For Quick Alerts
ALLOW NOTIFICATIONS  
For Daily Alerts

ಜಿಯೋ- ಕ್ವಾಲ್ ಕಾಮ್ ನಿಂದ ಯಶಸ್ವಿ 5G ಪರೀಕ್ಷೆ; 1 Gbps ವೇಗದಲ್ಲಿ ಡೇಟಾ ಟ್ರಾನ್ಸ್ ಫರ್

|

ರಿಲಯನ್ಸ್ ಇಂಡಸ್ಟ್ರೀಸ್ ಮಾಲೀಕತ್ವದ ಜಿಯೋ ಪ್ಲಾಟ್ ಫಾರ್ಮ್ಸ್ ಮಂಗಳವಾರ ನೀಡಿದ ಮಾಹಿತಿ ಪ್ರಕಾರ, ಐದನೇ ತಲೆಮಾರಿನ (5th Generation) ರೇಡಿಯೋ ಆಕ್ಸೆಸ್ ನೆಟ್ ವರ್ಕ್ (RAN) ಸ್ಥಳೀಯವಾಗಿ ಅಭಿವೃದ್ಧಿ ಮಾಡಿ, ಪರೀಕ್ಷಿಸಿದೆ. ಇದರಲ್ಲಿ ಪ್ರತಿ ಸೆಕೆಂಡ್ ಗೆ ಒಂದು ಗಿಗಾಬೈಟ್ ಗಿಂತ (GB) ಹೆಚ್ಚು ವೇಗದಲ್ಲಿ ಡೇಟಾ ವರ್ಗಾವಣೆ ಮಾಡುವ ಸಾಮರ್ಥ್ಯ ಇದೆ ಎಂದು ತಿಳಿಸಲಾಗಿದೆ.

 

2500ರಿಂದ 3000 ರುಪಾಯಿಗೆ ರಿಲಯನ್ಸ್ ಜಿಯೋದಿಂದ 5G ಸ್ಮಾರ್ಟ್ ಫೋನ್2500ರಿಂದ 3000 ರುಪಾಯಿಗೆ ರಿಲಯನ್ಸ್ ಜಿಯೋದಿಂದ 5G ಸ್ಮಾರ್ಟ್ ಫೋನ್

ಕ್ವಾಲ್ ಕಾಮ್ ತಂತ್ರಜ್ಞಾನ ಹಾಗೂ ಬೆಂಬಲದೊಂದಿಗೆ ಜಿಯೋದಿಂದ ದೇಶೀಯವಾಗಿ 5G RAN ಉತ್ಪನ್ನವನ್ನು ಅಭಿವೃದ್ಧಿ ಪಡಿಸಲಾಗಿದೆ. ಇದರಲ್ಲಿ ಸೆಕೆಂಡ್ ಗೆ ಒಂದು ಗಿಗಾಬಿಟ್ (Gbps) ಡೇಟಾ ವರ್ಗಾವಣೆ ಸಾಧ್ಯವಾಗಿದೆ ಎಂದು ರಿಲಯನ್ಸ್ ಜಿಯೋದ ಅಧ್ಯಕ್ಷ ಮಾಥ್ಯೂ ಉಮ್ಮನ್ ಅವರು ಯುಎಸ್ ನಲ್ಲಿ ಆಯೋಜಿಸಿದ್ದ ವರ್ಚುವಲ್ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

 
ಜಿಯೋ- ಕ್ವಾಲ್ ಕಾಮ್ ನಿಂದ ಯಶಸ್ವಿ 5G ಪರೀಕ್ಷೆ; 1 Gbps ವೇಗ ಸಾಧನೆ

ಈ ಉತ್ಪನ್ನವನ್ನು ಯುಎಸ್ ನಲ್ಲಿ ಈಗಾಗಲೇ ಪರೀಕ್ಷೆ ಮಾಡಿ, ಸಿದ್ಧಗೊಳಿಸಲಾಗಿದೆ ಎಂದು ಉಮ್ಮನ್ ಅವರು ತಿಳಿಸಿದ್ದಾರೆ. ಅಂದ ಹಾಗೆ ಕ್ವಾಲ್ ಕಾಮ್ ವೆಂಚರ್ಸ್ ನಿಂದ ಈಚೆಗೆ ಜಿಯೋ ಪ್ಲಾಟ್ ಫಾರ್ಮ್ಸ್ ನಲ್ಲಿ 730 ಕೋಟಿ ರುಪಾಯಿ ಹೂಡಿಕೆ ಮಾಡಿದ್ದು, 0.15% ಪಾಲನ್ನು ಖರೀದಿ ಮಾಡಲಾಗಿದೆ.

English summary

Jio And Qualcomm 5G Test Successful With 1 Gbps Speed

Jio platforms- Qualcomm 5G solutions test successful with 1 Gbps achievement. Here is the details.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X