ಈಗಾಗಲೇ ಡಿಸೆಂಬರ್ 3ರಿಂದ ಅನ್ವಯವಾಗುವಂತೆ ವೊಡಾಫೋನ್-ಐಡಿಯಾ, ಏರ್‌ಟೆಲ್ ಕಂಪನಿಗಳು ಕರೆ ಹಾಗೂ ಡೇಟಾ ದರಗಳನ್ನು ಏರಿಕೆ ಮಾಡಿದ್ದಾಗಿದೆ. ಜಿಯೋ ಕೂಡ ತನ್ನ ಯೋಜನೆಗಳ ದರವನ್ನು ಶೇಕಡಾ 40ರಷ್ಟು ಏರಿಕೆ ಮಾಡಲಿದೆ. ಶುಕ್ರವಾರ (ಡಿಸೆಂಬರ್ 6) ಜಿಯೋ ತನ್ನ ಹೊಸ 'ಆಲ್ ಇನ್ ಒನ್' ಯೋಜನೆಯನ್ನ ಜಾರಿಗೆ ತರಲಿದೆ. ಜೊತೆಗೆ ಶೇಕಡಾ 40ರಷ್ಟು ದರ ಏರಿಕೆ ಆಗಲಿದೆ.
ಜಿಯೊ ದರ ಏರಿಕೆಗೂ ಮುನ್ನ ಗ್ರಾಹಕರು ಈ ರೀತಿ ಮಾಡಿದ್ದಲ್ಲಿ ಹಣ ಉಳಿಸಬಹುದಾಗಿದೆ. ಏಕೆಂದರೆ ಶುಕ್ರವಾರದ ಬಳಿಕ ಜಿಯೊ ಪ್ರಿಪೇಯ್ಡ್ ಪ್ಲಾನ್‌ಗಳ ದರ ಹೆಚ್ಚಾಗಲಿದೆ. ಈಗಾಗಲೇ ಪ್ರಚಲಿತದಲ್ಲಿರುವ 399 ಹಾಗೂ 444 ಪ್ಲಾನ್‌ಗಳ ಬೆಲೆಯಲ್ಲೂ ಬದಲಾವಣೆ ಆಗಲಿದೆ.
ಸುಮಾರು 1 ವರ್ಷದ ಮಟ್ಟಿಗೆ ಈಗಿರುವ ದರದಲ್ಲೇ ನೀವು ಸೌಲಭ್ಯಗಳನ್ನು ಪಡೆಯಬೇಕಾದ್ರೆ ಅಡ್ವಾನ್ಸ್ ರೀಚಾರ್ಜ್ ಅವಕಾಶವನ್ನು ಜಿಯೊ ನೀಡಿದೆ. ಸದ್ಯ ಈಗಿರುವ ಪ್ಲಾನ್ 149 ರುಪಾಯಿ ರೀಚಾರ್ಜ್ ಮಾಡಿದರೆ 24 ದಿನಗಳ ವ್ಯಾಲಿಡಿಟಿ ಇದೆ. 444 ರೀಚಾರ್ಜ್ ಮಾಡಿದರೆ 84 ದಿನಗಳ ವ್ಯಾಲಿಡಿಟಿ, 1,699 ರೀಚಾರ್ಜ್ ಮಾಡಿಸಿದರೆ 365 ದಿನಗಳ ವ್ಯಾಲಿಡಿಟಿ ಒಳಗೊಂಡಿದೆ.

ಡಿಸೆಂಬರ್ 6ರ ಬಳಿಕ ಈ ಮೇಲಿನ ಯೋಜನೆಗಳನ್ನು ರೀಚಾರ್ಜ್ ಮಾಡಲು ಹೆಚ್ಚುವರಿ ಹಣ ನೀಡಬೇಕಾಗಬಹುದು. ಏಕೆಂದರೆ ದರ ಏರಿಕೆಯಾಗುವ ಜೊತೆಗೆ ಬೇರೆ ಆಫರ್ ಗಳು ಬಿಡುಗಡೆಯಾಗ್ತಿವೆ. ಹೀಗಾಗಿ ಇದೇ ದರದಲ್ಲಿ ನೀವು ಸೌಲಭ್ಯ ಪಡೆಯಬೇಕಾದ್ರೆ ಅಡ್ವಾನ್ಸ್ ರೀಚಾರ್ಜ್ ಮಾಡಿಸಬಹುದು.
ಉದಾಹರಣೆಗೆ ನೀವು 444 ರುಪಾಯಿಯ ಯೋಜನೆಯನ್ನು ರೀಚಾರ್ಜ್ ಮಾಡಲು ಬಯಸಿದರೆ ಅದರ ವ್ಯಾಲಿಡಿಟಿ 84 ದಿನಗಳು ಹಾಗೂ ಪ್ರತಿದಿನ 2 ಜಿಬಿ ಡೇಟಾ ಜೊತೆಗೆ ಅನ್‌ಲಿಮಿಟೆಡ್(1000 ನಿಮಿಷಗಳು) ಕರೆಗಳ ಸೌಲಭ್ಯವಿದೆ. ಇದೇ ಯೋಜನೆಯನ್ನು ನೀವು ಬೇಕಾದಲ್ಲಿ ನಾಲ್ಕು ಬಾರಿ ರೀಚಾರ್ಜ್ ಮಾಡಿದರೆ 334 ದಿನಗಳ ವರೆಗೆ ಯಾವುದೇ ಹೆಚ್ಚುವರಿ ಶುಲ್ಕ ಇಲ್ಲದೆ ಸೌಲಭ್ಯವನ್ನು ಪಡೆಯಬಹುದು.
444 ಯೋಜನೆಯ ರೀಚಾರ್ಜ್ ವ್ಯಾಲಿಡಿಟಿ ಮುಗಿದ ಬಳಿಕವಷ್ಟೇ ನಿಮ್ಮ ಅಡ್ವಾನ್ಸ್ ರೀಚಾರ್ಜ್ ಯೋಜನೆಯು ಚಾಲನೆಗೆ ಬರಲಿದೆ. ಹೀಗಾಗಿ ಒಮ್ಮೆಲೆ ನಾಲ್ಕು ಬಾರಿ ರೀಚಾರ್ಜ್ ಮಾಡಿದರೆ ನೀವು 334 ದಿನಗಳ ವರೆಗೆ ಯಾವುದೇ ಹೆಚ್ಚುವರಿ ಶುಲ್ಕ ಇಲ್ಲದೆ ಪ್ರಸ್ತುತ ಇರುವ ಸೌಲಭ್ಯವನ್ನು ಪಡೆಯಬಹುದು.


Click it and Unblock the Notifications