ವೇಗದ ಅಂತರ್ಜಾಲ ಸೇವೆ ನೀಡುವ ರಿಲಯನ್ಸ ಜಿಯೋ ಕಂಪನಿ ಮಹತ್ವದ ಘೋಷಣೆ ಮಾಡಿದೆ. ದೇಶಾದ್ಯಂತ ಅನೇಕ ನಗರಗಳಲ್ಲಿ ಜಿಯೋ 5G ಸೇವೆ ಇಂದಿನಿಂದ (ಜ.24) ಆರಂಭಿಸುವುದಾಗಿ ತಿಳಿಸಿದೆ. ಅವು ಯಾವ ನಗರಗಳು, ಎಷ್ಟು ನಗರಗಳಿಗೆ ಈ ಸೇವೆ ವಿಸ್ತರಣೆ ಆಗಿದೆ ಎಂದು ಸಮಗ್ರ ಮಾಹಿತಿ ಇಲ್ಲಿದ
ನವದೆಹಲಿ, ಜನವರಿ 24: ಭಾರತದಲ್ಲಿ ಉದ್ದೇಶಿತ ರಿಲಯನ್ಸ ಜಿಯೋ 5G ನೆಟ್‌ವರ್ಕ್ ಸೇವೆ ಆರಂಭಿಸುವುದಾಗಿ ಕಂಪನಿ ತಿಳಿಸಿದೆ. ದೇಶದ ಬೃಹತ್ ನಗರಗಳು ಸೇರಿದಂತೆ ಒಟ್ಟು 50 ನಗರಗಳ ಜನರು 5G ಸೇವೆ ಆನಂದಿಸಲಿದ್ದಾರೆ.
ಈ ಬಗ್ಗೆ ರಿಲಯನ್ಸ ಜಿಯೋ ಕಂಪನಿ ಮಂಗಳವಾರ ಅಧಿಕೃತವಾಗಿ ಘೋಷಿಸಿದೆ. ಗೋವಾ, ಹರಿಯಾಣ, ಜಾರ್ಖಂಡ್, ಆಂಧ್ರಪ್ರದೇಶ, ಅಸ್ಸಾಂ, ಛತ್ತೀಸ್‌ಗಢ, ಪುದುಚೇರಿ, ಮಹಾರಾಷ್ಟ್ರ, ಒಡಿಶಾ, ಪಂಜಾಬ್, ರಾಜಸ್ಥಾನ, ತಮಿಳುನಾಡು, , ಕೇರಳ ಹಾಗೂ ಕರ್ನಾಟಕದಲ್ಲಿ ನಿಗದಿತ ನಗರಗಳಲ್ಲಿ ಜಿಯೋ 5G ಸೇವೆ ಇಂದಿನಿಂದ ಲಭ್ಯವಾಗಲಿದೆ.
ದೇಶದ ಪ್ರಮುಖ 17 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಒಟ್ಟು 50 ನಗರಗಳಲ್ಲಿ ಜಿಯೋ ಟ್ರೂ 5G ಸೇವೆ ಆರಂಭವಿಸಲು ಕಂಪನಿ ಉತ್ಸುಕವಾಗಿದೆ. ಈ ಮೂಲಕ ದೇಶದಲ್ಲಿ ಒಟ್ಟು 180ಕ್ಕೂ ಹೆಚ್ಚು ನಗರಗಳ ಜನರು ಜಿಯೋ ಸೇವೆಯ ಫಲಾನುಭವಗಿಳು ಆಗುತ್ತಿದ್ದಾರೆ ಎಂದು ಕಂಪನಿ ಹರ್ಷ ವ್ಯಕ್ತಪಡಿಸಿದೆ. ಅಂತರ್ಜಾಲ ವಲಯದಲ್ಲೇ ಕ್ರಾಂತಿ ಆರಂಭವಾಗುವಂತ ಈ ಬೃಹತ್ ಘೋಷಣೆ ಕೇವಲ ಭಾರತದಲ್ಲಿ ಅಷ್ಟೇ ಅಲ್ಲದೇ ಇತರ ದೇಶಗಳಲ್ಲಿ 5G ಸೇವೆಗಳ ಬೃಹತ್ ಘೋಷಣೆಯೇ ಆಗಿದೆ ಎಂದು ಜಿಯೋ ಕಂಪನಿ ವಕ್ತಾರರು ತಿಳಿಸಿದ್ದಾರೆ.

ಜನವರಿ 24 ಇಂದಿನಿಂದ ಆರಂಭವಾಗಿರುವ ಈ ಜಿಯೋ ಉನ್ನತ ಸೇವೆಗೆ ಯಾವುದೇ ಹೆಚ್ಚುವರಿ ಇಲ್ಲ ಎಂದು ತಿಳಿಸಿದೆ. 1 Gbps ವೇಗದಲ್ಲಿ ಅನಿಯಮಿತವಾಗಿ ಡೇಟಾ ಬಳಸಬಹುದಾಗಿದೆ. ಇದರಿಂದ ಇನ್ನಷ್ಟು ವೇಗ ದೊರೆಯಲಿದೆ. ದೇಶದ ಎಲ್ಲ ರಂಗಗಳಲ್ಲಿಯೂ ಈ ಸೇವೆಯು ತ್ವರಿತಗತಿ ಪ್ರಗತಿಗೆ ನೆರವಾಗಲಿದೆ.
ಜಿಯೋ ಕಂಪನಿ 5G ಸೇವೆ ಆರಂಭಿಸಿರುವ ನಗರಗಳು ಯಾವವು? ತಿಳಿಯಿರಿ
- ಓಂಗೋಲ್, ಆಂಧ್ರಪ್ರದೇಶ
- ರಾಜಮಹೇಂದ್ರವರಂ, ಆಂಧ್ರಪ್ರದೇಶ
- ಶ್ರೀಕಾಕುಳಂ, ಆಂಧ್ರಪ್ರದೇಶ
- ವಿಜಯನಗರಂ, ಆಂಧ್ರಪ್ರದೇಶ
- ನಾಗಾನ್, ಅಸ್ಸಾಂ
- ಚಿತ್ತೂರು, ಆಂಧ್ರಪ್ರದೇಶ
- ಕಡಪ, ಆಂಧ್ರಪ್ರದೇಶ
- ನರಸರಾವ್‌ಪೇಟೆ, ಆಂಧ್ರಪ್ರದೇಶ
- ಬಿಲಾಸ್‌ಪುರ, ಛತ್ತೀಸ್‌ಗಢ
- ಕೊರ್ಬಾ, ಛತ್ತೀಸ್‌ಗಢ
- ರಾಜನಂದಗಾಂವ್, ಛತ್ತೀಸ್‌ಗಢ
- ಕರ್ನಾಲ್, ಹರಿಯಾಣ
- ಪಾಣಿಪತ್, ಹರಿಯಾಣ
- ರೋಹ್ಟಕ್, ಹರಿಯಾಣ
- ಸಿರ್ಸಾ, ಹರಿಯಾಣ
- ಸೋನಿಪತ್, ಹರಿಯಾಣ
- ಧನ್ಬಾದ್, ಜಾರ್ಖಂಡ್
- ಬಹದ್ದೂರ್‌ಗಢ, ಹರಿಯಾಣ
- ಹಿಸಾರ್, ಹರಿಯಾಣ
- ಪಣಜಿ, ಗೋವಾ
- ಅಂಬಾಲಾ, ಹರಿಯಾಣ
- ಹಾಸನ, ಕರ್ನಾಟಕ
- ಮಂಡ್ಯ, ಕರ್ನಾಟಕ
- ತುಮಕೂರು, ಕರ್ನಾಟಕ
- ಬಾಗಲಕೋಟೆ, ಕರ್ನಾಟಕ
- ಚಿಕ್ಕಮಗಳೂರು, ಕರ್ನಾಟಕ
- ಧರ್ಮಪುರಿ, ತಮಿಳುನಾಡು
- ಈರೋಡ್, ತಮಿಳುನಾಡು
- ತೂತುಕುಡಿ, ತಮಿಳುನಾಡು
- ಬಾಲಸೋರ್, ಒಡಿಶಾ
- ಬರಿಪಾದ, ಒಡಿಶಾ
- ಭದ್ರಕ್, ಒಡಿಶಾ

- ಜರ್ಸುಗುಡ, ಒಡಿಶಾ
- ಪುರಿ, ಒಡಿಶಾ
- ಸಂಬಲ್ಪುರ್, ಒಡಿಶಾ
- ಆಲಪ್ಪುಳ, ಕೇರಳ
- ಕೊಲ್ಲಾಪುರ, ಮಹಾರಾಷ್ಟ್ರ
- ನಾಂದೇಡ್-ವಘಾಲಾ, ಮಹಾರಾಷ್ಟ್ರ
- ಸಾಂಗ್ಲಿ, ಮಹಾರಾಷ್ಟ್ರ
- ಪುದುಚೇರಿ, ಪುದುಚೇರಿ
- ಅಮೃತಸರ, ಪಂಜಾಬ್
- ಬಿಕಾನೇರ್, ರಾಜಸ್ಥಾನ
- ಕೋಟಾ, ರಾಜಸ್ಥಾನ
- ಮೊರಾದಾಬಾದ್, ಉತ್ತರ ಪ್ರದೇಶ
- ಸಹರಾನ್‌ಪುರ, ಉತ್ತರ ಪ್ರದೇಶ
- ಅಸನ್ಸೋಲ್, ಪಶ್ಚಿಮ ಬಂಗಾಳ
- ದುರ್ಗಾಪುರ, ಪಶ್ಚಿಮ ಬಂಗಾಳ
- ನಲ್ಗೊಂಡ, ತೆಲಂಗಾಣ
- ಝಾನ್ಸಿ, ಉತ್ತರ ಪ್ರದೇಶ
- ಅಲಿಗಢ, ಉತ್ತರ ಪ್ರದೇಶ


Click it and Unblock the Notifications