೀಚೆಗಷ್ಟೇ ಜಪಾನಿನ ನಟಿಯೊಂದಿಗೆ ಬ್ರೇಕ್‌ ಅಪ್ ಆದರು. ಹೀಗಾಗಿ ಜೀವನವನ್ನು ಅವರೊಂದಿಗೆ ಪೂರ್ಣವಾಗಿ ಕಳೆಯುವ 20 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಹಿಳೆಯರಿಂದ ಅರ್ಜಿಗಳನ್ನು ಸ್ವೀಕರಿಸುತ್ತಿದ್ದಾರೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+